Advertisement

ಹೆಣ್ಮಕ್ಕಳ ಬವಣೆ ನೀಗಿಸಲು ಉಜ್ವಲ

01:19 PM Jul 04, 2017 | |

ಶಿವಮೊಗ್ಗ: “ಸಬ್‌ ಕೆ ಸಾಥ್‌ ಸಬ್‌ ಕಾ ವಿಕಾಸ್‌’ ಘೋಷಣೆಯಂತೆ ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ವರ್ಷಗಳ ತಮ್ಮ ಆಡಳಿತ ಅವಧಿಯಲ್ಲಿ ಹಲವು ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಹೀಗೆ ದೇಶದಲ್ಲಿನ ಎಲ್ಲ ಧರ್ಮದವರಿಗೂ ಅನ್ವಯವಾಗುವಂತೆ ಮೋದಿಯವರು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದಕ್ಕೆ ಉಜ್ವಲ ಯೋಜನೆ ಸೇರ್ಪಡೆಗೊಂಡಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ಮಹಿಳೆಯರ
ಸಂಕಷ್ಟ ಹೇಳತೀರದಾಗಿತ್ತು. ಹೆಣ್ಣುಮಕ್ಕಳ ಬವಣೆ ಕಂಡು ಪ್ರಧಾನಿ ಮೋದಿ ಉಚಿತವಾಗಿ ಅಡುಗೆ ಅನಿಲ ನೀಡುವ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಕೋಟ್ಯಂತರ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 5.31 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ದೊರಕಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಮಾರು 6.90 ಕೋಟಿ ಕುಟುಂಬಗಳಿಗೆ ಸಂಪರ್ಕ ಕಲ್ಪಿಸಿದೆ ಎಂದರು. ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ ನಂತರ ಬಂದಂತಹ ಸರ್ಕಾರ ಯೋಜನೆಗಳತ್ತ ಆಸಕ್ತಿ ತೋರದ ಕಾರಣ ಫಲಾನುಭವಿಗಳಿಗೆ ಸವಲತ್ತು ದೊರಕದಂತಾಗಿದೆ ಎಂದು ಆಪಾದಿಸಿದರು. ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ದೇಶದಲ್ಲಿನ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂಬ ಉದ್ದೇಶದಿಂದ ಪ್ರಧಾನಿ ಮೋದಿ,
ಬಡ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡುವ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದರು.

ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 1.25 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 50 ಸಾವಿರ ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿವೆ. ಇನ್ನು 50 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಪಡೆದುಕೊಳ್ಳಬೇಕಿದೆ. ಜಿಲ್ಲೆಯಲ್ಲಿನ ಅಡುಗೆ ಅನಿಲ ವಿತರಕರಿಗೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಇದೀಗ 7 ಸಾವಿರ ಫಲಾನುಭವಿ ಕುಟುಂಬಗಳ ಪಟ್ಟಿ ಸಿದ್ಧಗೊಂಡಿವೆ. ಅವರಿಗೆ ಯೋಜನೆಯನ್ವಯ ಅಡುಗೆ ಅನಿಲ ಸಂಪರ್ಕ
ನೀಡಲಾಗುವುದು ಎಂದು ತಿಳಿಸಿದರು.

ವಿಪ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ಮಾತನಾಡಿ, ಈ ಹಿಂದಿನ ಸರ್ಕಾರಗಳೇ ಯೋಜನೆಯನ್ನು ಜಾರಿಗೆ ತರಬಹುದಿತ್ತು. ಆದರೆ ಜನಪರ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಡುಗೆ ಮನೆಯಿಂದ ಆಕಾಶದವರೆಗೂ ಬದಲಾವಣೆ ಕಾಣಲಾಗುತ್ತಿದೆ ಎಂದರು.

Advertisement

ಪಾಲಿಕೆ ಉಪಮೇಯರ್‌ ರೂಪಾ ಲಕ್ಷ್ಮಣ, ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಪಾಲಿಕೆ ಸದಸ್ಯರಾದ ರಮೇಶ್‌, ಎನ್‌.ಜೆ.
ರಾಜಶೇಖರ್‌, ವೆಂಕ್ಯಾನಾಯ್ಕ, ಮಾಲತೇಶ್‌, ಸುರೇಖಾ ಮುರಳೀಧರ್‌, ಜಿ.ಪಂ. ಸದಸ್ಯ ವೀರಭದ್ರಪೂಜಾರ್‌, ಪೆಟ್ರೋಲಿಯಂ ಇಲಾಖೆ ಅಧಿಕಾರಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. 

ಶಿಕಾರಿಪುರದಲ್ಲಿ..
ಶಿಕಾರಿಪುರ:
ಮಹಿಳೆಯರು ಸ್ವಾಭಿಮಾನದಿಂದ ಬದುಕಬೇಕು. ಉರುವಲು ಹೊಗೆಯಿಂದ ಮುಕ್ತರಾಗಿ ಗೌರವಯುತ ಬದುಕು ಬಾಳುವಂತಾಗಬೇಕು ಎಂದು ಸಂಸದ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ಕೇಂದ್ರ ಸರ್ಕಾರದ
ಉಜ್ವಲ ಯೋಜನೆ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ರಾಘವೇಂದ್ರ, 
ಮಂಗಳೂರು ಭಾರತ್‌ ಪೆಟ್ರೋಲಿಯಂನ ನಾರಾಯಣ ಸ್ವಾಮಿ, ವೇಣುಗೋಪಾಲ ಅಗಡಿ, ಬಿ.ಆರ್‌. ಜಯಂತ,
ರವಿಕುಮಾರ, ರೂಪಕಲಾ ಹೆಗಡೆ, ಸತೀಶ್‌ ಕೆ.ಎಸ್‌, ಅರುಧಂತಿ, ಮಮ ದೇಶಾದ್ಯಂತ ಸುಮಾರು 8 ಸಾವಿರ ಕೋಟಿ ರೂ. ಗಳನ್ನು ಯೋಜನೆಗೆ ಮೀಸಲಿಡಲಾಗಿದೆ. 2016-17ನೇ ಸಾಲಿನಲ್ಲಿ ಯೋಜನೆಗೆಂದು 2 ಸಾವಿರ ಕೋಟಿ ರೂ. ಈಗಾಗಲೇ ಖರ್ಚು ಮಾಡಲಾಗಿದೆ. ಬಡ ಕುಟುಂಬದ ಪ್ರತಿಯೊಬ್ಬರಿಗೂ ಯೋಜನೆಯ ಲಾಭ ದೊರಕಲಿದೆ.
ಬಿ.ಎಸ್‌. ಯಡಿಯೂರಪ್ಪ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next