Advertisement
– ಪ್ರತಿನಿತ್ಯ ಗ್ಲಿಸರಿನ್ ಹಚ್ಚಿದರೆ ಒಣ ಚರ್ಮ ಮೃದುವಾಗುತ್ತದೆ.-ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಹೋಗಲಾಡಿಸಲು ಗ್ಲಿಸರಿನ್ ಸಹಕಾರಿ.
-ಎಣ್ಣೆ ಚರ್ಮದವರು ಗ್ಲಿಸರಿನ್ ಹಚ್ಚಿದರೆ, ತ್ವಚೆಗೆ ಸಂಬಂಧಿಸಿದ ತೊಂದರೆಗಳು ಗುಣವಾಗುತ್ತವೆ.
-ರಾತ್ರಿ ಮಲಗುವ ಮುನ್ನ ಗ್ಲಿಸರಿನ್ ಹಾಗೂ ರೋಸ್‌ವಾಟರ್‌ನ ಮಿಶ್ರಣವನ್ನು ಹಚ್ಚಿದರೆ ತ್ವಚೆಗೆ ಕಾಂತಿ ಸಿಗುತ್ತದೆ.
-ಕೈ-ಕಾಲು, ತುಟಿ ಒಡೆದು ಬಿರುಕು ಬಿಟ್ಟಿದ್ದರೆ, ಅದಕ್ಕೆ ದಿನಾ ರಾತ್ರಿ ಗ್ಲಿಸರಿನ್ ಹಚ್ಚಿಕೊಳ್ಳಿ.
-ಗ್ಲಿಸರಿನ್ ಜೊತೆಗೆ ಜೇನುತುಪ್ಪ ಬೆರೆಸಿ ಒಡೆದ ಹಿಮ್ಮಡಿಗೆ ಹಚ್ಚಿದರೆ, ಬೇಗ ಗುಣವಾಗುತ್ತದೆ.
-ಧೂಳು, ಮಾಲಿನ್ಯದಿಂದ ಕಾಣಿಸಿಕೊಳ್ಳುವ ತುರಿಕೆಗೆ ಗ್ಲಿಸರಿನ್‌ನಿಂದ ಪರಿಹಾರ ಕಂಡುಕೊಳ್ಳಬಹುದು.
ಕೂದಲಿನ ಆರೋಗ್ಯಕ್ಕೆ
-ಮೈ-ಮುಖದ ಚರ್ಮ ಒಣಗುವಂತೆ ಕೂದಲಿನ ಬುಡವೂ ಸತ್ವ ಕಳೆದುಕೊಳ್ಳುತ್ತದೆ. ಗ್ಲಿಸರಿನ್ ಹಚ್ಚುವುದರಿಂದ ಕೂದಲಿನ ಬುಡಕ್ಕೆ ಅಗತ್ಯ ತೇವಾಂಶ ಸಿಗುತ್ತದೆ.
– ಕೂದಲಿನ ಬುಡಕ್ಕೆ ಗ್ಲಿಸರಿನ್ ಹಚ್ಚಿ ಮಸಾಜ್ ಮಾಡಿ, ಅರ್ಧ ಗಂಟೆಯ ನಂತರ ತಲೆ ತೊಳೆದುಕೊಂಡರೆ ತಲೆಹೊಟ್ಟು ಕಡಿಮೆಯಾಗುತ್ತದೆ.
-ಬೆವರು, ಮಾಲಿನ್ಯದಿಂದ ಕೂದಲು ಉದುರುವುದನ್ನು ತಡೆಯಲು ಗ್ಲಿಸರಿನ್ ಸಹಕಾರಿ.
-ಕೊಬ್ಬರಿ ಎಣ್ಣೆ ಜೊತೆಗೆ ಐದಾರು ಹನಿ ಗ್ಲಿಸರಿನ್ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ, ಒಂದೆರಡು ಗಂಟೆಯ ನಂತರ ತಲೆ ತೊಳೆದುಕೊಂಡರೆ ಕೂದಲು ಮೃದುವಾಗುತ್ತದೆ.
-ಗ್ಲಿಸರಿನ್ ಹಾಗೂ ಆಲಿವ್ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿದರೆ ಒಣಹುಲ್ಲಿನಂಥ ಕೂದಲು ಮೃದುವಾಗುತ್ತದೆ.