Advertisement

ಸಪ್ಟೆಂಬರ್-ಅಕ್ಟೋಬರ್ ನಲ್ಲಿ ಗೋವಾದಲ್ಲಿ ಮೂರನೇಯ ಅಲೆ ಸ್ಫೋಟ..?

01:15 PM Aug 18, 2021 | Team Udayavani |

ಪಣಜಿ : ಗೋವಾದಲ್ಲಿ ಮೂರನೇಯ ಅಲೆಯು ಸಪ್ಟೆಂಬರ್-ಅಕ್ಟೋಬರ್‍ ನಲ್ಲಿ ಬರುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಭೀತಿ ವ್ಯಕ್ತಪಡಿಸಿದೆ. ಈ ಮೂರನೇಯ ಅಲೆಯು ಪ್ರಮುಖವಾಗಿ ಮಕ್ಕಳಿಗೆ ತಗುಲುವ ಸಾಧ್ಯತೆಯಿದ್ದು, ಇದರಿಂದಾಗಿ ಮಕ್ಕಳಲ್ಲಿ ಕೋವಿಡ್‍ನ ಸೌಮ್ಯ, ಮಧ್ಯಮ ಮತ್ತು ತೀವ್ರ ಸ್ವರೂಪದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆಯು ಆತಂಕ ವ್ಯಕ್ತಪಡಿಸಿದೆ.

Advertisement

ಇದನ್ನೂ ಓದಿ : 2022ರ ದಸರಾ ಹಬ್ಬದ ಮೊದಲೇ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಪೂರ್ಣ : ಪ್ರತಾಪ್ ಸಿಂಹ

ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಗೋವಾ ರಾಜ್ಯ ಕೂಡ ಆತಂಕ ಪಡುವ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಮೂರನೇಯ ಅಲೆಯ ಹರಡುವ ಭೀತಿಯ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಕುರಿತ ವೀಡಿಯೊವನ್ನು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಕುರಿತಂತೆ ಆರೋಗ್ಯ ಇಲಾಖೆಯ ಪ್ರಮುಖರಾದ ಡಾ. ಉತ್ಕರ್ಷ ಬೆತೋಡಕರ್ ರವರು ಮಾಹಿತಿ ನೀಡಿ- ಕೋವಿಡ್ ಮೂರನೇಯ ಅಲೆಯು ಯಾವಾಗ ಬರಲಿದೆ ಎಂಬ ಕುರಿತಂತೆ ಬೇರೆ ಬೇರೆ ತಜ್ಞರ ಅಭಿಪ್ರಾಯ ಭಿನ್ನವಾಗಿದೆ. ಆದರೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ವೀಡಿಯೊ ಬಿಡುಗಡೆಗೊಳಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಇದನ್ನೂ ಓದಿ : ಸುನಂದಾ ಪುಷ್ಕರ್ ಸಾವಿನ ಪ್ರಕರಣ: ಶಶಿ ತರೂರ್ ಎಲ್ಲಾ ಆರೋಪದಿಂದ ಮುಕ್ತ: ದೆಹಲಿ ಕೋರ್ಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next