Advertisement

ಹಳ್ಳಿ ಪ್ರಗತಿಗೆ ಜಾಗತೀಕರಣ ಸಹಕಾರಿ

03:44 PM May 05, 2017 | Team Udayavani |

ಹುಬ್ಬಳ್ಳಿ: ಜಾಗತೀಕರಣದಿಂದಾಗಿ ನಗರಗಳಲ್ಲಿ ಪ್ರಗತಿಯಾಗುತ್ತಿದೆ. ಆದರೆ ಗ್ರಾಮಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗುತ್ತಿಲ್ಲ ಎಂದು ಪರಿಸರ ತಜ್ಞ ಹಾಗೂ ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳಿಕರ ಹೇಳಿದರು. 

Advertisement

ಕೆಎಲ್‌ಇ ಸಂಸ್ಥೆಯ ಕಾಲೇಜ್‌ ಆಫ್ ಬ್ಯುಸಿನೆಸ್‌ ಆಡ್ಮಿನಿಸ್ಟ್ರೇಶನ್‌ ವಾರ್ಷಿಕೋತ್ಸವ “ನಿಶ್ಕರ್ಷ-2017′ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಾಗತೀಕರಣದಿಂದಾಗಿ ನಗರಗಳು ತ್ವರಿತ ಗತಿಯಲ್ಲಿ ಪ್ರಗತಿಯಾಗುತ್ತಿವೆ. 

ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳಿಲ್ಲದೇ ಜನರು ಪರದಾಡಬೇಕಿದೆ. ತಂತ್ರಜ್ಞಾನ ಪ್ರಗತಿಯಿಂದಾಗಿ ಯುವಕರು ಹಳ್ಳಿಗಳಲ್ಲಿ ಉಳಿಯಲು ಬಯಸುತ್ತಿಲ್ಲ, ನಗರಗಳ ವಲಸೆ ಹೆಚ್ಚುತ್ತಿದೆ ಎಂದರು. ತಂತ್ರಜ್ಞಾನ ಪ್ರಗತಿ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತಿದೆ. 

ಇದು ನಮ್ಮ ವೈಚಾರಿಕತೆ, ಮನಸ್ಥಿತಿಯ ಮೇಲೆ ಕೂಡ ಪರಿಣಾಮ ಬೀರುತ್ತಿದೆ. ಮೊಬೈಲ್‌ನಿಂದಾಗಿ ಉತ್ಪಾದಕತೆ ಕ್ಷೀಣಿಸುತ್ತಿದೆ. ಮೊಬೈಲ್‌ನಿಂದ ಧನಾತ್ಮಕ ಪ್ರಯೋಜನಗಳಿದ್ದಂತೆ, ಋಣಾತ್ಮಕ ಪರಿಣಾಮಗಳು ಕೂಡ ಆಗುತ್ತಿವೆ ಎಂಬುದು ಸಮೀಕ್ಷೆಯೊಂದರಲ್ಲಿ ವರದಿಯಾಗಿದೆ ಎಂದು ಹೇಳಿದರು.

 ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಉದ್ಯಮ ಅವಕಾಶಗಳಿದ್ದು, ಪದವೀಧರರು ಈ ದಿಸೆಯಲ್ಲಿ ಚಿಂತನೆ ನಡೆಸುವುದು ಅಗತ್ಯ. ಸ್ಥಳೀಯ ಭಾಷೆ, ಸಂಸ್ಕೃತಿ, ವಿಶೇಷತೆಯನ್ನು ಪ್ರಚಾರ ಮಾಡುವ ಉದ್ಯಮವನ್ನು ಆರಂಭಿಸಿ  ಉತ್ತಮ ಪ್ರಗತಿ ಸಾಧಿಸಲು ಸಾಧ್ಯ. ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

Advertisement

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಜನವಸತಿ ಹೆಚ್ಚುತ್ತಿದ್ದು, ಕೆರೆಗಳು ಬಡಾವಣೆಗಳಾಗುತ್ತಿವೆ. ಅಂತರ್ಜಲ ಮಟ್ಟ ಹೆಚ್ಚಿಸುವ ಕೆರೆಗಳನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಪರಿಸರ ಮಾಲಿನ್ಯ ತಡೆಗಟ್ಟುವ ದಿಸೆಯಲ್ಲಿ ಯುವಕರು ಮುಂದಾಗಬೇಕು.

ಒಂದೆಡೆ 130 ಕೋಟಿ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸವಾಲು ಇದ್ದರೆ, ಇನ್ನೊಂದೆಡೆ ಪರಿಸರ ಸಂರಕ್ಷಣೆಯ ಸವಾಲಿದೆ. ಪಶ್ಚಿಮ ಘಟ್ಟದಲ್ಲಿ ನಿರಂತರ ಮರಗಳ ಮಾರಣ ಹೋಮ ನಡೆದಿದ್ದು, ಇದರಿಂದ ಮಳೆ ಬೀಳುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು. 

ಪ್ರೊ| ಸಾದಿಕಾ ಅಂಬ್ರಿàನ್‌ ವಾರ್ಷಿಕ ವರದಿ ವಾಚಿಸಿದರು. ಪ್ರಾಚಾರ್ಯ ರಮಾಕಾಂತ ದೇವಗೋಜಿ ಅಧ್ಯಕ್ಷತೆ ವಹಿಸಿದ್ದರು. ಶಾರುಖ್‌ಖಾನ್‌ ಪಠಾಣ, ಶ್ರೀದೇವಿ ಅರಳಿಕಟ್ಟಿ ಇದ್ದರು. ಬ್ಲೆಸ್ಸಿ ಹುಲಿಯಾಳ ಸ್ವಾಗತಿಸಿದರು. ಸ್ಮಿತಾ ಪಾಟೀಲ ಹಾಗೂ ಸಿದ್ಧಾಂತ ಪ್ರಭು ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next