Advertisement

ಮನಮೋಹಕ ಸಿತಾರ್‌- ಬಾನ್ಸುರಿ ಜುಗಲ್ಬಂಧಿ

07:02 PM Sep 12, 2019 | mahesh |

ಮಂಗಳೂರಿನ ಶ್ರೀಕೃಷ್ಣ ಮಂದಿರದಲ್ಲಿ ತಾರಾನಾಥ ಜೋಶಿ ಮತ್ತು ಮನೀಷ್‌ ದಾಸ್‌ರವರ ಸಿತಾರ್‌ ಮತ್ತು ಬಾನ್ಸುರಿ ಜುಗಲ್ಬಂಧಿ ಆಯೋಜಿಸಿತ್ತು.ಧಾರ್ಮಿಕ ಸಮಾರಂಭಗಳಲ್ಲಿ ಸಂಗೀತ ಸಂಗಮಿಸಿದರೆ ಆಹ್ಲಾದಕರ ವಾತಾವರಣ ಮೂಡುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ನಿದರ್ಶನವಾಯಿತು.

Advertisement

ಕಾರ್ಯಕ್ರಮ ಚಿಕ್ಕದಾದರೂ ಅಚ್ಚುಕಟ್ಟಾಗಿ ಸಮಗ್ರ ಹೊಂದಾಣಿಕೆಯಿಂದ ಸುಲಲಿತವಾಗಿ ನಡೆಯಿತು.ಸಿತಾರ ವಾದಕರ ಕೃಂಥನ್‌ ಮತ್ತು ಝಮಾ ಝಮಾಗಳು ಪಂ| ರವಿಶಂಕರ್‌ ಅವರ ಶೆೃಲಿ ಬಿಂಬಿಸುತ್ತಿದ್ದವು. ಕನ್ನಡ ಮತ್ತು ಮರಾಠಿ ಸ್ತುತಿಗಳು ಪ್ರಸ್ತುತಗೊಂಡವು.

ಯಮನ್‌ ರಾಗದಲ್ಲಿ ಪ್ರಥಮತುಲಾ ವಂದಿತೋ ಸ್ತುತಿಯೊಂದಿಗೆ ಆರಂಭವಾಗಿ ರಾಮಾಚೆ ಭಜನ-ಬೇಹಾಗ್‌, ಯಾದವ ನೀ ಬಾ-ಭೀಮ ತಲಾಸ್‌, ರಾಮ ಕಾ ಗುಣಗಾನ- ಆಹಿರ್‌ ಬೈರವ, ಮಾಝೆ ಮಾಹೆರ ಪಂಡರಿ- ಮಾಂಡ,ಕೇಶವ ಮಾಧವ, ದುರ್ಗಾ ರಾಗದಲ್ಲಿ ಗಾಯತ್ರಿ ಮಂತ್ರ ಮತ್ತು ಗೋವಿಂದಬೊಲೊ ಭಜನಾ ಸ್ತುತಿ ಭೊಪಾಲೀ ರಾಗದಲ್ಲಿ ಮುಕ್ತಾಯಗೊಳಿಸಿದರು.

ತಬ್ಲಾದಲ್ಲಿ ಮಂಗಲದಾಸ ಗುಲ್ವಾಡಿ ,ತಾಳದಲ್ಲಿ ರಘುರಾಮ ಪೈ ಮತ್ತು ಮಾ| ಹೃಷಿಕೇಶ ಪೈ ಪ್ರತಿಭೆಯನ್ನು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದರು.

ಸಂದೀಪ್‌ ನಾಯಕ್‌ ಸುಜೀರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next