Advertisement
2014ರಲ್ಲಿ ಜಾತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತಾವ ಮಂಡಿಸಿ ಅದನ್ನು ಆಗುಗೊಳಿಸುವಲ್ಲಿ ಸಫಲರಾದರು. ಇದಕ್ಕಾಗಿ ದೇಶದ ಜನರು ಅವ ರ ನ್ನು ಶ್ಲಾ ಸುತ್ತಾರೆ. ಒಪ್ಪುವಂಥದ್ದೇ ಆದರೂ 1990ರ ದಶಕದಿಂದ ಜಾಗತಿಕ ಮಟ್ಟದಲ್ಲಿ ಯೋಗದ ಧ್ವಜವನ್ನು ಹಾರಿಸುತ್ತಿರುವವರು ಬಾಬಾ ರಾಮ್‌ದೇವ್ ಎನ್ನುವುದನ್ನು ಮರೆಯಲಾಗದು.
1990ರಿಂದ 93ರ ವರೆಗೆ ಪ್ರಸಿದ್ಧ ಯಾತ್ರಾಸ್ಥಳವಾದ ಗಂಗೋತ್ರಿ ಯಲ್ಲಿ ಯೋಗ ಸಾಧನೆ ಮಾಡಿದರು. ಆಗ ಆಯುರ್ವೇದವನ್ನು ಕಲಿತ ನೇಪಾಲಿ ಮೂಲದ ಆಚಾರ್ಯ ಬಾಲಕೃಷ್ಣರ ಪರಿಚಯವಾಯಿತು. ಆಗ ಒಂದಾದ ಯೋಗ- ಆಯುರ್ವೇದ ತಜ್ಞರ ಜೋಡಿ ಇಂದು ಜಾಗತಿಕ ಮಟ್ಟದಲ್ಲಿ ಮೋಡಿ ಮಾಡುತ್ತಿದೆ.
Related Articles
Advertisement
2005ರಲ್ಲಿ ಆಚಾರ್ಯ ಬಾಲಕೃಷ್ಣರ ಹೆಸರಿನಲ್ಲಿ ಆರಂಭಗೊಂಡ ಪತಂಜಲಿ ಆಯುರ್ವೇದ ಸಂಸ್ಥೆ ಈಗ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದೆ. ಆದರೆ ಇದರಲ್ಲಿ ರಾಮ್‌ದೇವ್ ಪದಾಧಿಕಾರಿಯಾಗಿಲ್ಲ ಎನ್ನುವುದು ಉಲ್ಲೇಖನೀಯ. ಬಿಹಾರದ ಉದ್ಯಮಿ ಸುನಿಲ್ ಪೋತಾªರ್ 100 ಕೋ.ರೂ. ಕೈಸಾಲ ನೀಡಿದ್ದರು. ದೇಶದ ವಿವಿಧೆಡೆ ಆಯುರ್ವೇದ ಪದವೀಧರ ವೈದ್ಯರನ್ನು ನೇಮಿಸಿಕೊಂಡು ಚಿಕಿತ್ಸಾಲಯವನ್ನು ನಡೆಸಲಾಗುತ್ತಿದ್ದು ಪ್ರಸ್ತುತ ದೇಶದ ವಿವಿಧೆಡೆ 3,000 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಸಂಭಾವನೆಯನ್ನು ಕೊಡಲಾಗುತ್ತಿದೆ. ಇವರು ಉಚಿತ ಸೇವೆಯನ್ನು ರೋಗಿಗಳಿಗೆ ನೀಡಬೇಕು.ಯೋಗ ಮತ್ತು ಆಯುರ್ವೇದವನ್ನು ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣರು ಇದನ್ನು ಪ್ರಯೋಗಕ್ಕೆ ಒಡ್ಡಿದರು. ಒಮ್ಮೆ ಪ್ರತಿ ರಾಜ್ಯದ ಎರಡು ಜಿಲ್ಲೆಗಳ ತಲಾ ನೂರು ಸ್ಥೂಲಕಾಯರನ್ನು ಆಯ್ಕೆ ಮಾಡಿ ಅವರ ಮೇಲೆ ಯೋಗದ ಪ್ರಯೋಗ ಮಾಡಲಾಯಿತು. ಕರ್ನಾಟಕದಿಂದ ಆಯ್ಕೆಯಾದ ಎರಡು ಜಿಲ್ಲೆಗಳು ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ. ಇದರಲ್ಲಿ ಐದು ಕೆ.ಜಿ.ಯಿಂದ 43 ಕೆ.ಜಿ.ವರೆಗೆ ಬೊಜ್ಜು ಕರಗಿಸಿಕೊಂಡವರಿದ್ದಾರೆ. ಅತಿ ಹೆಚ್ಚು ಬೊಜ್ಜು ಕರಗಿಸಿಕೊಂಡವರು ಬೆಳಗಾವಿಯವರು. ಇವರ ನಷ್ಟವಾದ ಬೊಜ್ಜು 43 ಕೆ.ಜಿ. ಪತಂಜಲಿ ಸಂಶೋಧನ ಪ್ರತಿಷ್ಠಾನದ ಮುಖ್ಯಸ್ಥರಾದ ಮೂಲತಃ ಗೋವಾದ ಡಾ| ಸರ್ಲಿ ಟೆಲೆಸ್ ಶಿಬಿರಗಳ ಉಸ್ತುವಾರಿ ವಹಿಸಿದ್ದರು. ಬೊಜ್ಜಿನ ಸಮಸ್ಯೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಬಗೆ. ಅಮೆರಿಕದಲ್ಲಿ ಎಲ್ಲ ಅಂಗಗಳೂ ಬೊಜ್ಜಿನಿಂದ ಕೂಡಿದ್ದರೆ ಭಾರತದಲ್ಲಿ ಹೊಟ್ಟೆ ಭಾಗ ಬೊಜ್ಜಿನಿಂದ ಕೂಡಿರುತ್ತದೆ ಎಂಬುದನ್ನು ಪರಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ್ ಟ್ರಸ್ಟ್ ಕರ್ನಾಟಕದ ಪ್ರಭಾರಿ ಯೋಗಾಚಾರ್ಯ ಭವರಲಾಲ್ ಆರ್ಯ ಬೆಟ್ಟು ಮಾಡುತ್ತಾರೆ. ಜಗತ್ತಿನ ಸಮಸ್ಯೆಗಳಿಗೆ ಪತಂಜಲಿ ಸೂತ್ರ
ಮಹರ್ಷಿ ಪತಂಜಲಿ ಯೋಗಸೂತ್ರದ ಆದ್ಯಪ್ರವರ್ತಕ. ನಮಗೀಗ ಮೇಲ್ನೋಟಕ್ಕೆ ಕಾಣುವುದು ಪತಂಜಲಿಯ ಯೋಗಾಸನ- ಪ್ರಾಣಾಯಾಮ ಮಾತ್ರ. ಆದರೆ ಪತಂಜಲಿಯು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಟು ಸೂತ್ರಗಳನ್ನು ನೀಡುತ್ತಾರೆ. ಹೇಗೆ ಬದುಕಬೇಕು? ವ್ಯಕ್ತಿಯಿಂದ ಹಿಡಿದು ಸಮಾಜದವರೆಗೆ ಶಾಂತಿಯುತ ಜೀವನಕ್ಕೆ ಬದುಕಿನಲ್ಲಿ ನೈತಿಕತೆ ಎಷ್ಟು ಮುಖ್ಯ ಎನ್ನುವುದು ಇಲ್ಲಿ ಪ್ರತಿಪಾದಿತವಾಗುತ್ತದೆ.ಜಾತಿ, ರಾಜಕೀಯ, ಸ್ವಾರ್ಥ, ದುರಾಸೆ ಇತ್ಯಾದಿಗಳಿಂದ ಬಳಲುತ್ತಿರುವ ಜಾಗತಿಕ ಸಮಸ್ಯೆಗಳಿಗೆ ಪತಂಜಲಿ ಸೂತ್ರದಲ್ಲಿ ಪರಿಹಾರವಿದೆ ಎನ್ನುವ ರಾಮ್‌ದೇವ್ ಇದನ್ನು ಸಮಾಜದ ರೋಗಗಳಿಗೆ ಅನ್ವಯಿಸುತ್ತಿದ್ದಾರೆ. ಬಹುರೂಪಿ ಪ್ರಯೋಗ
ರಾಮ್‌ದೇವ್ ಅಂದಾಕ್ಷಣ ಯೋಗ, ಪತಂಜಲಿ ಉತ್ಪನ್ನಗಳ ನೆನಪು ಬರುತ್ತದೆ. ಬಹುತೇಕ ನಮ್ಮನ್ನು ಕಾಡುತ್ತಿರುವುದು ಈಗ ಆರೋಗ್ಯ. ಇದರ ಮೂಲ ಇರುವುದು ಆಹಾರ ದೋಷದಲ್ಲಿ. ಶುದ್ಧ ಆಹಾರಕ್ಕಾಗಿ ಸಾವಯವ ಕೃಷಿ, ಭಾರತೀಯ ಗೋತಳಿಗಳ ಉತ್ಪನ್ನಗಳ ಬಳಕೆಗೆ ಆದ್ಯತೆ ಕೊಡುತ್ತಿದ್ದಾರೆ. ಗಾಂಧೀಜಿಯವರು ಸ್ವಾತಂತ್ರ್ಯ, ಸ್ವಾಭಿಮಾನದ ಎಚ್ಚರ ಮೂಡಿಸಲು ವಿದೇಶಿ ಬಟ್ಟೆಗಳನ್ನು ಸುಡುವ ಆಂದೋಲನ ನಡೆಸಿ ಚರಕದಿಂದ ಉತ್ಪಾದಿಸಿದ ಬಟ್ಟೆ ಧರಿಸಲು ಕರೆ ಕೊಟ್ಟಿದ್ದರು. ಈಗ ಬಾಬಾರಾಮ್‌ದೇವ್ ಪರಿಧಾನ ಯೋಜನೆ ಮೂಲಕ ದೇಸೀ ಬಟ್ಟೆಗಳ ಉತ್ಪನ್ನ, ಬಳಕೆ, ಮಾರುಕಟ್ಟೆಗೆ ಯತ್ನಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಉತ್ಪಾದಿಸಿದ ಬಟ್ಟೆಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಖರೀದಿಸಿ ಅವುಗಳ ಬ್ರಾಂಡ್ ಕೊಟ್ಟು ಅದರ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಿವೆ. ಇವುಗಳನ್ನು ತಡೆಗಟ್ಟುವುದು ನಮ್ಮ ಗುರಿ ಎನ್ನುತ್ತಾರೆ ರಾಮ್‌ದೇವ್ ಅವರ ಕರ್ನಾಟಕದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿರುವ ಭವರ್‌ಲಾಲ್ ಆರ್ಯ. ಎಂಎನ್‌ಸಿಗಳ ಕುಹಕಕ್ಕೆ ಎಂಎನ್‌ಸಿ ಆದ ಬಾಬಾ
ರಾಮ್‌ದೇವ್ ಬಾಬಾ ಅವರು ಸ್ವದೇಶಿ ಆಂದೋಲನವನ್ನು ಪ್ರಚುರಪಡಿಸುವಾಗ ದೊಡ್ಡ ದೊಡ್ಡ ಕುಳಗಳು “ಕೌಪೀನಧಾರಿ ಸನ್ಯಾಸಿ ಏನು ಹೇಳೂದು? ಬಹುರಾಷ್ಟ್ರೀಯ ಕಂಪೆನಿಗಳಿಗೆ ಸರಿದೂಗುವ ಉತ್ಪನ್ನ ಕೊಡುವುದು ಸಾಧ್ಯವೆ?’ ಎಂದು ಗೇಲಿ ಮಾಡಿ ಸವಾಲೆಸೆದರು. ಆಗ ರಾಮ್‌ದೇವ್ ಆ ಸವಾಲನ್ನು ಸ್ವೀಕರಿಸಿದರು. ಅದುವರೆಗೆ ಕೆಲವೇ ಶ್ರೇಣಿಗಳಿಗೆ ಸೀಮಿತವಾಗಿದ್ದ ಪತಂಜಲಿ ಉತ್ಪನ್ನಗಳನ್ನು ವಿಶಾಲಶ್ರೇಣಿಯಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಟ್ಟರು. ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳಿಗಿಂತ ಹೆಚ್ಚು ಗುಣಮಟ್ಟದ, ಕಡಿಮೆ ದರದಲ್ಲಿ ಪೂರೈಸಿದ ಪರಿಣಾಮ ಈಗ ಪತಂಜಲಿಯ ವಾರ್ಷಿಕ ವಹಿವಾಟು 8,000 ಕೋ.ರೂ. ರಾಮ್‌ದೇವ್ ಕರ್ನಾಟಕದ ಪರೋಕ್ಷ ಸಂಬಂಧ
1990ರಲ್ಲಿ ಗಂಗೋತ್ರಿಗೆ ರಾಮ್‌ದೇವ್ ಹೋದಾಗ ಉಡುಪಿ ಮೂಲದ ಸುಭದ್ರಾಮಾತಾ ಪರಿಚಯವಾಯಿತು. ಸುಭದ್ರಾಮಾತಾ ಶ್ರೀಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಶಿಷ್ಯೆ. ಆಗ ರಾಮ್‌ದೇವರಿಗೆ ಸಹಕಾರ ಕೊಟ್ಟ ಸುಭದ್ರಾಮಾತಾ ಈಗ ವೃದ್ಧಾಪ್ಯದಲ್ಲಿ ಹರಿದ್ವಾರದ ರಾಮ್‌ದೇವ್ ಆಶ್ರಮದಲ್ಲಿದ್ದಾರೆ. ಮಟಪಾಡಿ ಕುಮಾರಸ್ವಾಮಿ