Advertisement

ಆಧುನಿಕ ನಾಗಬನಕ್ಕೆ ಹೂಬಳ್ಳಿಗಳ ಮೆರುಗು

12:57 AM Aug 04, 2019 | Team Udayavani |

ಬೆಳ್ಮಣ್‌: ಆಧುನಿಕತೆ ನೆಪದಲ್ಲಿ ನಾಗಬನಗಳ ಮರಗಳನ್ನು ಕಡಿದು ಕಾಂಕ್ರೀಟೀಕರಣಗೊಳಿಸುತ್ತಿರುವ ಕಾಲದಲ್ಲಿ ಮುಂಡ್ಕೂರಿನಲ್ಲೊಂದು ನಾಗ ಬನಕ್ಕೆ ಬಗೆ ಬಗೆಯ ಹೂ-ಬಳ್ಳಿಗಳನ್ನು ಬಿಡಲಾಗಿದೆ. ಕಿನ್ನಿಗೋಳಿ-ಬೆಳ್ಮಣ್‌ ಮುಖ್ಯ ರಸ್ತೆಯ ಸಂಕಲಕರಿಯದ ಪಕ್ಕ ಕಾಣ ಸಿಗುವ ಈ ನಾಗಬನ ಆಕರ್ಷಣೆಗೆ ಕಾರಣವಾಗಿದೆ.

Advertisement

ಮುಂಡ್ಕೂರಿನ ಈ ಪುರಾತನ ನಾಗಬನವನ್ನು ಕಳೆದ 5 ವರ್ಷಗಳ ಹಿಂದೆ ನವೀಕರಿಸಿದಾಗ ಕಾಂಕ್ರೀಟ್‌ನಿಂದ ನಿರ್ಮಿಸಲಾಗಿತ್ತು. ಬಳಿಕ ಬೇಸಗೆ ಕಾಲದಲ್ಲಿ ಈ ನಾಗಸನ್ನಿಧಿಯ ನಾಗ ಕಲ್ಲುಗಳಿಗೆ ನೇರ ಬಿಸಿಲು ಬೀಳುವುದನ್ನು ಕಂಡ ಈ ನಾಗ ಮೂಲದ ಮುಂಡ್ಕೂರು ದೊಡ್ಡಮನೆ ಕುಟುಂಬಿಕರಾದ ರೂಪರಾಜ ಶೆಟ್ಟಿ ಎಂಬವರು ಈ ನಾಗಬನಕ್ಕೆ ಹೂಬಳ್ಳಿಗಳನ್ನು ಬಿಡಲು ಆಲೋಚಿಸಿದರು. ಅದರಂತೆ ಬಳ್ಳಿಗಳಲ್ಲಿ ಪರಿಮಳದ ಹೂಗಳು ಅರಳಿದ್ದು ಇಡೀ ಪರಿಸರ ಸುವಾಸನೆಯಿಂದ ಕೂಡಿದೆ. ಇದೇ ಕುಟುಂಬಕ್ಕೆ ಸೇರಿದ ಇನ್ನೊಂದು ನಾಗಬನದಲ್ಲಿಯೂ ಇದೇ ರೀತಿ ಹೂಬಳ್ಳಿಗಳನ್ನು ಬಿಡಲಾಗಿದೆ.

ಈ ಎರಡೂ ನಾಗಬನಗಳ ಹೂಗಿಡ ಗಳ ನಿರ್ವಹಣೆಯನ್ನು ಲಕ್ಷ್ಮೀ ರೈ ಎಂಬವರು ನಡೆಸುತ್ತಿದ್ದು ಬೇಸಗೆಯಲ್ಲಿ ಈ ಬಳ್ಳಿಗಳಿಗೆ ನೀರುಣಿಸುವ ಕಾಯಕ ದಲ್ಲಿ ತೊಡಗುತ್ತಾರೆ. ನಾಗಬನ ಆಧುನಿಕತೆಯ ಸ್ಪರ್ಶ ಕಂಡರೂ ಹೂ ಬಳ್ಳಿಗಳಿಂದ ಕೂಡಿ ತಂಪಾಗಿರುವುದು ಇತರ ನಾಗಬನಗಳಿಗೆ ಮಾದರಿ.

ನಾಗಬನ ಕಡಿಯಬಾರದು
ನಾಗಬನಗಳನನ್ನು ಕಡಿಯುವುದೇ ಅಪರಾಧ, ಕಡಿದರೆ ನಾಗರ ಕಲ್ಲುಗಳಿಗೆ ಬಿಸಿಲು ಬೀಳದಂತೆ ರಕ್ಷಿಸುವುದೂ ನಮ್ಮ ಧರ್ಮ. ಇಲ್ಲಿ ಬಗೆಬಗೆಯ ಹೂಗಳಿಂದ ನಾಗ ಸನ್ನಿಧಿಯ ವಾತಾವರಣ ಪರಿಮಳ ಹಾಗೂ ತಂಪಿನಿಂದ ಕೂಡಿದೆ.
-ಡಾ| ಎನ್‌.ಎಸ್‌. ಶೆಟ್ಟಿ , ಅಧ್ಯಕ್ಷರು, ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next