Advertisement

ವಿಶ್ವಾಸಮತದ ಅಗ್ನಿ ಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್

08:04 AM Mar 20, 2019 | Sharanya Alva |

ಪಣಜಿ: ಗೋವಾದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಮಧ್ಯರಾತ್ರಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ನಾಯಕ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ವಿಶ್ವಾಸಮತ ಅಗ್ನಿಪರೀಕ್ಷೆಯಲ್ಲಿ ಬುಧವಾರ ಗೆಲುವು ಸಾಧಿಸಿದೆ.

Advertisement

40 ವಿಧಾನಸಭಾ ಬಲದ ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಸಾವಂತ್ ಪರವಾಗಿ 20 ಮತಗಳು ಚಲಾವಣೆಯಾಗಿದ್ದು, ವಿರೋಧವಾಗಿ 15 ಮತಗಳು ಬಿದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಸರ್ಕಾರ ರಚನೆಗೆ ಬೇಕಾಗಿರುವ 20 ಶಾಸಕರ ಸಂಖ್ಯೆಯನ್ನು ಬಿಜೆಪಿ ಪಡೆದಂತಾಗಿದೆ.

11 ಬಿಜೆಪಿ ಶಾಸಕರು, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ 3 ಶಾಸಕರು, ಗೋವಾ ಫಾರ್ವರ್ಡ್ ಪಕ್ಷದ 3 ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರು ಸಾವಂತ್ ಗೆ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ 14 ಶಾಸಕರು ಹಾಗೂ ಎನ್ ಸಿಪಿಯ ಓರ್ವ ಶಾಸಕರು ವಿರೋಧ ವ್ಯಕ್ತಪಡಿಸಿ ಮತ ಚಲಾಯಿಸಿದ್ದರು.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಪ್ರಸ್ತುತ ಬಲ 36ಕ್ಕೆ ಇಳಿದಿದೆ. ಇಬ್ಬರು ಬಿಜೆಪಿ ಶಾಸಕರ ನಿಧನ(ಸಿಎಂ ಮನೋಹರ್ ಪರ್ರಿಕರ್, ಫ್ರಾನ್ಸಿಸ್ ಡಿಸೋಜಾ) ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಸದನದ ಬಲ 36ಕ್ಕೆ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ 36 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಯಲ್ಲಿ ಬಿಜೆಪಿ 20 ಸ್ಥಾನ ಪಡೆದು ಮತ್ತೆ ಅಧಿಕಾರದ ಗದ್ದುಗೆ ಏರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next