Advertisement

ಯೋಗದಿಂದ ಭಾರತಕ್ಕೆ ಜಾಗತಿಕ ಮನ್ನಣೆ

01:36 PM Jun 22, 2018 | Team Udayavani |

ಆಳಂದ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಮದೇವ ಬಾಬಾ ಯೋಗಾಸನಕ್ಕೆ ಜಾಗತಿಕ
ಮನ್ನಣೆ ತಂದುಕೊಟ್ಟಿದ್ದಾರೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಗುರುವಾರ ಭಾರತ ಸ್ವಾಭಿಮಾನ ಟ್ರಸ್ಟ್‌ ಹಾಗೂ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ 4ನೇ ಯೋಗ ದಿನಾಚರಣೆ ಪ್ರಾತ್ಯಕ್ಷಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಗವು ಜನರ ಮಾನಸಿಕ ಮತ್ತು ದೈಹಿಕ ಸದೃಢತೆ ಕಾಪಾಡಲು ಸಹಕಾರಿಯಾಗಿದೆ. ಆಸ್ತಿ, ಅಂತಸ್ತಿಗಿಂತ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯವೇ ಭಾಗ್ಯವಾಗಿದೆ. ನಿತ್ಯದ ಒತ್ತಡದ ನಡುವೆ ಒಂದಿಷ್ಟು ಯೋಗ, ಪ್ರಣಾಯಾಮದ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.

ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಬಿ.ಕೆ. ಗುರುದೇವಿ ಅಕ್ಕ ಮಾತನಾಡಿ, ಪತಂಜಲಿ ಯೋಗ ಬದುಕಿಗೆ ಮಾರ್ಗ ತಂದುಕೊಟ್ಟಿದೆ. ಯೋಗವು ಮನಸ್ಸಿನ ಏಕಾಗ್ರತೆಗೆ ಸಾಧನೆವಾಗಿದೆ ಎಂದರು. ಪಟ್ಟಣದ ಸಿದ್ಧಲಿಂಗ ಶಿವಾಚಾರ್ಯ ಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ರೋಗ ಮುಕ್ತ ಜೀವನಕ್ಕೆ ಯೋಗ ಮತ್ತು ಮಿತವಾದ ಆಹಾರ
ಸೇವನೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವಿಶ್ವನಾಥ ಪಾಟೀಲ ಪ್ರತಿಜ್ಞಾ ವಿಧಿ  ಬೋಧಿಸಿದರು. ಆಗಮಿಸಿದ ಸಾರ್ವಜನಿಕರಿಗೆ ಶಾಸಕರು ವಿವಿಧ ರೀತಿಯ ಸಸಿಗಳನ್ನು ವಿತರಿಸಿದರು.  

Advertisement

ಬಂಡಯ್ಯ ಸ್ವಾಮಿ 21 ಆಸನಗಳ ಪ್ರಾತ್ಯಕ್ಷಿಕೆ ತೋರಿದರೆ, ಶಿಕ್ಷಕ ದತ್ತಾತ್ರೆಯ ಬಿರಾದಾರ ಆಸನಗಳ ವಿವರಣೆ ನೀಡಿದರು. ಟ್ರಸ್ಟ್‌ ಕಾರ್ಯದರ್ಶಿ ರಾಜೇಂದ್ರ ಮಿಸ್ಕಿನ್‌, ಶರಣು ಕುಂಬಾರ, ಸಂಗೀತಾ ಕಾಲೇಕರ್‌, ಸುವರ್ಣ ಪಾಟೀಲ ಹಾಜರಿದ್ದರು.

ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ, ಸಾಗರ ಕಟಂಬಲೆ, ಜಯ ಕನಾಟಕ
ಸಂಘಟನೆ ಅಧ್ಯಕ್ಷ ಬಸವರಾಜ ಎಸ್‌. ಕೋರಳ್ಳಿ, ಕಾರ್ಯಾಧ್ಯಕ್ಷ ಶರಣು ಪಾಟೀಲ ಕೊಡಲಹಂಗರಗಾ,
ಕರವೇ ಅಧ್ಯಕ್ಷ ಕಿರಣ ಗುತ್ತೇದಾರ, ಚಂದ್ರಕಾಂತ ಕುಲಕರ್ಣಿ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಪ್ರಧಾನ ಕಾರ್ಯದರ್ಶಿ ಮಹೇಶ ಗೌಳಿ, ಜಯಪ್ರಕಾಶ ಬಿದರಿ, ಸೂರ್ಯಕಾಂತ ಘಸನೆ ಯೋಗಸಾಧನೆಯಲ್ಲಿ ಪಾಲ್ಗೊಂಡಿದ್ದರು. ಟ್ರಸ್ಟ್‌ನ ಯುವ ಘಟಕದ ಪ್ರಭಾರಿ ಸಿದ್ಧರಾಮ ವಾಡೆ ಸ್ವಾಗತಿಸಿದರು. ಮಹಿಳಾ ಘಟಕದ ಉಷಾ ಗೌಳಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next