Advertisement

ಸರ್ಕಾರದ ನೆರವಿಗೆ ಕೈ ಚಾಚದೇ ಗೋ ಸಂರ್ವರ್ಧನೆಗೆ ಮುಂದಾಗಿ

02:54 PM Dec 19, 2017 | |

ವಿಜಯಪುರ: ದೇಶಿ ಗೋವುಗಳ ಸಂರಕ್ಷಣೆ ಆಗಬೇಕಿದ್ದರೆ, ಗೋವು ಪಾಲನೆ ಉದ್ಯಮವಾಗಿ ರೂಪುಗೊಳ್ಳಬೇಕು. ಸರ್ಕಾರದ ನೆರವಿಗೆ ಕೈ ಚಾಚದೇ ಗೋವು ಗೋಸಂರ್ವರ್ಧನೆಗೆ ಆದ್ಯತೆ ನೀಡಲು ರೈತರನ್ನು ಪ್ರೇರೇಪಿಸಬೇಕು. ಗೋ ಪತಂಜಲಿಯನ್ನು ಉದ್ಯಮವಾಗಿ
ಬೆಳೆಸುವುದು ನಮ್ಮ ಉದ್ದೇಶ. ಇದಕ್ಕಾಗಿ ರಾಮಚಂದ್ರಾಪುರ ಮಠ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡಿದೆ ಎಂದು ರಾಘವೇಶ್ವರ ಭಾರತಿ ಶ್ರೀಗಳು ಹೇಳಿದರು.

Advertisement

ಸೋಮವಾರ ಎಳ್ಳ ಅಮಾವಾಸ್ಯೆ ಸಂದರ್ಭದಲ್ಲಿ ನಗರದಲ್ಲಿ ಗೋ ಸಂರಕ್ಷಣೆ ಜಾಗೃತಿ ಜಾಥಾ ಬಳಿಕ ಸಿದ್ದೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಅನ್ನ ನೀಡಿದ ಭೂಮಿಗೆ ಕೃತಜ್ಞತೆ ಸಲ್ಲಿಸುವ ಚರಗ ಚೆಲ್ಲುವ ಪರ್ವಕಾಲದಲ್ಲಿ ಮನುಷ್ಯನಿಗೆ ತನ್ನ ಜೀವನವೆ ಧಾರೆ ಎರೆಯುವ ಗೋವುಗಳ ಸಂರಕ್ಷಣೆ ಜಾಥಾ-ಸಮಾವೇಶ ಐತಿಹಾಸಿಕ ವಿಜಯಪುರ ನಗರದಲ್ಲಿ ನಡೆಯುತ್ತಿರುವುದು ಮಹತ್ವದ ಸಂಗತಿ ಎಂದರು.

ದೇಶದ ಸಂಪತ್ತಿನಲ್ಲಿ ಪ್ರಮುಖವಾಗಿರುವ ಗೋವುಗಳ ಸಂರಕ್ಷಣೆ ದೇಶದ ಧರ್ಮ ಹಾಗೂ ಸಂಸ್ಕೃತಿಗೆ ನೀಡಬಹುದಾದ ಅತಿದೊಡ್ಡ ಸೇವೆ ಎಂದರೆ ಗೋ ಸೇವೆ. ಭಾರತ ಭವಿಷ್ಯದ ಪೀಳಿಗೆಗೆ ಬಹು ದೊಡ್ಡ ಕೊಡುಗೆ ಆಗಲಿದೆ. ಸ್ವಾರ್ಥಮುಕ್ತ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೂ ಮಿಗಿಲಾದ ಆಂದೋಲನ ರೂಪಿಸಿರುವ ಶ್ರೀಮಠದ ಆಶಯ ಈಡೇರಿಸಲು ರೈತರು ಮಾತ್ರವಲ್ಲ ಸಮಾಜದ ಎಲ್ಲರೂ ಕೈ ಜೋಡಿಸಬೇಕು. ಗೋವು ಸಾಕಲಾಗದ ಪರಿಸ್ಥಿತಿ ನಿರ್ಮಾಣವಾದಲ್ಲಿ ರೈತರು ನಮ್ಮ ಶ್ರೀಮಠದ ಗೋಶಾಲೆಗೆ ನೀಡಿದರೂ ನಾವು ಸಾಕುತ್ತೇವೆ. ಇದಕ್ಕಾಗಿ ಗೋ ಸಂಜೀವಿನಿ ನಿ  ಸ್ಥಾಪಿಸಿ ಗೋಮಾತೆ ಸಂರಕ್ಷಣೆಗೆ ರಾಮಚಂದ್ರಾಪುರ ಮಠ ತನ್ನ ಬದ್ಧತೆ ತೋರಲಿದೆ ಎಂದರು.

ಮನುಷ್ಯ ಮಾತ್ರ ಎಲ್ಲ ಜೀವಿಗೂ ಬದುಕುವ ಹಕ್ಕಿದ್ದು, ಯಾವುದೇ ಜೀವಿಯನ್ನು ಕೊಲ್ಲುವ ಅಕಾರ ಯಾರಿಗೂ ಇಲ್ಲ. ಹೀಗಾಗಿ ಗೋ ಸಂರಕ್ಷಣೆ ಅಗತ್ಯದ ಕುರಿತಿ ಪ್ರತಿ ಮನೆಗೆ ಆಂದೋಲನದ ಮಾದರಿಯಲ್ಲಿ ತಲುಪಿಸುವ ಮಹ್ವದ ಕಾರ್ಯವನ್ನು ಗೋಕಿಂಕರರು ಮಾಡಬೇಕು.

ಎತ್ತು ರೈತನ ಬದುಕನ್ನು ಮಾತ್ರವಲ್ಲದೇ ದೇಶದ ಆರ್ಥಿಕತೆಯನ್ನೇ ಎತ್ತುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಕೃಷಿಯಲ್ಲಿ ಯಾಂತ್ರಿಕ ಜೀವನ ಎಂದಿಗೂ ಗೋವು-ಎತ್ತುಗಳಿಗೆ ಸಮನಾಗಲು ಸಾಧ್ಯವಿಲ್ಲದ ಕಾರಣ ಹೋಲಿಕೆಯೂ ಅಸಮಂಜಸ. ಯಂತ್ರಗಳಿಂದ ಮಾಡುವ ಉಳುಮೆ ಕೃಷಿಯಲ್ಲಿ ಸೂಕ್ಷ್ಮಜೀವಿಗಳನ್ನು ನಾಶ ಮಾಡುತ್ತದೆ. ಈ ಹಿನ್ನೆಲೆಯಲ್ಲಿಯೇ ಖ್ಯಾತ ವಿಜ್ಞಾನಿ ಐನ್‌ಸ್ಟಿàನ್‌ ಅವರು ಭಾರತದ ಸಿ.ವಿ.ರಾಮನ್‌ ಅವರಿಗೆ ಪತ್ರ ಬರೆದು ಗೋ ಆಧಾರಿತ ಕೃಷಿಯನ್ನೇ ಎಂದಿಗೂ ಮಾಡಬೇಕು ಎಂದು ಹೇಳಿದ್ದನ್ನು ಸ್ಮರಿಸಿದರು. 

Advertisement

ಗೋವು ಎಲ್ಲ ಧರ್ಮೀಯರ ಪಾಲಿಗೂ ಪವಿತ್ರ. ಆದ್ದರಿಂದ ಗೋಸಂರಕ್ಷಣೆ ಸಮಸ್ತ ಭಾರತೀಯರ ಹೊಣೆ. ಗೋಹತ್ಯೆಯನ್ನು ಭಾರತದಲ್ಲಿ ಸಂಪೂರ್ಣ ನಿಷೇಧಿಸಿ, ಕಠಿಣ ಕಾನೂನು ತರುವುದು ಸರ್ಕಾರದ ಕರ್ತವ್ಯ. ಇದಕ್ಕಾಗಿ ಭಾರತೀಯರ ಈ ಭಾವನೆಯನ್ನು ಆಳುವ ವರ್ಗಕ್ಕೆ ತಿಳಿಸಬೇಕಿದೆ. ಹಾಗಂತ ರಾಜಕೀಯ ನಾಯಕರ ಮನೆ ಅಲೆಯದೇ ಜನರ ಮನೆಗೆ ಅಲೆದು ಜಾಗೃತಿ ಮೂಡಿಸುತ್ತಿದ್ದೇವೆ. ಸಮಾಜವೇ ಗೋ ಸಂರಕ್ಷಣೆಗೆ ಆಗ್ರಹ ಮಾಡಿ, ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತದೆ ಎಂದರು. 

ಬಾಗಲಾಂವ್‌ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು, ಕೊಲ್ಹಾರ ದಿಂಗಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ಮೇಲ್ಮನೆ ಸದಸ್ಯ ಬಸವನಗೌಡ ಪಾಟೀಲ ಯತ್ನಾಳ ಮಾತನಾಡಿದರು. ರಾಮಚಂದ್ರಾಪುರ ಮಠದ ಜಿಲ್ಲಾ ಸಂಪರ್ಕಾಧಿ ಕಾರಿ ಕೆ.ಪಿ. ಅಮ್ಮಂಗಲ್ಲು, ಬಸವರಾಜ ಶ್ರೀಗಳು, ಶಿವಾನಂದ ಶ್ರೀಗಳು, ಆನಂದ ಕುಲಕರ್ಣಿ, ರಾಜ್ಯ ಗೋಯಾತ್ರೆ ಸಂಚಾಲಕ ಸಾರಂಗ ಶ್ರೀನಾಥ, ಗುರು ಗಚ್ಚಿನಮಠ ಇದ್ದರು. ವಿನಾಯಕ ತಲವಟ್ಟ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next