ಮೈಸೂರು: ಹಿಂದೆ ವಿಧಾನ ಪರಿಷತ್ ಗೆ ದುಡ್ಡಿದ್ದವರಿಗೆ ಪ್ರವೇಶ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಂದು ಕ್ಷೇತ್ರಗಳಿಂದ ಪ್ರಬುದ್ಧರನ್ನು ನೇಮಕ ಮಾಡಲಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ದುಡ್ಡಿದ್ದವರಿಗೆ ಮೇಲ್ಮನೆಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಡ್ಡಗಾಡಿನಲ್ಲಿ ವಾಸ ಮಾಡುವವರ ಬಗ್ಗೆ ಯಾರು ಧ್ವನಿ ಎತ್ತುವುದಿಲ್ಲ. ಅಂತವರನ್ನು ಬಿಜೆಪಿ ಗುರುತಿಸಿ ಟಿಕೆಟ್ ನೀಡಿದೆ. ಇದು ಪಕ್ಷದ ಸಂಪ್ರದಾಯ. ಬಿಜೆಪಿ ಅಭ್ಯರ್ಥಿ ಮೈ.ವಿ ರವಿಶಂಕರ್, ನಾಲ್ಕು ಜಿಲ್ಲೆಗಳ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅಲ್ಪ ಮತಗಳಿಂದ ಸೋಲಾಯಿತು.ಈ ಚುನಾವಣೆಯಲ್ಲಿ ನಮಗೆ ಯಾರು ಪ್ರತಿಸ್ಪರ್ಧಿಗಳೇ ಇಲ್ಲಾ ಎಂದರು.
ಬಿಜೆಪಿಗೆ ಈ ಭಾರಿ ದೊಡ್ಡ ರೀತಿಯಲ್ಲಿ ಜನ ಬೆಂಬಲವಿದೆ. ಬಿಜೆಪಿ ಅಭ್ಯರ್ಥಿ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾರೆ. ಮೈಸೂರಿನಲ್ಲಿ ಈ ಭಾರಿ ಸಂಘನಾತ್ಮಕ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಗೆದ್ದೆ ಗೆಲ್ಲುತ್ತೇವೆ ಎಂದರು.
ಇದನ್ನೂ ಓದಿ:6ನೇ ತರಗತಿಯಿಂದಲೇ ಹೆಣ್ಣು ಮಕ್ಕಳಿಗೆ ಕರಾಟೆ ಅಭ್ಯಾಸಕ್ಕೆ ಚಿಂತನೆ: ಸಚಿವ ಕೋಟ
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘದ ಮೇಲೆ ಟ್ವೀಟ್ ಮಾಡಿ ಸುಸ್ತಾಗಿದೆ. ಇಂದಿನಿಂದ ಕುಮಾರಸ್ವಾಮಿ ಅವರ ವಿರುದ್ಧ ವಾರ್ ಶುರುವಾಗಿದೆ. ಕಾಂಗ್ರೆಸ್ ಅಳಿವಿನ ಅಂಚಿನಲ್ಲಿದೆ. ಅವರ ಟ್ವೀಟ್ ಗೆ ಉತ್ತರ ಕೊಡದೇ ಇರುವುದೇ ಲೇಸು. ಟ್ವೀಟ್ ಮಾಡುವುದೇ ಅವರಿಗೆ ಅಭ್ಯಾಸವಾಗಿದೆ ಎಂದು ಹೇಳಿದರು.