Advertisement

ಕೇಂದ್ರದ ಆಯುಷ್ಮಾನ್‌ ಯೋಜನೆಗೆ ಜಾಗತಿಕ ಮೆಚ್ಚುಗೆ

07:24 AM Feb 04, 2019 | Team Udayavani |

ನಂಜನಗೂಡು: ದೇಶದ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಯೋಜನೆಯನ್ನು ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿ‌ನಿ ಕುಮಾರ್‌ ಚೌಬೆ ತಿಳಿಸಿದರು.

Advertisement

ಸುತ್ತೂರಿನ ಜಾತ್ರಾ ಮಹೋತ್ಸವದಲ್ಲಿ ಚಿತ್ರಕಲೆ, ಗಾಳಿಪಟ ಸ್ಪರ್ಧೆ ಹಾಗೂ ದನಗಳ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, 70 ವರ್ಷಗಳಲ್ಲಿ ಸಾಧ್ಯವಾಗದ್ದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇವಲ ಐದು ವರ್ಷಗಳಲ್ಲಿ ಮಾಡಿದೆ.

ಆಯುಷ್ಮಾನ್‌ ಯೋಜನೆಯಿಂದ 40 ಕೋಟಿ ಮಂದಿ ಅನುಕೂಲ ಪಡೆಯಲಿದ್ದಾರೆ. ಸ್ವಚ್ಛ ಭಾರತ ಅಭಿಯಾನ, ಮೇಕ್‌ ಇನ್‌ ಇಂಡಿಯಾ, ಸಿಲ್ಕ್ ಇಂಡಿಯಾ ಮತ್ತಿತರ ಯೋಜನೆಗಳು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿವೆ ಎಂದು ತಿಳಿಸಿದರು.

ಅನಂತ್‌ ಸ್ಮರಣೆ: ಜನೌಷಧ ಮಳಿಗೆ ಮೂಲಕ ಬಡವರ ಕೈಗೆಟಕುವ ದರದಲ್ಲಿ ಔಷಧ ನೀಡುತ್ತಿರುವುದಕ್ಕೆ ಕರ್ನಾಟಕದವರಾದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಕೊಡುಗೆ ಸಾಕಷ್ಟಿದೆ ಎಂದು ಸ್ಮರಿಸಿದರು. ಮಾಜಿ ಸಚಿವ ರಾಮದಾಸ್‌ ಮಾತನಾಡಿ, ಕೇಂದ್ರ ಪಶು ರಕ್ಷಣೆಗಾಗಿ ಮುಂಗಡ ಪತ್ರದಲ್ಲಿ 7500 ಕೋಟಿ ರೂ. ಮೀಸಲಿಡಲು ಸುತ್ತೂರು ಮಠವೇ ಪ್ರೇರಣೆಯಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಸುತ್ತೂರು ಮಠ ಕೈ ಹಾಕದ ಸಮಾಜಮುಖೀ ಕೆಲಸಗಳೇ ಇಲ್ಲ. ಸುತ್ತೂರು ಮಠ ಅಭಿವೃದ್ಧಿ ವಿಷಯದಲ್ಲಿ ಸರ್ಕಾರಕ್ಕೆ ಪರ್ಯಾವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಸಿದ್ಧಗಂಗಾ ಶ್ರೀ ನೆನೆದು ಭಾವುಕರಾದ ಸಿದ್ಧಲಿಂಗ ಶ್ರೀ
ಮೈಸೂರು:
ಧರ್ಮ, ಮನುಷ್ಯರನ್ನು ದೈವೀಕತೆಯೆಡೆಗೆ ಕರೆದೊಯ್ಯುತ್ತದೆ. ಧರ್ಮವನ್ನು ಮರೆತರೆ ಮನುಷ್ಯ ಪ್ರಾಣಿಯಾಗುತ್ತಾನೆ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಇಂದು ಏನೆಲ್ಲಾ ಸೌಲಭ್ಯಗಳು ದೊರೆತರು ಶಾಂತಿ-ನೆಮ್ಮದಿ ಇಲ್ಲದಂತಾಗಿದೆ. ಶಾಂತಿ-ನೆಮ್ಮದಿ ಇಲ್ಲದಿದ್ದರೆ ಬದುಕು ನಾಶವಾಗುತ್ತದೆ. ಬಾಹ್ಯದಲ್ಲಿ ಅಲ್ಲದಿದ್ದರೂ ಆಂತರಿಕವಾಗಿ ಒಳಿತು-ಕೆಡಕುಗಳ ನಡುವೆ ಪ್ರತಿನಿತ್ಯ ಯುದ್ಧ ನಡೆಯುತ್ತಿದೆ. ಹೀಗಾಗಿ ಒಳಿತು ಗೆದ್ದು ಭೂ ಸಾಮ್ರಾಜ್ಯಕ್ಕಿಂತ ಮನೋ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರೆ ಮನಃಶಾಂತಿ ಸಿಗುತ್ತದೆ ಎಂದು ಹೇಳಿದರು.

ಜಾತ್ರೆಗಳ ಮೂಲಕ ದೇವರಲ್ಲಿ ಶ್ರದ್ಧೆ, ಧರ್ಮ ಜಾಗೃತಿ ಕೆಲಸಗಳು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯವನ್ನೂ ಮಾಡುತ್ತಾ ಬಂದಿರುವ ಸುತ್ತೂರು ಶ್ರೀಮಠಕ್ಕೂ ಸಿದ್ಧಗಂಗಾ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ಅರಮನೆ ಪಂಚಗವಿ ಮಠದ ಗೌರಿಶಂಕರ ಸ್ವಾಮಿಗಳು ಸುತ್ತೂರು ಮತ್ತು ಸಿದ್ಧ ಗಂಗೆ ಮಠಗಳು ಈ ಸಮಾಜದ ಎರಡು ಕಣ್ಣುಗಳು ಎಂದು ಕರೆದಿದ್ದರು ಎಂದು ಸ್ಮರಿಸಿದರು.

ಭಾವುಕರಾದ ಶ್ರೀ: ಪೂಜ್ಯ ಶಿವಕುಮಾರಸ್ವಾಮಿಗಳು ಈಗಿಲ್ಲ. ಭಕ್ತರ ಹೃದಯಗಳಲ್ಲಿ ಶಿವಕುಮಾರ ಸ್ವಾಮೀಜಿಗಳನ್ನು ಕಾಣುತ್ತಿದ್ದೇನೆ ಎನ್ನುವಾಗ ಭಾವುಕರಾದ ಸಿದ್ಧಲಿಂಗ ಸ್ವಾಮಿಗಳ ಕಣ್ಣಾಲಿಗಳಲ್ಲಿ ನೀರಾಡಿತು.

Advertisement

Udayavani is now on Telegram. Click here to join our channel and stay updated with the latest news.

Next