Advertisement
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಒಳಪಟ್ಟ ಜೆಮ್ಸ… ಆ್ಯಂಡ್ ಜುವೆಲರಿ ಎಕ್ಸ್ ಪೋರ್ಟ್ ಪ್ರಮೋಶನ್ ಕೌನ್ಸಿಲ್ (ಜಿಜೆಇಪಿಸಿ)ನ ಅಂಗ ಸಂಸ್ಥೆಯಾದ ಉಡುಪಿ ಕರಾವಳಿ ಬೈಪಾಸ್ ಬಳಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜೆಮ್ಸ… ಆ್ಯಂಡ್ ಜುವೆಲರಿಯನ್ನು (ಐಐಜಿಜೆ) ಶುಕ್ರವಾರ ದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭ ಕೊಯಮತ್ತೂರಿನಲ್ಲಿ ಸ್ವರ್ಣೋದ್ಯಮಿಗಳಿಗೆ ಉಪ ಯೋಗವಾಗುವ ಆಧುನಿಕ ಯಂತ್ರೋಪಕರಣಗಳಿರುವ ಕಾಮನ್ ಫೆಸಿಲಿಟಿ ಸೆಂಟರ್‌ಗೆ ಶಂಕುಸ್ಥಾಪನೆ ಮಾಡಿದರು.ಇಂದು ಜಗತ್ತು ಫ್ಯಾಶನ್ ಮೇಲೆ ನಿಂತಿದೆ. ಆಭರಣ ವಿನ್ಯಾಸ ಅಂತಾ ರಾಷ್ಟ್ರೀಯ ಮಟ್ಟದ ಉದ್ಯೋಗವಾಗಿ ಹೊರಹೊಮ್ಮಿದೆ. ದೇಶದಲ್ಲಿ ವಿನ್ಯಾಸಕ ರಿಗೆ ಬೇಡಿಕೆಯಿದ್ದು, ಯುವ ಸಮುದಾಯ ಅದರ ಪ್ರಯೋಜನ ಪಡೆಯ ಬೇಕು ಎಂದು ಕರೆ ನೀಡಿದರು.
Related Articles
ಉಡುಪಿಯಲ್ಲಿ ಜಿಜೆಇಪಿಸಿ ಪೂರ್ವ ವಲಯದ ಅಧ್ಯಕ್ಷ ಪ್ರಕಾಶ ಪಿಂಚಾ ಅವರು ಕೇಂದ್ರವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಜಿಲ್ಲಾ ಜುವೆಲರಿ ಅಸೋಸಿಯೇಶನ್ ಅಧ್ಯಕ್ಷ ಅಲೆವೂರು ನಾಗರಾಜ್ ಆಚಾರ್ಯ, ಕರ್ನಾಟಕ ಸ್ಟೇಟ್ ಜುವೆಲರಿ ಫೆಡರೇಶನ್ ಅಧ್ಯಕ್ಷ ಜಯ ಆಚಾರ್ಯ ಉಪಸ್ಥಿತರಿದ್ದರು. ಮಧು ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಕೇಂದ್ರದಲ್ಲಿ ಎರಡು ತಿಂಗಳುಗಳ ನಾಲ್ಕು ಕೋರ್ಸುಗಳಿದ್ದು ವಿದ್ಯಾರ್ಥಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸ್ವರ್ಣಾಭರಣ ತರಬೇತಿ ನೀಡಲಾಗುತ್ತಿದೆ.
Advertisement