Advertisement

Goa: ಜುವಾರಿ ನದಿಯ ಮೇಲಿನ ಸೇತುವೆಯ ಎರಡನೇ ಪಥದ ನಿರ್ಮಾಣ ಪೂರ್ಣ

05:17 PM Dec 15, 2023 | Pranav MS |

ಪಣಜಿ: ಜುವಾರಿ ನದಿಯ ಮೇಲಿನ ಸೇತುವೆಯ ಎರಡನೇ ಪಥದ ನಿರ್ಮಾಣ ಪೂರ್ಣಗೊಂಡಿದೆ. ಎರಡನೇ ಲೇನ್‍ನಲ್ಲಿ ಒಟ್ಟು 224 ಕೇಬಲ್‍ಗಳನ್ನು ಬಳಸಲಾಗಿದ್ದು, ಎರಡೂ ಬದಿಗಳಲ್ಲಿ 112 ಕೇಬಲ್‍ಗಳಿವೆ. ಇದು ಕೇಬಲ್ ಸ್ಟೆಡ್ ಸೇತುವೆಯಾಗಿದೆ, ಇದರ ಜೀವಿತಾವಧಿ 100 ವರ್ಷಗಳಿಗಿಂತ ಹೆಚ್ಚು ಎಂದು ಹೇಳಲಾಗಿದೆ. ಡಿಸೆಂಬರ್ 22 ರಂದು ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಲೇನ್ ಉದ್ಘಾಟನೆಗೊಳ್ಳಲಿದೆ. ಇದೀಗ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

Advertisement

ಈ ನಿಟ್ಟಿನಲ್ಲಿ ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಹಿರಿಯ ಯೋಜನಾಧಿಕಾರಿ ದ್ಯಾನೇಶ್ವರ ದೇಶಮುಖ್ ಮಾತನಾಡಿ- ಈ ಯೋಜನೆಗೆ 545.4 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದೆ. ಹೊಸ ಜುವಾರಿ ಸೇತುವೆಯ ಮೊದಲ ಲೇನ್ ಅನ್ನು ಕಳೆದ ವರ್ಷ ಡಿಸೆಂಬರ್‍ನಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಈಗ ಎರಡನೇ ಲೇನ್ ಕೂಡ ಸಿದ್ಧವಾಗಿದೆ. ಅಂತಿಮವಾಗಿ, ಇದನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಮೊದಲಿಗೆ ನಾವು ಸಂಯೋಜಿತ ರಚನೆಯನ್ನು ನಿರ್ಮಿಸಿದ್ದೇವೆ. ನಂತರ ಬಿಟುಮಿನಸ್ ಕಾಂಕ್ರೀಟ್ ಹಾಕುವುದು, ಸೇತುವೆಯ ಮೇಲೆ ದೀಪ, ಕ್ರ್ಯಾಶ್ ಬ್ಯಾರಿಯರ್ ಸರಿಪಡಿಸುವುದು, ಬ್ರೀಜ್ ಲೋಡ್ ಪರೀಕ್ಷೆ ಮುಂತಾದ ಪರೀಕ್ಷೆಗಳನ್ನು ಸಹ ನಡೆಸಲಾಯಿತು ಎಂದರು.

ಈ ಸೇತುವೆ ಕಾಮಗಾರಿಗೆ ಸುಮಾರು 3 ಸಾವಿರ ಕಾರ್ಮಿಕರು ಬೇಕಾಗಿದ್ದರು. ಇದಲ್ಲದೆ ಎಂಜಿನಿಯ ಳು ಮತ್ತು ಇತರ ಉದ್ಯೋಗಿಗಳೂ ಸೇರಿದ್ದಾರೆ. ಹೆಚ್ಚಿನ ಕಾರ್ಮಿಕರನ್ನು ಒಡಿಶಾ ಮತ್ತು ಉತ್ತರ ಪ್ರದೇಶದಿಂದ ಕರೆತರಲಾಗಿದೆ. ಈ ಕಾರ್ಮಿಕರು ಕಳೆದ ಹಲವು ತಿಂಗಳುಗಳಿಂದ ಹೊಸ ಜುವಾರಿ ಸೇತುವೆಯ ಕೆಲಸದಲ್ಲಿ ಹಗಲಿರುಳು ನಿರತರಾಗಿದ್ದರು.

ಸೇತುವೆಯ ಪರೀಕ್ಷೆ ಯಶಸ್ವಿಯಾಗಿದ್ದು, ಈ ಸೇತುವೆಯನ್ನು ದಾಟಲು ಭಾರಿ ವಾಹನಗಳಿಗೆ ಗಂಟೆಗೆ 80 ಕಿಮೀ ಮತ್ತು ದ್ವಿಚಕ್ರ ವಾಹನಗಳಿಗೆ ಗಂಟೆಗೆ 60 ಕಿಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ದೇಶಮುಖ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next