ತೋಟಗಾರಿಕಾ ಬೆಳೆಗಳನ್ನು, ಅದರಲ್ಲೂ ವಿಶೇಷವಾಗಿ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಸಣ್ಣಸಣ್ಣ ಪ್ರಮಾಣದ ಕೀಟಗಳು ಬಾಧಿಸುತ್ತವೆ. ಇದರಿಂದ ಬೆಳೆಯ ಬೆಳವಣಿಗೆ, ಫಸಲಿನ ಗುಣಮಟ್ಟ ಕಡಿಮೆಯಾಗುತ್ತದೆ. ಇಂಥ ಕೀಟಗಳನ್ನು ನಿಯಂತ್ರಿಸಲು ಕೀಟನಾಶಕಗಳ ಬಳಕೆ ಮಾಡುವುದು ದುಬಾರಿ. ಅಲ್ಲದೆ ಕೀಟನಾಶಕ ನೆಲ- ಜಲ- ಮನುಷ್ಯರ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಪರಿಸರ ಹಾಳುಮಾಡದ ಮಾರ್ಗಗಳನ್ನು ಅನುಸರಿಸಬಹುದು. ಇಂಥ ಪರಿಸರಸ್ನೇಹಿ ಮಾರ್ಗಗಳಲ್ಲಿ “ಹಳದಿ ಮತ್ತು ನೀಲಿ ಅಂಟುಬಲೆ’ಗಳ ಬಳಕೆಯೂ ಒಂದು.
ಹಣ್ಣು ಮತ್ತು ತರಕಾರಿ ಬೆಳೆಗಳಿರುವ ತೋಟಗಳಲ್ಲಿ ಇಂಥ ಅಂಟುಬಲೆಗಳನ್ನು ನೇತು ಹಾಕಬೇಕು. ಇವುಗಳು ಹಾರಾಡುವ ಕೀಟಗಳನ್ನು ತನ್ನತ್ತ ಆಕರ್ಷಿಸುತ್ತವೆ. ಕೀಟಗಳು ಅವುಗಳ ಮೇಲೆ ಕುಳಿತೊಡನೆ ಅಲ್ಲೇ ಅಂಟಿಕೊಂಡು ಬಂಧಿಯಾಗುತ್ತವೆ. ಆದ್ದರಿಂದಲೇ ಇವುಗಳನ್ನು ಅಂಟುಬಲೆಗಳೆಂದು ಕರೆಯುವುದು. ಈ ಹಾಳೆಗಳಿಂದ ಇರುವ ಮತ್ತೂಂದು ಬಹುದೊಡ್ಡ ಪ್ರಯೋಜನ ಏನೆಂದರೆ, ಆಯಾ ಪರಿಸರದಲ್ಲಿ ಯಾವ್ಯಾವ ಕೀಟಗಳಿವೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.
ಹಳದಿಬಣ್ಣದ ಹಾಳೆಗಳಿಂದ ನಿಯಂತ್ರಿತವಾಗುವ ಕೀಟಗಳು: ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಟೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು, ವಾಸ್ಟ್, ಮಿಡ್ಜಸ್ ಇತ್ಯಾದಿ ಕೀಟಗಳು.
ನೀಲಿಬಣ್ಣದ ಕೀಟಗಳಿಂದ ನಿಯಂತ್ರಿತವಾಗುವ ಕೀಟಗಳಲ್ಲಿ ಗಿಡಹೇನುಗಳು, ಬಿಳಿನೊಣ, ಜಸ್ಸಿಡ್ಗಳು, ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಡೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು ಸೇರಿವೆ.
ಹೆಚ್ಚಿನ ಮಾಹಿತಿಗೆ: 9900800033
* ಕುಮಾರ ರೈತ