ಬ್ರಹ್ಮಾವರ: ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವಪರಿಸರ ದಿನ ಆಚರಿಸಲಾಯಿತು.
ಅತಿಥಿಯಾಗಿ ಫಿಶರ್ ಡೈನಾಮಿಕ್ಸ್‌ನ ಇಂಜಿನಿಯರಿಂಗ್ ಮ್ಯಾನೇಜರ್ ಶ್ರೀನಿವಾಸ ಪೆಜತ್ತಾಯ ಮಾತನಾಡಿ, ಇಂದು ದೇಶ ಸಾಕಷ್ಟು ಸಮಸ್ಯೆ, ಸವಾಲು ಎದುರಿಸುತ್ತಿದೆ. ಇದಕ್ಕೆಲ್ಲಾ ಮನುಷ್ಯನ ಅತಿ ಆಸೆಯೇ ಕಾರಣ. ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ದೇವರು ಕೊಟ್ಟ ಅಮೂಲ್ಯ ಜೀವನವನ್ನು ಸರಳವಾಗಿ ನಡೆಸಿ ಸಂತೃಪ್ತಿ ಹೊಂದ ಬೇಕೆಂದರು.
ಉಪಪ್ರಾಂಶುಪಾಲ ಪ್ರಣವ್ ಶೆಟ್ಟಿ ಮಾತನಾಡಿ, ಉಸಿರಾಡದೆ ನಾವು ಬದುಕಲು ಸಾಧ್ಯವಿಲ್ಲ. ವಾತಾವರಣದಲ್ಲಿ ರುವ ವಾಯುವಿನ ಗುಣಮಟ್ಟ ಹೆಚ್ಚಿಸಲು ನಾವು ಪ್ರಯತ್ನಪಡಬೇಕೆಂದರು. ಪ್ರಾಂಶುಪಾಲ ಬ್ರಹ್ಮಾಚಾರಿ ಕೆ.ಎನ್. ಅವರು ಶುದ್ಧ ಗಾಳಿ ಸೇವನೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ವೀಡಿಯೋ ಮೂಲಕ ತಿಳಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಜಿ.ಎಂ. ವಿದ್ಯಾಸಂಸ್ಥೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇ ಧಿಸಲಾಗಿದೆ. ನಾವು ಪರಿಸರ ಸಂರಕ್ಷಿಸಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದರು. ವಿದ್ಯಾರ್ಥಿಗಳ ಕಿರುನಾಟಕ, ಮೈಮ್ ಶೋ, ನೃತ್ಯ, ಪರಿಸರ ಗೀತೆ ಪರಿಸರ ಪ್ರಜ್ಞೆಯನ್ನು ಮೂಡಿಸಿತು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಮ್ ಶೆಟ್ಟಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.