Advertisement
ಈ ಬಗ್ಗೆ ಸ್ಪಷ್ಟನೆ ನೀಡಿದ ಗೂಗಲ್, ಸಮಸ್ಯೆ ಬಗೆಹರಿಸಲು ನಮ್ಮ ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ. ಜಿಮೇಲ್ ಡೌನ್ ಕುರಿತು ಹೆಚ್ಚಿನ ಮಾಹಿತಿಗಳನ್ನು ಶೀಘ್ರವಾಗಿ ಹಂಚಿಕೊಳ್ಳಲಾಗುವುದು. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದಿದೆ.
Related Articles
Advertisement
ಡೌನ್ ಡಿಟೇಕ್ಟರ್ ವೆಬ್ ಸೈಟ್ ಅಂಕಿಅಂಶಗಳ ಪ್ರಕಾರ, ಜಿಮೇಲ್, ಗೂಗಲ್ ಡ್ರೈವ್, ಮಾತ್ರವಲ್ಲದೆ ಕೆಲವೊಂದು ಗೂಗಲ್ ನ ಸೇವೆಯಲ್ಲೂ ವ್ಯತ್ಯಯವಾಗಿದ್ದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಿಲಾಗಿದೆ. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಜಪಾನ್, ಇತರ ದೇಶಗಳಲ್ಲೂ ಇದರ ಇದರ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದವು. 11 ಗಂಟೆಗೆ ಆರಂಭವಾದ ಈ ಸಮಸ್ಯೆಯಿಂದ ಸುಮಾರು 62% ಬಳಕೆದಾರರಿಗೆ ಆ್ಯಟ್ಯಾಚ್ ಫೈಲ್ ಗಳನ್ನು ಕಳುಹಿಸಲು ಅಸಾಧ್ಯವಾಗಿತ್ತು. 27% ಜನರಿಗೆ ಲಾಗಿನ್ ನಲ್ಲಿ ಸಮಸ್ಯೆ ತಲೊದೋರಿತ್ತು. 10% ಜನರು ತಮಗೆ ಯಾವುದೇ ಇ-ಮೇಲ್ ಸಂದೇಶಗಳು ಬರುತ್ತಿಲ್ಲವೆಂದು ದೂರು ಸಲ್ಲಿಸಿದ್ದರು.
1 ಎಂಬಿ ಗಳಿಗಿಂತಲೂ ಕಡಿಮೆ ಗಾತ್ರ ಇರುವ ಇಮೇಜ್ ಅಪ್ಲೋಡ್ ಆಗಲು ಜಿಮೇಲ್ ನಲ್ಲಿ ಬರೋಬ್ಬರಿ 15 ನಿಮಿಷಗಳು ಬೇಕಾಗಿದ್ದವು. ಅದಾಗ್ಯೂ ಮೇಲ್ ಕಾರ್ಯನಿರ್ವಹಿಸದೆ ಅನೇಕ ಉದ್ಯೋಗಿಗಳು ಪಡಿಪಾಟಲು ಅನುಭವಿಸಿದ್ದರು ಎಂದು ವರದಿ ತಿಳಿಸಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ #Gmaildown ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಸೃಷ್ಟಿಸಿದ್ದವು.