ಹಿರೇಕೆರೂರ: ಪರಿಸರ ನಾಶದಿಂದ ಇಂದು ಜಾಗತಿಕ ತಾಪಮಾನ ಹೆಚ್ಚುವುದರ ಜತೆಗೆ ನಮ್ಮ ನಿತ್ಯ ಜೀವನದಲ್ಲಿ ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.
ತಾಲೂಕಿನ ಚಿಕ್ಕೋಣತಿ ಗ್ರಾಮದ ದೇವತಿಕಟ್ಟೆ ಕೆರೆಯ ಆವರಣದಲ್ಲಿ ಬಿ.ಜಿ.ಬಣಕಾರ ಸೋಶಿಯಲ್ ಟ್ರಸ್ಟ್, ಯು.ಬಿ.ಬಣಕಾರ ಅಭಿಮಾನಿ ಬಳಗ, ಕೇಸರಿ ಮಹಿಳಾ ಘಟಕ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮರ-ಗಿಡಗಳನ್ನು ಹೆಚ್ಚು ಬೆಳೆಸಿ ಪೋಷಿಸುವುದರೊಂದಿಗೆ ಕಾಡುಗಳನ್ನು ಉಳಿಸಿ ನಾಡಿಗೆ ಉತ್ತಮ ಆರೋಗ್ಯ ಒದಗಿಸುವ ಕೆಲಸ ಮಾಡಬೇಕು. ದಿನೇ ದಿನೇ ಪರಿಸರದ ಪ್ರಮಾಣ ಕಡಿಯಾಗುತ್ತಿದ್ದು ಭೌಗೊಳಿಕವಾಗಿ ಅಸಮತೋಲನ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ನಾವು ಹಾಗೂ ನಮ್ಮ ಮಕ್ಕಳು ಬದುಕುವುದು ಕಷ್ಟವಾಗುತ್ತದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು. ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಮರ ಗಿಡಗಳನ್ನು ಬೆಳೆಸಿದರೆ ಮಣ್ಣಿನ ಸವಕಳಿ ತಡೆಗಟ್ಟಬಹುದು ಮತ್ತು ಸಾರ್ವಜನಿಕ ಆಸ್ತಿಗಳಲ್ಲಿ ಸರ್ಕಾರ ಬೆಳೆಸುವ ಸಸಿಗಳನ್ನು ಕಾಳಜಿಯಿಂದ ಬೆಳೆಸುವ ಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದರು.
ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಮಾತನಾಡಿ, ಒಂದು ಸಸಿಯನ್ನು ನೆಟ್ಟರೆ ಒಬ್ಬ ಮನುಷ್ಯನಿಗೆ ಜೀವ ನೀಡಿದಂತೆ. ಇಂದು ಅರಣ್ಯ ನಾಶದಿಂದ ಅನೇಕ ದುಷ್ಪರಿಣಾಮಗಳು ಎದುರಾಗುತ್ತಿವೆ. ಅರಣ್ಯ ಸಂಪತ್ತು ವಿನಾಶದಿಂದ ಆಹಾರಕ್ಕಾಗಿ ಪ್ರಾಣಿಗಳು ನಾಡಿಗೆ ಆಗಮಿಸುತ್ತಿವೆ. ಅಂತರ್ಜಲ ಕುಸಿಯುತ್ತಿದ್ದು, ಭೂಮಿಯ ಮೇಲೆ ಉಷ್ಣಾಂಶ ಹೆಚ್ಚಾಗತೊಡಗಿದೆ. ಪರಿಸರದ ಮಲಿನತೆಯಿಂದ ಶುದ್ಧ ಗಾಳಿ, ನೀರು ನಮಗೆ ಸಿಗುತಿಲ್ಲ. ಕಾರಣ ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳಸಿ, ಸಂರಕ್ಷಿಸಬೇಕು ಎಂದು ತಿಳಿಸಿರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಶಿವರಾಜ ಹರಿಜನ, ಸುಮಿತ್ರಾ ಪಾಟೀಲ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಎಸ್.ಆರ್. ಅಂಗಡಿ, ಮಹೇಶ ಗುಬ್ಬಿ, ರಾಜು ಬಣಕಾರ, ಷಣ್ಮುಖಯ್ಯ ಮಳಿಮಠ, ರಾಜಶೇಖರ ಹಂಪಾಳಿ, ಹನುಮಗೌಡ ಹುಡೇದ, ಎಸ್.ಬಿ.ಪಾಟೀಲ, ಸಿದ್ದು ನರೇಗೌಡ್ರ, ಶಿವಕುಮಾರ ತಿಪ್ಪಶೆಟ್ಟಿ, ಕಂಠಾಧರ ಅಂಗಡಿ, ಹುಚ್ಚಪ್ಪ ಜಡಿಯಣ್ಣನವರ, ವೀರಬಸಪ್ಪ ಮತ್ತೂರ, ಕರಬಸಪ್ಪ ತಿಪ್ಪಕ್ಕಳವರ, ಶರತ್ ಬಣಕಾರ, ಅನ್ನಪೂರ್ಣ ಬಣಕಾರ ಸೇರಿದಂತೆ ಇನ್ನಿತರರಿದ್ದರು.