Advertisement

ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ಕೆ ಮುಂದಾಗಿ : ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಸೂಚನೆ

04:24 PM Nov 03, 2021 | Team Udayavani |

ನವದೆಹಲಿ : ಕೋವಿಡ್ ಲಸಿಕೆಗಳನ್ನು ಈಗ ಮನೆ ಮನೆಗೆ ತೆಗೆದುಕೊಂಡು ಹೋಗಬೇಕು ಜೊತೆಗೆ ಎರಡನೇ ಡೋಸ್ ಲಸಿಕೆ ಮೇಲೆ ಸಮಾನ ಗಮನ ನೀಡಬೇಕು ಎಂದು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

Advertisement

ದೇಶದಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಲಸಿಕೆ ಪ್ರಮಾಣ ಹೊಂದಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು ಇದುವರೆಗೂ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆತರುತ್ತಿದ್ದಿರಿ ಆದರೆ ಇನ್ನು ಮುಂದೆ ನೀವೇ ಲಸಿಕೆಯನ್ನು ಮನೆ ಮನೆಗೆ ತೆರಳಿ ನೀಡಬೇಕು ಇದರೊಂದಿಗೆ ಜಿಲ್ಲೆಯ ಲಸಿಕೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಲಸಿಕೆ ಅಗತ್ಯತೆಯ ಕುರಿತು ಅಭಿಯಾನ ನಡೆಸಿ ಈ ಅಭಿಯಾನಕ್ಕಾಗಿ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಮುಖಂಡರನ್ನು ಸಹ ತೊಡಗಿಸಿಕೊಂಡು ಲಸಿಕೆಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಕಡಿಮೆ ಲಸಿಕೆ ಪಡೆದ 40 ಕ್ಕೂ ಹೆಚ್ಚು ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಹಾನಗಲ್ ನಲ್ಲಿ ಡಿಕೆಶಿ,ಸಿದ್ಧರಾಮಯ್ಯ ಜೇಬಿಗೆ ನೋಟು ಇಟ್ಟು ವೋಟ್ ಕೇಳಿದ್ರಾ?: ಈಶ್ವರಪ್ಪ

Advertisement

“ಉಚಿತ ಲಸಿಕೆ ಅಭಿಯಾನದ ಅಡಿಯಲ್ಲಿ, ನಾವು ಒಂದು ದಿನದಲ್ಲಿ ಸುಮಾರು 2.5 ಕೋಟಿ ಡೋಸ್‌ ಲಸಿಕೆ ನೀಡಿದ್ದೇವೆ. ಇದು ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.

ಈಗ ಪ್ರತಿ ಮನೆಗೂ ಲಸಿಕೆ, ಮನೆ ಬಾಗಿಲಿಗೆ ಲಸಿಕೆ ಎಂಬ ಧ್ಯೇಯವಾಕ್ಯದೊಂದಿಗೆ ನಾವು ಪ್ರತಿ ಮನೆಯನ್ನು ತಲುಪಬೇಕು ಎಂದು ಪ್ರಧಾನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next