Advertisement
ಎ. 3 ರಂದು ಕುರ್ಲಾ ಪೂರ್ವದ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ತುಂಗಾ ಸಂಕೀರ್ಣದ ಶ್ರೀ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ ಬಾಬಾಸ್ ಸಭಾಗೃಹದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಸ್ನೇಹ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಇವರು, ಐಕಳ ಹರೀಶ್ ಶೆಟ್ಟಿಯವರ ಸಂಘಟನ ಕ್ರೀಯಾಶೀಲತೆ, ಕಾರ್ಯಕ್ಷಮತೆ, ಜಾಣ್ಮೆ, ತಾಳ್ಮೆ, ಸ್ಥಿತಪ್ರಜ್ಞೆ, ಯೋಗ್ಯತೆ, ದೃಷ್ಟಿಕೋನ ಇವೆಲ್ಲವನ್ನು ಬಂಟ ಸಮಾಜವಿಂದು ಗುರುತಿಸಿ ವಿಶ್ವಮಾನ್ಯತೆ ನೀಡಿದೆ. ವಿಶ್ವದಲ್ಲಿರುವ ಎಲ್ಲಾ ಬಂಟ ಸಂಘ-ಸಂಸ್ಥೆಗಳ ಸಂಘಟನಾತ್ಮಕ ಶಕ್ತಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರೇರಣೆಯಾಗಿರಲಿ. ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾರಿಗೆ ಅದು ಅಸಾಧ್ಯವೋ ಅಂತಹವರು ಸಮಾಜ ಸೇವೆಯಲ್ಲಿ ತೊಡಗಿರುವ ಐಕಳ ಹರೀಶ್ ಶೆಟ್ಟಿಯವರಿಗೆ ಸಹಕಾರ ನೀಡುವ ಮೂಲಕ ಸೇವೆಗೆ ಮುಂದಾಗಬೇಕು. ಸಮಾಜಕ್ಕೆ ಐಕಳ ಹರೀಶ್ ಶೆಟ್ಟಿ ಅವರಂತಹ ಓರ್ವ ಸಮರ್ಥ ನಾಯಕನ ಆವಶ್ಯಕತೆಯಿತ್ತು. ಅದಿಂದು ಈಡೇರಿದೆ. ನಾವೆಲ್ಲರೂ ನೊಂದವರ ಬಾಳಿನ ಆಶಾಕಿರಣವಾಗೋಣ. ದೀಪದಿಂದ ದೀಪ ಹಚ್ಚುವ ಕಾಯಕಕ್ಕೆ ತೊಡಗೋಣ. ಸಮುದಾಯದ ಅಗತ್ಯತೆಗಳಿಗೆ ಸ್ಪಂದಿಸಿ ದಾರಿದೀಪವಾಗೋಣ ಎಂದು ನುಡಿದು, ಐಕಳರ ದೂರದೃಷ್ಟಿಯ ಕನಸನ್ನು ನನಸಾಗಿಸಲು ಸದಾ ಸರ್ವ ರೀತಿಯ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.
Related Articles
Advertisement
ಆರಂಭದಲ್ಲಿ ಉದ್ಯಮಿ ಆನಂದ ಶೆಟ್ಟಿ ತೋನ್ಸೆ ಇವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ಗಾಯಕ ಸುರೇಶ್ ಶೆಟ್ಟಿ ಶಿಬರೂರು ಪನ್ವೇಲ್ ಪ್ರಾರ್ಥನೆಗೈದರು. ಕಾರ್ಯಕ್ರಮ ಸಮಿತಿಯ ಸಂಚಾಲಕ ಉಳೂ¤ರು ಮೋಹನ್ದಾಸ್ ಶೆಟ್ಟಿ ಸ್ವಾಗತಿಸಿ, ವಿಶ್ವ ಬಂಟರ ಸಮ್ಮಿಲನ-2018 ಇದರ ಯಶಸ್ವಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಒಕ್ಕೂಟದ ಮಹಾಪೋಷಕರಾಗಿ ಸಹಕರಿಸಿದ ಮುಖ್ಯ ಅತಿಥಿ ಆನಂದ ಶೆಟ್ಟಿ ತೋನ್ಸೆ ಇವರನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಗಣ್ಯರು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆಯನ್ನು ಸಮ್ಮಾನಿಸಿ ಅಭಿನಂದಿಸಿದರು. ವೇದಿಕೆಯಲ್ಲಿದ್ದ ಅತಿಥಿ-ಗಣ್ಯರನ್ನು, ಮಹಾಪೋಷಕರು, ಪೋಷಕರು, ದಾನಿಗಳನ್ನು ಸದಸ್ಯತ್ವದ ಪ್ರಮಾಣ ಪತ್ರ ಹಾಗೂ ಪುಷ್ಪಗುಚ್ಚದೊಂದಿಗೆ ಗೌರವಿಸಲಾಯಿತು.
ಸ್ನೇಹ ಸಮ್ಮಿಲನದಲ್ಲಿ ಭಾಗಿಯಾದ ವಿವಿಧ ಬಂಟ-ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಬಂಟರವಾಣಿಯ ಗೌರವ ಪ್ರದಾನ ಸಂಪಾದಕ ಅಶೋಕ್ ಪಕ್ಕಳ ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ, ಗೌರವ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಗೌರವ ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಮಿತಿಯ ಸಂಚಾಲಕ ಉಳೂ¤ರು ಮೋಹನ್ದಾಸ್ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಸಂಚಾಲಕ ಶಾಂತಾರಾಮ ಬಿ. ಶೆಟ್ಟಿ ಉಪಸ್ಥಿತರಿದ್ದರು. ಸಮಾಜ ಬಾಂಧವರು, ವಿವಿಧ ಬಂಟ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಮಹಾಪೋಷಕರು, ಪೋಷಕರಾಗಿ ಸಹಕರಿಸಿದ ದಾನಿಗಳಿಗೆ ಕೃತಜ್ಞನಾಗಿದ್ದೇನೆ. ಬಂಟರ ಸಂಘ ಮುಂಬಯಿ ನನ್ನ ಜೀವನದಲ್ಲಿ ಬಹಳಷ್ಟು ಮನೋಲ್ಲಾಸ ನೀಡಿದ ಸಂಸ್ಥೆಯಾಗಿದೆ. ಮುಂಬಯಿ ಬಂಟರು ನನ್ನನೆಂದೂ ಮರೆಯದೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನಗೆ ನಿಮ್ಮೆಲ್ಲರ ಋಣವಿದೆ. ಆ ಋಣವನ್ನು ಸಮಾಜ ಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತೀರಿಸಲು ಪ್ರಯತ್ನಿಸುತ್ತೇನೆ. ಇಂದು ಬಹುದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲೇರಿಸಿಕೊಂಡಿದ್ದೇನೆ. ಸಮಾಜಕ್ಕೆ ಪ್ರಯೋಜನವಾಗುವ ಕಾರ್ಯವನ್ನು ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಯಾವುದೇ ಕುಂದು- ಕೊರತೆ ಬಾರದಂತೆ ಬಂಟರ ಸೇವಕನೆಂಬ ಭಾವ ದಿಂದ ವಿನಮ್ರತೆಯಿಂದ ನಡೆಸುತ್ತೇನೆ. ವಿಶ್ವ ಬಂಟರ ಸಮ್ಮಿಲನ ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಐಕಳ ಹರೀಶ್ ಶೆಟ್ಟಿ (ಅಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ). ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು