Advertisement

ಗೋವಾ ಕಾಂಗ್ರೆಸ್‌ ನಾಯಕರ ಮನವೊಲಿಸಲು ಮುಖ್ಯಮಂತ್ರಿ ಮುಂದಾಗಲಿ

06:00 AM Dec 29, 2017 | Team Udayavani |

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರು ಗೋವಾ
ಕಾಂಗ್ರೆಸ್‌ ನಾಯಕರ ಮನವೊಲಿಸಿದ ತಕ್ಷಣ ಮಾತುಕತೆಗೆ ವೇದಿಕೆ ಸಿದಟಛಿಪಡಿಸಲು ರಾಜ್ಯ ಬಿಜೆಪಿ ಸಿದಟಛಿವಿದೆ ಎಂದು
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

Advertisement

ಈ ಹಿಂದೆ ಸರ್ವಪಕ್ಷಗಳ ಸಭೆಯಲ್ಲಿ ನೀಡಿದ ಭರವಸೆಯಂತೆ ಮಹದಾಯಿ ಮಾತುಕತೆಗೆ ಗೋವಾ ಮುಖ್ಯಮಂತ್ರಿಗಳನ್ನು ಬಿಜೆಪಿ ಒಪ್ಪಿಸಿದೆ. ಇದೀಗ ಮಾತುಕತೆ ಮತ್ತು ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಆಂದೋಲನಕ್ಕೆ ಮುಂದಾಗಿರುವ ಗೋವಾ ಕಾಂಗ್ರೆಸ್ಸಿಗರನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ನಾಯಕರು ಒಪ್ಪಿಸಲಿ. ಮಾತುಕತೆಗೆ ನಾವು
ವೇದಿಕೆ ಸಿದಟಛಿಪಡಿಸುತ್ತೇವೆ ಎಂದರು.

ಪುನರಾವಲೋಕನ: ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿಯಿಂದ ರಾಜ್ಯಕ್ಕೆ ನೀರು ಹರಿಸುವ ವಿಚಾರದಲ್ಲಿ ಬಿಜೆಪಿಯ ಬದಟಛಿತೆ ಪ್ರಶ್ನಿಸುವ ಮೊದಲು ಕಾಂಗ್ರೆಸ್‌ನವರು ತಾವು ಈ ನಿಟ್ಟಿನಲ್ಲಿ ಮಾಡಿದ ನಿರ್ಲಕ್ಷ್ಯವನ್ನು ಒಮ್ಮೆ ಪುನರಾವಲೋಕನ ಮಾಡಿಕೊಳ್ಳಲಿ. ಮಹದಾಯಿಯಿಂದ ರಾಜ್ಯಕ್ಕೆ ಕುಡಿಯುವ
ನೀರಿಗಾಗಿ ಮೀಸಲಾಗಿರುವ 7.56 ಟಿಎಂಸಿ ನೀರು ಹೊರತುಪಡಿಸಿ ಇತರೆ ನೀರು ಹಂಚಿಕೆಯನ್ನು ಮಾತ್ರ ನ್ಯಾಯಾಧಿಕರಣಕ್ಕೆ ವಹಿಸಿ ಎಂಬ ಬಿಜೆಪಿ ಕೋರಿಕೆ ತಿರಸ್ಕರಿಸಿ ಸಂಪೂರ್ಣ ನೀರು ಹಂಚಿಕೆ ಮಾಡುವ ಜವಾಬ್ದಾರಿಯನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನ್ಯಾಯಾಧಿಕರಣಕ್ಕೆ ವಹಿಸಿದ್ದನ್ನು ನೆನಪಿಸಿಕೊಳ್ಳಲಿ ಎಂದು ಕಿಡಿ ಕಾರಿದರು.

ಮಹದಾಯಿ ವಿವಾದದ ಸಮಸ್ಯೆ ಪರಿಹಾರಕ್ಕೆ ರಾಜ್ಯ ಬಿಜೆಪಿ ಪ್ರಯತ್ನಿಸುತ್ತಿದೆ. ಹೀಗಾಗಿಯೇ ಮನೋಹರ್‌ ಪರ್ರಿಕರ್‌
ಅವರು ಪತ್ರ ಬರೆಯುವಂತೆ ರಾಜ್ಯ ಬಿಜೆಪಿ ಮಾಡಿದೆ. ಆದರೆ ಸದಾ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ಗೋವಾ ಸಿಎಂ ಸ್ಪಂದಿಸಿದರೂ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ ಎಲ್ಲಾ ನಾಯಕರು ಮೌನವಾಗಿದ್ದಾರೆ. ಆ ಮೂಲಕ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮಧ್ಯಸ್ಥಿಕೆ ಅಗತ್ಯವಿಲ್ಲ: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸುವ ಕುರಿತು ಮಾತು ಕತೆಗೆ ಸಿದಟಛಿ ಎಂದು ಗೋವಾ ಮುಖ್ಯಮಂತ್ರಿ ಲಿಖೀತವಾಗಿ ಹೇಳಿರುವುದರಿಂದ ಈ ಪತ್ರ ಆಧರಿಸಿ ರಾಜ್ಯ ಸರ್ಕಾರ
ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿ, ಈ ಹಿಂದೆ ನೀಡಿದ್ದ ನೀರು ಹಂಚಿಕೆ ಆದೇಶ ಸಾಧ್ಯವಿಲ್ಲ ಎಂಬ ಆದೇಶವನ್ನು ಹಿಂತೆಗೆದುಕೊಳ್ಳಲು ಕೋರ ಬೇಕು. ನಂತರ ಮಾತುಕತೆಗೆ ವಿರೋಧಿಸ ದಂತೆ ಗೋವಾ ಕಾಂಗ್ರೆಸ್‌ ಮನವೊಲಿಸಬೇಕು. ಅಷ್ಟಾದರೆ ಮಾತುಕತೆ ನಡೆದು ನೀರು ಬಿಡಲು ಗೋವಾ ಸರ್ಕಾರದ ಮನವೊಲಿಸಲು ಸಾಧ್ಯವಿದೆ ಎಂದು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next