Advertisement

ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆ: ಮತದಾನಕ್ಕೆ ಎಂ3 ಆಧುನಿಕ ಇವಿಎಂ ಮಷಿನ್

11:57 AM Oct 05, 2021 | Team Udayavani |

ಪಣಜಿ: ಗೋವಾ ವಿಧಾನಸಭಾ ಚುನಾವಣೆಯು ಜನವರಿ 2022 ರಲ್ಲಿ ನಡೆಯಲಿರುವ ಸಾಧ್ಯತೆಯನ್ನು ಚುನಾವಣಾ ಆಯೋಗ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಂ3 ಆಧುನಿಕ ಇವಿಎಂ ಮಷಿನ್ ಗೋವಾಕ್ಕೆ ದಾಖಲಾಗಿದೆ. ಅಕ್ಟೋಬರ್ 26 ರಂದು ಈ ಮಷಿನ್‍ನ ಪ್ರಾಥಮಿಕ ತಪಾಸಣೆ ನಡೆಸಲಾಗುವುದು. ನಂತರ ಈ ಮಷಿನ್ ರಾಜಕೀಯ ಪಕ್ಷ ಹಾಗೂ ಜನ ಸಾಮಾನ್ಯರಿಗೆ ವೀಕ್ಷಣೆಗೆ ಇಡಲಾಗುವುದು ಎಂದು ಚುನಾವಣಾಧಿಕಾರಿ ನಾರಾಯಣ ಸಾವಂತ್ ಮಾಹಿತಿ ನೀಡಿದರು.

Advertisement

ಈ ಕುರಿತಂತೆ ಚರ್ಚೆ ನಡೆಸಲು ಮುಖ್ಯ ಚುನಾವಣಾಧಿಕಾರಿ ಕುಣಾಲ್ ರವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷೀಯ ಬೈಠಕ್ ನಡೆಸಲಾಯಿತು. ಮುಖ್ಯ ಚುನಾವಣಾ ಆಯೋಗದ ಕಾರ್ಯಾಲಯದಲ್ಲಿ ನಡೆದ ಬೈಠಕ್‍ನಲ್ಲಿ ಬಿಜೆಪಿ, ರಾಷ್ಟ್ರೀಯ ಕಾಂಗ್ರೆಸ್, ಗೋವಾ ಫೊರ್‍ವರ್ಡ್, ರಾಷ್ಟ್ರವಾಧಿ ಕಾಂಗ್ರೇಸ್, ಎಂಜಿಪಿ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಬೈಠಕ್‍ನ ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾಧಿಕಾರಿ ನಾರಾಯಣ ಸಾವಂತ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮತದಾರಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ಮತ್ತು ಹೆಸರು ರದ್ಧುಗೊಳಿಸಲು ನವೆಂಬರ್ 1 ರಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನವೆಂಬರ್ 20-21 ರಂದು ಮತ್ತು 27 -28 ರಂದು ಪ್ರತಿಯೊಂದು ಬೂತ್ ನಲ್ಲಿ ಚುನಾವಣಾಧಿಕಾರಿಗಳು ಉಪಸ್ಥಿತರಿರುವರು. 5 ಜನವರಿ 2022 ರಂದು ಅಂತಿಮ ಮತದಾರಪಟ್ಟಿಯನ್ನು ಘೋಷಿಸಲಾಗುವುದು ಎಂದು ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ನಾರಾಯಣ ಸಾವಂತ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next