Advertisement

ಜಾಗತಿಕ ಹೂಡಿಕೆ ಸಮಾವೇಶ: ಮೊದಲ ದಿನವೇ ಹರಿದುಬಂತು 5.64 ಲಕ್ಷ ಕೋಟಿ ರೂ.

10:56 PM Nov 02, 2022 | Team Udayavani |

ಬೆಂಗಳೂರು: ಜಾಗತಿಕ ಹೂಡಿಕೆ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿದ ಹೂಡಿಕೆ ಹರಿದುಬರಲಾರಂಭಿಸಿದೆ. ಸರ್ಕಾರ ನಿರೀಕ್ಷಿಸಿದ 5 ಲಕ್ಷ ಕೋಟಿ ರೂ.ಗಳ ಹೂಡಿಕೆ ಸಂಬಂಧ ಮೊದಲ ದಿನವೇ ಒಡಂಬಡಿಕೆಯಾಗಿದೆ.

Advertisement

ಈ ಮೂಲಕ ಸರ್ಕಾರ ನಿರೀಕ್ಷಿಸಿದ ಹೂಡಿಕೆ ಮೊದಲ ದಿನವೇ ಯಶಸ್ಸು ಕಂಡಿದೆ. ಅಂದಾಜು 5.64 ಲಕ್ಷ ಕೋಟಿ ರೂ.ಗಳ ಹೂಡಿಕೆಯಾಗಿದ್ದು, 50 ಕಂಪನಿಗಳು ಒಡಂಬಡಿಕೆಗೆ ಸಹಿ ಮಾಡಿವೆ ಎಂದು ತಿಳಿದು ಬಂದಿದೆ.

ಕೊರೊನಾ ಕಾಲಘಟ್ಟದ ಬಳಿಕ ಜಾಗತಿಕವಾಗಿ ದೊಡ್ಡ ಮಟ್ಟದ ಸಮಾವೇಶವನ್ನು ಸರ್ಕಾರ ನಡೆಸುತ್ತಿದೆ. ಇದಕ್ಕಾಗಿ ಕಳೆದ 3 ತಿಂಗಳಿನಿಂದಲೇ ಸಿದ್ಧತೆ ನಡೆಸಿತ್ತು. ದುಬೈ, ಸ್ವಿಜರ್ಲೆಂಡ್‌ನ‌ ದಾವೋಸ್‌ ಸಮಾವೇಶ ಸೇರಿ ಹಲವೆಡೆ ಸಾಕಷ್ಟು ಒಪ್ಪಂದಗಳನ್ನು ಮಾಡಿಕೊಂಡು ರಾಜ್ಯಕ್ಕೆ ಹೂಡಿಕೆ ತರುವಲ್ಲಿ ಯಶಸ್ವಿಯಾಗಿದೆ.

ಅದರ ಫ‌ಲವೆಂಬಂತೆ ಮೊದಲ ದಿನವೇ 5.64 ಕೋಟಿ ರೂ. ಹೂಡಿಕೆಯಾಗಿರುವುದರಿಂದ ಉಳಿದ ಎರಡು ದಿನಗಳಲ್ಲಿ ತಲಾ 2 ಲಕ್ಷ ಕೋಟಿ ರೂ.ಗಳಂತೆ ಹೂಡಿಕೆಯಾದರೂ ದುಪ್ಪಟ್ಟು ಬಂಡವಾಳ ಹರಿದು ಬಂದಂತಾಗಲಿದೆ. ಆದರೆ, ಸರ್ಕಾರವು ಅಧಿಕೃತವಾಗಿ ನ.4ರಂದು ಸಮಾವೇಶದ ಸಮಾರೋಪದಲ್ಲಿ ಒಟ್ಟಾರೆ ಹೂಡಿಕೆಯ ಸ್ಪಷ್ಟ ಚಿತ್ರಣ ನೀಡಲಿದೆ.

ಪ್ರಮುಖ ಒಡಂಬಡಿಕೆಗಳು ಮತ್ತು ಹೂಡಿಕೆ ವಿವರ
– ಗ್ರೀನ್‌ ಹೈಡ್ರೋಜನ್‌ನ 7 ಕಂಪನಿಗಳು- 2.91 ಲಕ್ಷ ಕೋಟಿ ರೂ.
– ನವೀಕರಿಸಬಹುದಾದ ಇಂಧನದ 9 ಕಂಪನಿಗಳು – 1.29 ಕೋಟಿ ರೂ.
– ಉದಯೋನ್ಮುಖ 16 ಕಂಪನಿಗಳು – 70,381 ಕೋಟಿ ರೂ.
– ಮೂಲಸೌಕರ್ಯ ಮತ್ತು ಲಾಜಿಸ್ಟಿಕ್‌ ಪಾರ್ಕ್ ನಲ್ಲಿ 8 ಕಂಪನಿಗಳು- 43,500 ಕೋಟಿ ರೂ.
– ಜವಳಿ, ಸಕ್ಕರೆ, ಜೈವಿಕ ಇಂಧನ ಮುಂತಾದ ಕ್ಷೇತ್ರಗಳ 4 ಕಂಪನಿಗಳು- 4,704 ಕೋಟಿ ರೂ.
– ವಿವಿಧ ಕೋರ್‌ ವಲಯಗಳಲ್ಲಿ 6 ಕಂಪನಿಗಳು- 25,024 ಕೋಟಿ ರೂ. ಹೂಡಿಕೆ

Advertisement

ವಿವಿಧ ಕಂಪನಿಗಳು ಸರ್ಕಾರದ ಜೊತೆ ಮಾಡಿಕೊಂಡಿರುವ ಒಪ್ಪಂದದ ವಿಸ್ತೃತ ವಿವರ ಹಾಗೂ ಸ್ಪಷ್ಟ ಚಿತ್ರಣವನ್ನು ನ.4ರಂದು ಸಮಾವೇಶದ ಸಮಾರೋಪದಲ್ಲಿ ಅಧಿಕೃತವಾಗಿ ಪ್ರಕಟಿಸಲಿದ್ದೇವೆ.
– ಮುರುಗೇಶ ನಿರಾಣಿ, ಕೈಗಾರಿಕಾ ಸಚಿವ

ಕರ್ನಾಟಕದಲ್ಲಿ ಉದ್ಯಮಿಗಳಿಗೆ ಅತ್ಯಂತ ಪೂರಕ ವಾತಾವರಣ ಇದ್ದು, ಮುಂದಿನ 5 ವರ್ಷಗಳಲ್ಲಿ ಇನ್ನೂ ಒಂದು ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು.
– ಸಜ್ಜನ್‌ ಜಿಂದಾಲ್‌, ಉದ್ಯಮಿ

ವಿದ್ಯುತ್‌, ಅನಿಲ ಕೊಳವೆ ಮಾರ್ಗ, ಲಾಜಿಸ್ಟಿಕ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂದಿನ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ.
– ಕರಣ್‌ ಅದಾನಿ, ಗೌತಮ್‌ ಅದಾನಿ ಪುತ್ರ

Advertisement

Udayavani is now on Telegram. Click here to join our channel and stay updated with the latest news.

Next