ಪಣಜಿ: ಗೋವಾದ ಗೇರುಬೀಜದ ರುಚಿ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಇದರಿಂದಾಗಿ ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರು ಗೇರುಬೀಜ ಖರೀದಿಸದೆಯೇ ಹೋಗುವುದಿಲ್ಲ. ಗೋವಾದ ಗೇರುಬೀಜವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಗೋವಾದ ಗೇರುಬೀಜವನ್ನು ಜೂನ್ ಕೊನೆಯ ವಾರದಲ್ಲಿ ವಿದೇಶಕ್ಕೆ 1000 ಟನ್, ಭಾರತದ ವಿವಿಧ ರಾಜ್ಯಗಳಿಗೆ ಸೇರಿ 2000 ಟನ್ ಗೇರು ಬೀಜ ಪೂರೈಕೆಯಾಗಲಿದೆ ಎಂದು ಗೋವಾ ರಾಜ್ಯ ಕಾಜೂ ಉತ್ಪಾದಕ ಸಂಘಟನೆಯ ಪ್ರಮುಖ ಸಿದ್ಧಾರ್ಥ ಜಾಂಟಯೆ ತಿಳಿಸಿದ್ದಾರೆ.
ಇದನ್ನೂ ಓದಿ : ಮದುವೆ ಮಾಡುವುದು ತಡವಾದ್ದರಿಂದ ಮೊಬೈಲ್ ಟವರ್ ಕಂಬ ಏರಿ ಕುಳಿತ ಯುವಕ
ಕೋವಿಡ್ ಪರಿಸ್ಥಿತಿಯಿಂದಾಗಿ ಗೇರುಬೀಜಗಳ ರಫ್ತಿನಲ್ಲಿ ವ್ಯತ್ಯಾಸ ಉಂಟಾಗಿತ್ತು. ಈ ವರ್ಷ ಗೋವಾದ ಗೇರುಬೀಜಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು, ಕೋವಿಡ್ ಎರಡನೇಯ ಅಲೆಯಿಂದಾಗಿ ಗೋವಾದ ಗೇರುಬೀಜವನ್ನು ರಫ್ತು ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ಇದೀಗ ಪ್ರಸಕ್ತ ತಿಂಗಳಲ್ಲಿ ರಪ್ತು ಮಾಡಲಾಗುತ್ತಿದೆ. ಕಳೆದ ವರ್ಷ ಗೇರು ಬೀಜವನ್ನು ವಿದೇಶಕ್ಕೆ ರಫ್ತು ಮಾಡಲಾಗಿರಲಿಲ್ಲ. ಪ್ರಸಕ್ತ ತಿಂಗಳು ಗೋವಾದ ಗೇರುಬೀಜ ವಿದೇಶಕ್ಕೆ ರಫ್ತಾಗಲಿದ್ದು, ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಬರುತ್ತದಾ? ಉಡುಪಿಯ ವೈರಲ್ ವಿಡಿಯೋಗೆ DC ಸ್ಪಷ್ಟನೆ