Advertisement

ಬಡ ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗುವೆ : ಯಶ್‌ಪಾಲ್‌ ಸುವರ್ಣ

03:02 PM May 07, 2023 | Team Udayavani |

ಮಲ್ಪೆ: ಮೀನು ಮಾರಾಟ ಮಾಡಿ ಸ್ವಾವಲಂಬಿ ಬದುಕು ನಡೆಸಿ ಕುಟುಂಬವನ್ನು ಸಲಹುವ ಮಹಿಳಾ ಮೀನುಗಾರರ ಜೀವನ ಸರ್ವರಿಗೂ ಮಾದರಿಯಾಗಿದ್ದು, ಮಹಿಳಾ ಮೀನುಗಾರರ ಜತೆ ಜತೆಗೆ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸುವ ಮಹಿಳೆಯರ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಧ್ವನಿಯಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಹೇಳಿದರು.

Advertisement

ಉಡುಪಿ ನಗರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮತ ಯಾಚನೆ ಮಾಡಿ ಮಾತನಾಡಿದರು.

ಮಹಿಳಾ ಮೀನುಗಾರರಿಗೆ ಹಲವು ಯೋಜನೆಗಳು
2009 ರಲ್ಲಿ ಜಿಲ್ಲೆಯ ಮೀನು ಮಾರಾಟ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಮಹಿಳಾ ಹಸಿಮೀನು ಮಾರಾಟ ಸಂಘವನ್ನು ಸ್ಥಾಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರವ ಸಂತೃಪ್ತಿ ಇದ್ದು, ಫೆಡರೇಶನ್‌ನ ಅಧ್ಯಕ್ಷನಾಗಿ ಮಹಿಳಾ ಮೀನುಗಾರರಿಗೆ ರಾಜ್ಯ ಸರಕಾರದ ಶೂನ್ಯ ಬಡ್ಡಿದರದ ಸಾಲ ಯೋಜನೆ, ಸಾಲ ಮನ್ನಾ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೈಟೆಕ್‌ ಮೀನು ಮಾರುಕಟ್ಟೆ ನಿರ್ಮಾಣ ಮೊದಲಾದ ಹಲವು ಯೋಜನೆಗಳನ್ನು ಮಹಿಳಾ ಮೀನು ಮಾರಾಟಗಾರರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್‌ ಮಾತನಾಡಿ, ಯಶ್‌ಪಾಲ್‌ ಸುವರ್ಣ ಅವರು ನಮ್ಮ ಸಂಘಟನೆಯ ಆರಂಭದ ದಿನದಿಂದಲೂ ಗೌರವ ಸಲಹೆಗಾರರಾಗಿ ಮಾರ್ಗದರ್ಶನ ನೀಡುವ ಮೂಲಕ ಶಕ್ತಿ ತುಂಬಿದ್ದಾರೆ. ವಿವಿಧ ಸಂದರ್ಭದಲ್ಲಿ ನಮ್ಮ ಸಮಸ್ಯೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿ ನಿಂತ ಯಶ್‌ಪಾಲ್‌ ಸುವರ್ಣ ಮುಂದಿನ ದಿನದಲ್ಲಿ ಓರ್ವ ಶಾಸಕರಾಗಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ, ಜತೆ ಕಾರ್ಯದರ್ಶಿ ಜಯಂತಿ ಗುರುದಾಸ್‌, ಪ್ರಮುಖರಾದ ಸುಮಿತ್ರಾ, ಭಾರತಿ ಸಾಲ್ಯಾನ್‌, ರತ್ನಾ ಕಾಂಚನ್‌ ಹಾಗೂ ಮಹಿಳಾ ಮೀನು ಮಾರಾಟಗಾರರು ಉಪಸ್ಥಿತರಿದ್ದರು.

Advertisement

ಹೂಹಾರ- ಜೈಕಾರ
ಯಶ್‌ ಪಾಲ್‌ ಸುವರ್ಣ ಅವರು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಹೂ ಮಾಲೆ ಹಾಕಿ ಜೈಕಾರ ಹಾಕಿ ಸ್ವಾಗತಿಸಿದರು. ಮಹಿಳಾ ಮೀನು ಮಾರಾಟಗಾರರ ಸಂಘಟನೆಗೆ ಬೆನ್ನೆಲುಬಾಗಿ ನಿಂತಿರುವ ಯಶ್‌ಪಾಲ್‌ ಸುವರ್ಣ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವುದಾಗಿ ಒಕ್ಕೊರಲಿನಿಂದ ಘೋಷಿಸಿದರು.

ಯಶ್‌ಪಾಲ್‌ ಸುವರ್ಣ ಈಗಾಗಲೇ ತಮ್ಮ ಕ್ರಿಯಾಶೀಲ ವ್ಯಕ್ತಿತ್ವ, ನಾಯಕತ್ವ ಗುಣಗಳಿಂದ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರ, ಧಾರ್ಮಿಕ, ಶಿಕ್ಷಣ, ರಾಜಕೀಯ, ಕ್ರೀಡೆ, ಉದ್ಯಮ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಯಶ್‌ಪಾಲ್‌ ಸುವರ್ಣ ತಮ್ಮ ಬದ್ಧತೆ, ಸಂಘಟನಾ ಕೌಶಲ್ಯದಿಂದ ಯುವ ಜನತೆಗೆ ಸ್ಪೂರ್ತಿಯಾಗಿ ಬೆಳೆದು ನಿಂತಿದ್ದಾರೆ. ಸಮಾಜಮುಖೀ ಚಿಂತನೆ, ದಕ್ಷ ಆಡಳಿತಗಾರರಾಗಿರುವ ಯಶ್‌ಪಾಲ್‌ ಸುವರ್ಣ ಅವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಲಭಿಸಲಿ ಎಂದು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ ಹೇಳಿದರು.

ಸಮಾಜದ ಅಭಿವೃದ್ಧಿಯ ವಿಶ್ವಾಸ
ಶಾಸಕ ರಘುಪತಿ ಭಟ್‌ ತಮ್ಮ ಅವಧಿಯಲ್ಲಿ ಮರಾಠಿ ಸಮುದಾಯದ ಅಭಿವೃದ್ಧಿ ಕಾರ್ಯ, ಬೇಡಿಕೆಗಳಿಗೆ ಸ್ಪಂದಿಸಿ ವಿಶೇಷ ಮುತುವರ್ಜಿ ತೋರಿದ್ದಾರೆ. ಪರಭಾರೆ ನಿಷೇಧದ ಅನ್ವಯ ಗೃಹ ನಿರ್ಮಾಣಕ್ಕೆ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ 10 ಸೆಂಟ್ಸ್‌ ಜಾಗ ಭೂ ಪರಿವರ್ತನೆಗೆ ವಿಶೇಷ ಅವಕಾಶ, ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಹತ್ರಕಟ್ಟೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಮುಂದಿನ ದಿನದಲ್ಲಿ ಹಿಂದೂ ಕಾರ್ಯಕರ್ತರಾಗಿ, ಮೀನುಗಾರಿಕಾ ಫೆಡರೇಶನ್‌ ಮತ್ತು ಮಹಾಲಕ್ಷ್ಮೀ ಬ್ಯಾಂಕ್‌ನ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲೂ ಅನುಭವಿಯಾಗಿರುವ ಸಮರ್ಥ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಶಾಸಕರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸವಿದ್ದು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಬಿಜೆಪಿ ಎಸ್‌. ಟಿ. ಮೋರ್ಚಾದ ರಾಜ್ಯ ಕಾರ್ಯದರ್ಶಿ ಉಮೇಶ್‌ ಎ. ನಾಯ್ಕ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next