Advertisement

ಗೋವಾ : ಅಂಬ್ಯುಲೆನ್ಸ್ ನಲ್ಲಿ ಕೋವಿಡ್ ಸೋಂಕಿತರ ಓಡಾಟ ; ಆತಂಕದಲ್ಲಿ ಚೆಕ್‍ಪೋಸ್ಟ್ ಪ್ರದೇಶ

08:14 PM May 03, 2021 | Team Udayavani |

ಪಣಜಿ: ಗೋವಾದಿಂದ ಮಹಾರಾಷ್ಟ್ರದ ಅಹಮದ್‍ನಗರಕ್ಕೆ ಅಂಬ್ಯುಲೆನ್ಸ್ ನಲ್ಲಿ ಹೊರಟಿದ್ದ 4 ಜನರನ್ನು ಮಹಾರಾಷ್ಟ್ರ ಗಡಿಯಲ್ಲಿ ಥರ್ಮಲ್ ಗನ್ ತಪಾಸಣೆ ನಡೆಸಿದಾಗ ನಾಲ್ವರಲ್ಲೂ ಜ್ವರ ಕಾಣಿಸಿಕೊಂಡಿದ್ದು ಮಾತ್ರವಲ್ಲದೆಯೇ ಈ ನಾಲ್ವರೂ ಕೋವಿಡ್ ಸೋಂಕಿತರು ಎಂದು ದೃಢಪಟ್ಟ ನಂತರ ಈ ನಾಲ್ವರನ್ನೂ ಮಹಾರಾಷ್ಟ್ರಕ್ಕೆ ಪ್ರವೇಶಾವಕಾಶ ನೀಡದೆಯೇ ಗೋವಾಕ್ಕೆ ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ.

Advertisement

ಈ ನಾಲ್ವರ ಆಕ್ಸಿಜನ್ ಪ್ರಮಾಣದಲ್ಲೂ ಕೊರತೆಯಿರುವುದು ಕಂಡುಬಂದಿದೆ. ತಪಾಸಣೆ ನಡೆಸಿದಾಗ ಈ ನಾಲ್ವರೂ ಕೋವಿಡ್ ಸೋಂಕಿತರು ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಇವರನ್ನು ಗೋವಾಕ್ಕೆ ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಗೋವಾ ಮಹಾರಾಷ್ಟ್ರ ಗಡಿ ಭಾಗದಲ್ಲಿ ಆತಂಕ ಮನೆಮಾಡಿದ್ದು ಚೆಕ್‍ಪೋಸ್ಟ್ ಪ್ರದೇಶವನ್ನು ಸ್ಯಾನಿಟೈಜೇಶನ್ ಮಾಡಲಾಗಿದೆ.

ಅಂಬ್ಯುಲೆನ್ಸ್ ನಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ನಾಲ್ಕೂ ಜನ ಕೋವಿಡ್ ಸೋಂಕಿತರು ಎಂದು ಖಚಿತವಾದ ನಂತರ ಸಾವಂತವಾಡಿ ತಹಶೀಲ್ದಾರ್ ರಾಜಾರಾಮ ಮಾತ್ರೆ ರವರಿಗೆ ಈ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಬಂದ ತಹಶೀಲ್ದಾರ್ ರವರು ಈ ನಾಲ್ಕೂ ಜನರನ್ನು ಗೋವಾದಲ್ಲಿರುವ ನಿಮ್ಮ ನಿವಾಸಕ್ಕೆ ತೆರಳುವಂತೆ ಸೂಚನೆ  ನೀಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ಗೋವಾದಿಂದ 4 ಜನ ಕೋವಿಡ್ ಸೋಂಕಿತರನ್ನು ಕರೆದುಕೊಂಡು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಕಾರಣವೇನು ಎಂಬುದು ಮಾತ್ರ ಇದುವರೆಗೂ ತಿಳಿದುಬಂದಿಲ್ಲ. ಆದರೆ ಕೋವಿಡ್ ಸೋಂಕಿತರು ಅಂಬ್ಯುಲೆನ್ಸ್ ನಲ್ಲಿ ಓಡಾಟ ನಡೆಸಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next