ಕಲಬುರಗಿ: ಕಳೆದ 25 ವರ್ಷಗಳ ಗೂಡ್ಸ್ ಹಾಗೂ ಮಿನಿ ಬಸ್‌ಗಳ ಹಾಗೂ ಲಘು ವಾಹನಗಳ ತಯಾರಿಕೆಯಲ್ಲಿ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿರುವ ಎಸ್‌ಎಂಎಲ್ ಇಸೂಝ್ ಕಂಪನಿ ಗ್ಲೋಬಲ್ ಶ್ರೇಣಿ ಎರಡು ಸರಕು ವಾಹನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಬಿಡುಗಡೆಯಾದ ನಂತರ ಬುಧವಾರ ಸಂಜೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಎಸ್‌ಎಂಎಲ್ ಇಸೂಝ್ ಕಂಪನಿಯ ಎಸ್‌ಎಂಎಲ್ ಸಾರಥಿ-ಜಿಎಸ್ ಗೂಡ್ಸ್ ವಾಹನಗಳನ್ನು ಬಿಡುಗಡೆ ಮಾಡಲಾಯಿತು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿ ಮಾರುಕಟ್ಟೆ ಮುಖ್ಯ ಮ್ಯಾನೇಜರ್ ಆರ್. ಭಾಸ್ಕರ್ ಅವರು, ಎಲ್ಲ ಹಂತದ ಸರಕುಗಳನ್ನು ಸಾಗಿಸಲು ಅನುಕೂಲವಾಗುವಂತೆ ವಿವಿಧ ಶ್ರೇಣಿ ಹಾಗೂ 5 ಲಕ್ಷ ರೂ. ದಿಂದ 12 ಲಕ್ಷ ರೂ. ವರೆಗಿನ ಮೊತ್ತದ ವಾಹನಗಳನ್ನು ಸಮರ್ಪಿಸಲಾಗುತ್ತಿದೆ ಎಂದು ವಿವರಿಸಿದರು.
ವಾಹನಗಳು ಎಲ್ಲಿಯಾದರೂ ಕೆಟ್ಟು ನಿಂತರೆ ಅಲ್ಲಿಂದಲೇ ಒಂದು ಮೆಸೆಜ್ ಕಳುಹಿಸಿದರೆ ಅಲ್ಲೇ ಸಮೀಪದ ಡೀಲರ್‌ದಿಂದ ಮೆಕ್ಯಾನಿಕರು ಬರುತ್ತಾರೆ. ಬಹು ಮುಖ್ಯವಾಗಿ ಬೇರೆ ಕಂಪನಿ ವಾಹನಗಳಿಗೆ ಎರಡು ವರ್ಷಗಳ ವಾರಂಟಿ ಇದ್ದರೆ, ತಮ್ಮ ವಾಹನಗಳಿಗೆ ಮೂರು ವರ್ಷ ವಾರಂಟಿ ಇದೆ. ಜತೆಗೆ ಕಂಪನಿ ವತಿಯಿಂದ 3 ವರ್ಷ ವಾಹನ ಚಾಲಕನಿಗೆ ಜೀವ ವಿಮೆ ಇದೆ. ಏನಾದರೂ ಅನಾಹುತವಾದರೆ 5 ಲಕ್ಷ ರೂ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.
ಎಸ್‌ಎಂಎಲ್ ಐಎಸ್‌ಯುಐಡ್‌ಯು ಕಂಪನಿ ಸ್ವರಾಜ್ ಮಜಾಡಾ ಸೇರಿದಂತೆ ಕಂಪನಿಯ ವಿವಿಧ ವಾಹನಗಳು ಸೇರಿದಂತೆ ಒಟ್ಟು 2.80 ಲಕ್ಷ ವಾಹನಗಳು ದೇಶದಲ್ಲಿ ರಸ್ತೆಗಿಳಿದಿವೆ. ಈಗ ಬಿಡುಗಡೆಯಾಗುವ ಹೊಸ ಶ್ರೇಣಿಗಳು ಪರಿಸರ ಸ್ನೇಹ ಹೊಂದಿದ್ದಲ್ಲದೇ ಉತ್ತಮ ಮೈಲೇಜ್ ಹೊಂದಿವೆ. ಒಟ್ಟಾರೆ ಮಲೇಷಿಯಾ ದೇಶದ ಮಾದರಿ ಹೊಂದಿವೆ ಎಂದು ಭಾಸ್ಕರ್ ತಿಳಿಸಿದರು. ಎಸ್‌ಎಂಎಲ್ ಇಸೂಝ್ ಮಾರುಕಟ್ಟೆ ಮ್ಯಾನೇಜರ್ ವಿಲಾಸ್, ಮೆ| ನಿಷ್ಠಿ ಅಟೋಮೋಟಿವ್ಸ್ ವ್ಯವಸ್ಥಾಪಕ ನಿರ್ದೇಶಕ ದೊಡ್ಡಪ್ಪ ಅಪ್ಪ ಇದ್ದರು.
ಗ್ರಾಹಕರಿಗೆ ನೂತನ ವಾಹನಗಳ ಕೀ ಹಸ್ತಾಂತರಿಸುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಎಸ್‌ಎಂಎಲ್ ಇಸೂಝ್ ಕಂಪನಿ
ಕಲಬುರಗಿ-ಬೀದರ ಹಾಗೂ ಯಾದಗಿರಿ ಜಿಲ್ಲೆಗೆ ಮೆ| ನಿಷ್ಠಿ ಅಟೋಮೋಟಿವ್ಸ್ ಅಧಿಕೃತ ಡೀಲರರಾಗಿದ್ದು, ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಟ್ರಕ್‌ಗಳನ್ನು ಹಿಂದೆಂದಿಗಿಂತಲೂ ಅಭಿವೃದ್ಧಿಗೊಳಿಸಲಾಗಿದೆ. ಇದು ಮಾಲೀಕರಿಗೆ ಮತ್ತಷ್ಟು ಹಿಡಿಸಲಾರಂಭಿಸಿದೆ. ಹಲವು ಸೌಲಭ್ಯಗಳಿರುವುದು ವಾಹನಗಳ ಖರೀದಿ ಉತ್ಸಾಹ ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆರ್. ಭಾಸ್ಕರ್, ಮುಖ್ಯ ಮಾರುಕಟ್ಟೆ ಮ್ಯಾನೇಜರ್, ಎಸ್‌ಎಂಎಲ್ ಇಸೂಝ್ ಕಂಪನಿ