Advertisement

ಒಕ್ಕೂಟದ ಮೂಲಕ ಸಮಾಜದ ಒಳಿತಿಗಾಗಿ ಕೈಜೋಡಿಸಬೇಕು: ಐಕಳ ಹರೀಶ್‌ ಶೆಟ್ಟಿ

11:30 AM Apr 26, 2022 | Team Udayavani |

ಪುಣೆ: ಜಾಗತಿಕ ಬಂಟರ ಸಂಘ ಗಳ ಒಕ್ಕೂಟವು ಈಗಾಗಲೇ ಬಂಟರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿ ಕೊಂಡು ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಸಂಯೋಜಿಸಿ ಆಶ್ರಯರಹಿತ ಬಂಟ ಸಮುದಾಯದ ಸರಿಸುಮಾರು 200 ಕುಟುಂಬಗಳಿಗೆ ವಾಸಕ್ಕಾಗಿ ಮನೆಯನ್ನು ನಿರ್ಮಿಸಿಕೊಟ್ಟಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಹೇಳಿದರು.

Advertisement

ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಮಾಲಕತ್ವದ ಹೊಟೇಲ್‌ ಕೋರೋನೆಟ್‌ ಇದರ ಸಭಾಂಗಣದಲ್ಲಿ ಎ. 23ರಂದು ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಕ್ಕೂಟಕ್ಕೆ ನಿವೇಶನರಹಿತ ಮತ್ತು ಮನೆ ಯಿಲ್ಲದ ಅನೇಕ ಕುಟುಂಬಗಳು ಅರ್ಜಿ ಸಲ್ಲಿಸಿದ್ದು 600ಕ್ಕೂ ಹೆಚ್ಚು ಮನೆಗಳ ನಿರ್ಮಾಣದ ಆವಶ್ಯಕತೆಯಿದೆ. ಕ್ಯಾನ್ಸರ್‌, ಕಿಡ್ನಿ ವೈಫಲ್ಯ, ಹೃದಯ ಚಿಕಿತ್ಸೆ ಹೀಗೆ ಬಹು ಅಂಗಾಂಗಗಳ ವೈಫಲ್ಯದ ಚಿಕಿತ್ಸೆಗಾಗಿ ಆದ್ಯತೆ ಮೇರೆಗೆ  ನೆರವ‌ನ್ನು ನೀಡುತ್ತಿದ್ದು, ಅನಾರೋಗ್ಯ ಪೀಡಿತ ವಾರಸುದಾರರಿಲ್ಲದ ಕುಟುಂಬಗಳಿಗೆ ಪ್ರತೀ ತಿಂಗಳು ಅವರ ಬ್ಯಾಂಕ್‌ ಖಾತೆಗೆ ದೈನಂದಿನ ಖರ್ಚು ವೆಚ್ಚ ನಿಭಾಯಿಸಲು ಧನಸಹಾಯವನ್ನು ದತ್ತು ಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ. ಹೆಣ್ಣುಮಕ್ಕಳ ಮದುವೆ ಮತ್ತು ಆರ್ಥಿಕವಾಗಿ ಹಿಂದುಳಿದವರ ಶಿಕ್ಷಣಕ್ಕಾಗಿ ಒಕ್ಕೂಟವು ನಿರಂತರ ಸಹಾಯ ಹಸ್ತ ನೀಡಿ ಅವರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಪುಣೆಯಲ್ಲಿ ಸಂತೋಷ್‌ ಶೆಟ್ಟಿ  ನೇತೃತ್ವ ದಲ್ಲಿ ಬಂಟರನ್ನು ಒಗ್ಗೂಡಿಸಿ ಹೊರನಾಡಿ ನಲ್ಲಿಯೂ ಬಂಟರು ಸೇರಿ ತಮ್ಮ ಪ್ರತಿಷ್ಠೆಯ ಸಂಕೇತವಾಗಿ ಬಂಟರ ಭವನ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯ. ಈ ರೀತಿಯಲ್ಲಿ ಒಗ್ಗೂಡಿದ ಬಂಟರು ಜಾಗತಿಕ ಮಟ್ಟದಲ್ಲಿ  ಎಲ್ಲರೂ ಸಮಾನರು ಎಂಬ ಭಾವನೆಯಿಂದ ನಡೆದುಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಪುಣೆಯಲ್ಲಿರುವ ಬಂಟರು ಒಕ್ಕೂಟದ ಮೂಲಕ ಸಮಾಜದ ಒಳಿತಿಗಾಗಿ ಕೈಜೋಡಿಸಬೇಕು ಎಂದು ತಿಳಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ ವಿ. ಶೆಟ್ಟಿ ಅವರು ತಮ್ಮ ಅಪೂರ್ವ ದೇಣಿಗೆ ನೀಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಪೋಷಕರಾಗಿ ಸೇರ್ಪಡೆಗೊಂಡರು. ಪುಣೆ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಶೀತಲ್‌ ಹೊಟೇಲ್‌ ಮಾಲಕ ವಿಶ್ವನಾಥ ಶೆಟ್ಟಿ, ವೈ. ಬಾಲಚಂದ್ರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಸಮಾಜಮುಖೀ ಚಿಂತನೆ ಮತ್ತು ಕಾರ್ಯವೈಖರಿಯನ್ನು ಮೆಚ್ಚಿ ಒಕ್ಕೂಟದ ಪೋಷಕರಾಗಿ ನೇಮಕಗೊಂಡರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರು ಸಮಾಜಮುಖೀ ಚಿಂತಕರಾಗಿ ಕಷ್ಟದಲ್ಲಿರುವವರ ಧ್ವನಿಯಾಗಿ ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ಬಡವರ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಾನವೀಯ ಹೃದಯವುಳ್ಳ  ಅವರು ಸಮಾಜದ ಶಕ್ತಿಯಾಗಿದ್ದಾರೆ. ಅವರ ಈ ಮಹಾನ್‌ ಕಾರ್ಯಕ್ಕೆ ಎಲ್ಲರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದರು.

Advertisement

ಮಹಿಳಾ ವಿಭಾಗದ ಸಂಧ್ಯಾ ಡಿ. ಶೆಟ್ಟಿ ಮಾತನಾಡಿ, ಜಗತ್ತಿನಲ್ಲಿನ ಬಂಟರು ಒಟ್ಟು ಸೇರಿದರೆ ಅಸಾಧ್ಯವಾದುದನ್ನು ಸಾಧ್ಯ ಮಾಡುವ ಶಕ್ತಿವಂತರಾಗುತ್ತಾರೆ. ಆದರೆ ಹೆಚ್ಚಿನವರು ನಮ್ಮ ಸಮಾಜದಲ್ಲಿ ಕಷ್ಟದಲ್ಲಿ ರುವವರಿಗೆ ಸಹಾಯ ಮಾಡುವಲ್ಲಿ ವಿಫಲರಾಗಿದ್ದಾರೆ. ಐಕಳ ಹರೀಶ್‌ ಶೆಟ್ಟಿ ಒಕ್ಕೂಟದ ಮೂಲಕ ಮಾಡುತ್ತಿರುವ ಸಮಾಜಪರ ಕಾರ್ಯಗಳು ಅಭಿನಂದನೀಯ ಎಂದರು.

ಶೇಖರ್‌ ಶೆಟ್ಟಿ, ಗಣೇಶ್‌ ಪೂಂಜ, ಬಾಲಜಿತ್‌ ಶೆಟ್ಟಿ, ದಿವೇಶ್‌ ಎ. ಶೆಟ್ಟಿ, ಶ್ರೀನಿವಾಸ್‌ ಎಸ್‌. ಶೆಟ್ಟಿ, ಉದಯ್‌ ಶೆಟ್ಟಿ, ನಿಶಾನ್‌ ಶೆಟ್ಟಿ, ವಿಶ್ವನಾಥ್‌ ಶೆಟ್ಟಿ, ರವಿ ಕೆ. ಶೆಟ್ಟಿ, ಗೀತಾ ಆರ್‌. ಶೆಟ್ಟಿ, ಜಗದೀಶ್‌ ಶೆಟ್ಟಿ, ಪೃಥ್ವಿ ಶೆಟ್ಟಿ, ಶೇಖರ್‌ ಸಿ. ಶೆಟ್ಟಿ, ಸಂಪತ್‌ ಶೆಟ್ಟಿ, ಸುಧಾಕರ ಶೆಟ್ಟಿ, ಅರುಣ್‌ ಶೆಟ್ಟಿ, ಸಂಧ್ಯಾ ವಿ. ಶೆಟ್ಟಿ, ಗೀತಾ ಶೆಟ್ಟಿ, ದಿವ್ಯಾ ಶೆಟ್ಟಿ, ದಾಮೋದರ ಶೆಟ್ಟಿ, ಶಾಲಿನಿ ಎಸ್‌. ಶೆಟ್ಟಿ, ಸತೀಶ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಶುಭ ಹಾರೈಸಿದರು. ಸಂತೋಷ್‌ ಶೆಟ್ಟಿ ಸ್ವಾಗತಿಸಿದರು. ಅಜಿತ್‌ ಹೆಗ್ಡೆ ವಂದಿಸಿದರು.

ಐಕಳ ಹರೀಶ್‌ ಶೆಟ್ಟಿ ಅವರು ಪುಣೆ ಬಂಟರ ಭವನ ನಿರ್ಮಾಣ ಸಮಯದಲ್ಲಿ ನಮಗೆ ಎಲ್ಲ ರೀತಿಯ ಸಹಾಯ ಸಹಕಾರವನ್ನು ನೀಡಿದ್ದಾರೆ. ಬಂಟ ಸಮಾಜಕ್ಕೆ ಐಕಳ ಹರೀಶ್‌ ಶೆಟ್ಟಿ ಪ್ರೇರಣ ಶಕ್ತಿಯಾಗಿದ್ದಾರೆ.ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು  ಅಧ್ಯಕ್ಷರು, ಪುಣೆ ಬಂಟರ ಸಂಘ

ಐಕಳ ಹರೀಶ್‌ ಶೆಟ್ಟಿ ಅವರಂಥ ನಾಯಕ ಇದ್ದಾಗ ನಮಗೆ ಕೆಲಸ ಮಾಡಲು ಉತ್ಸಾಹ ಮೂಡುತ್ತದೆ. ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ಬಂಟ ಸಮುದಾಯವನ್ನು ಉನ್ನತಮಟ್ಟಕ್ಕೆ ಕರೆದೊಯ್ಯಲು ಸಹಕಾರಿಯಾಗುತ್ತಿದೆ – ಮುಂಡ್ಕೂರು ರತ್ನಾಕರ ಶೆಟ್ಟಿ.ರತ್ನಾಕರ ಶೆಟ್ಟಿ ಮುಂಡ್ಕೂರು ಮಹಾಪೋಷಕರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next