Advertisement

ಗೋವಾ ಆಲ್‌ರೌಂಡರ್‌ ಶಾದಾಬ್‌ ಜಕಾತಿ ನಿವೃತ್ತಿ

10:07 AM Dec 28, 2019 | Team Udayavani |

ಪಣಜಿ: ಗೋವಾದ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಶಾದಾಬ್‌ ಜಕಾತಿ ಎಲ್ಲ ಮಾದರಿಯ ಕ್ರಿಕೆಟಿಗೆ ಶುಕ್ರವಾರ ನಿವೃತ್ತಿ ಘೋಷಿಸಿದರು.

Advertisement

20 ವರ್ಷಗಳ ಸುದೀರ್ಘ‌ ಕ್ರಿಕೆಟ್‌ ಬಾಳ್ವೆಯಲ್ಲಿ ಜಕಾತಿ 92 ಪ್ರಥಮ ದರ್ಜೆ ಪಂದ್ಯ, 82 ಲಿಸ್ಟ್‌ ಎ ಪಂದ್ಯಗಳನ್ನಾಡಿದ್ದರು. ಜತೆಗೆ 91 ಟಿ20 ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದರು. ಸುಮಾರು 400ರಷ್ಟು ವಿಕೆಟ್‌ ಉರುಳಿಸಿದ ಸಾಧನೆ ಜಕಾತಿ ಅವರದ್ದಾಗಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನೂ ಪ್ರತಿನಿಧಿಸಿದ್ದರು.

ಧೋನಿ ಜತೆ ಆಡಿದ್ದು ಮರೆಯಲಾಗದ ಕ್ಷಣ
“ಎಲ್ಲದಕ್ಕೂ ಒಂದು ಕೊನೆ ಎಂಬುದಿರುತ್ತದೆ. ಈಗ ನನ್ನ ಕ್ರಿಕೆಟ್‌ ಸರದಿ. ಈ ಬಗ್ಗೆ ಕೆಲವು ತಿಂಗಳಿಂದ ಯೋಚಿಸುತ್ತ ಇದ್ದೆ. ಇಂದು ನನ್ನ ನಿರ್ಧಾರ ಪ್ರಕಟಿಸುತ್ತಿದ್ದೇನೆ’ ಎಂದು ಶಾದಾಬ್‌ ಜಕಾತಿ ಹೇಳಿದರು. ಧೋನಿ ತಂಡದಲ್ಲಿ ಐಪಿಎಲ್‌ ಆಡಿದ್ದು ಮರೆಯಲಾಗದ ಅನುಭವ ಎಂದೂ ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next