ದೇವನಹಳ್ಳಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗಬೇಕಾದ ಸೌಲಭ್ಯ ಪಡೆದುಕೊಳ್ಳಲು ಕಾರ್ಮಿಕ ಅದಾಲತ್‌ನ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ. ಮಧುಸೂದನ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಕಾರ್ಮಿಕ ಅದಾಲತ್-02 ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಮಂಡಳಿಯಿಂದ ದೊರೆಯಬಹುದಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಕಾರ್ಮಿಕ ಇಲಾಖೆಯಲ್ಲಿ ಮಂಜೂರಾಗದೇ ಬಾಕಿ ಉಳಿದಿರುವ ಅರ್ಜಿ ಜಿಲ್ಲಾ ಕಾರ್ಮಿಕ ಅದಾ ಲತ್-02ನಲ್ಲಿ ಸಂಧಾನದ ಮೂಲಕ ಬಗೆಹರಿ ಸಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ ಎಂದರು.
ತಾಲೂಕಾದ್ಯಂತ ಸಂಚಾರ: ಕಾರ್ಮಿಕರು ಸರ್ಕಾರದಿಂದ ದೊರೆಯುವ ಸವಲತ್ತು ಸದು ಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ಅದಾಲತ್ ಕುರಿತು ಅರಿವು ಮೂಡಿಸುವ ಪ್ರಚಾರ ವಾಹನ ತಾಲೂಕಾದ್ಯಂತ ಸಂಚರಿಸಲಿದೆ ಎಂದು ಹೇಳಿದರು.
ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕಿ ಅಂಬಿಕಾ ಮಾತನಾಡಿ, ಕಾರ್ಮಿಕರ ಸಮಸ್ಯೆ ಮತ್ತು ಪ್ರಕರಣ ಬಾಕಿಯಿದ್ದಲ್ಲಿ ತಾಲೂಕಿನ ಕಾರ್ಮಿಕ ನಿರೀ ಕ್ಷಕರ ಕಚೇರಿ ಅಥವಾ ಕಾರ್ಮಿಕ ಅಧಿಕಾರಿಗಳ ಕಚೇ ರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಕಾರ್ಮಿಕ ಅದಾಲತ್ ನ ನೆರವು ಪಡೆಯಬಹುದು.ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಗೊಳಿ ಸಲಾಗುವುದು ಎಂದರು.
ಕಾರ್ಮಿಕರ ನೋಂದಣಿ ಅರ್ಜಿ ಬಾಕಿ: ಅರ್ಹ ಕಾರ್ಮಿಕರು ಸೌಲಭ್ಯ ಪಡೆಯುವಂತೆ ಕಾರ್ಮಿಕ ಅದಾಲತ್‌ನಲ್ಲಿ ಕಾರ್ಮಿಕರು ಸದುಪ ಯೋಗ ಪಡಿಸಿಕೊಳ್ಳಬೇಕು. ತಾಲೂಕಿನಲ್ಲಿ 600 ಕಟ್ಟಡ ಕಾರ್ಮಿಕರ ನೋಂದಣಿ ಅರ್ಜಿ ಬಾಕಿಯಿದ್ದು, ಅವುಗಳನ್ನು ವಿಲೇವಾರಿಯಾಗಬೇಕಿದೆ. ರಾಜ್ಯ ಕಾರ್ಮಿಕ ಇಲಾಖೆ ಆಯುಕ್ತರು ಹಾಗೂ ಸಚಿವರ ಆದೇಶದ ಮೇರೆಗೆ ಕಾರ್ಮಿಕ ಅದಾಲತ್ ಮಾಡಲಾಗುತ್ತಿದೆ ಎಂದರು. ಡಾಟಾ ಎಂಟ್ರಿ ಆಪರೇಟರ್ ಮುರಳಿ, ಅನ್ನಪೂ ರ್ಣೇಶ್ವರಿ
ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘದ ಅಧ್ಯಕ್ಷ ಗೋಪಾಲ್ ದಾಸ್ ಹಾಗೂ ಮತ್ತಿತರರು ಇದ್ದರು.
ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ
ಕಾರ್ಮಿಕ ಅದಾಲತ್ ಕುರಿತು ಜು.15ರಿಂದ ಆಗಸ್ಟ್ 15ರವರೆಗೆ ಅರಿವು ಮೂಡಿಸಲಾಗುವುದು. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಅದಾಲತ್‌ನಲ್ಲಿ ಪಾಲ್ಗೊಂಡು ಬಾಕಿಯಿರುವ ಎಲ್ಲಾ ಪ್ರಕರಣ ಹಾಗೂ ಅರ್ಜಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ. ಮಧುಸೂದನ್ ಹೇಳಿದರು.