Advertisement

BJP: ಅಸಮರ್ಥ ಬೊಮ್ಮಾಯಿಗೆ ಅಧಿಕಾರ ಕೊಟ್ಟಿದ್ದರಿಂದ ಪಕ್ಷಕ್ಕೆ ಹೊಡೆತ: ಓಲೇಕಾರ

11:10 PM Aug 20, 2023 | Team Udayavani |

ಹಾವೇರಿ: ನನ್ನನ್ನು ಪಕ್ಷದ ಕಾರ್ಯಕ್ರಮಗಳಿಗೆ ಕರೆಯದಂತೆ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದು, ಇದು ದುರದೃಷ್ಟಕರ. ಪಕ್ಷ ಸಂಘಟನೆ ಮಾಡುವವರು ಈ ರೀತಿ ಮಾತನಾಡಬಾರದು. ಜಿಲ್ಲೆಯಿಂದ ಸಿಎಂ ಆಗಿದ್ದರೂ ಆ ಗೌರವವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಿಲ್ಲ ಎಂದು ಮಾಜಿ ಶಾಸಕ ನೆಹರು ಓಲೇಕಾರ ಕಿಡಿ ಕಾರಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ರಾಜ್ಯ ದಲ್ಲಿ ಪಕ್ಷ ಕುಸಿದು ಹೋಯಿತು. ಚುನಾವಣೆಯಲ್ಲಿ ಹಣ ಚೆಲ್ಲಿ ತಾವೊಬ್ಬರೇ ಗೆದ್ದದ್ದು ಬಿಟ್ಟರೆ, ಜಿಲ್ಲೆಯ ಉಳಿದೆಡೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯ ತ್ನಿಸಲಿಲ್ಲ. ಅಸಮರ್ಥರ ಕೈಯಲ್ಲಿ ಅ ಧಿಕಾರ ಕೊಟ್ಟರೆ ಪಕ್ಷಕ್ಕೆ ಹೊಡೆತ ಬೀಳುತ್ತದೆ. ಮುಂದೆ ಮತ್ತೆ ಬೊಮ್ಮಾಯಿಗೆ ಅಧಿ ಕಾರ ಕೊಟ್ಟರೆ ಪಕ್ಷ ಮತ್ತಷ್ಟು ದುರ್ಬಲವಾಗಲಿದೆ. ವರಿಷ್ಠರು ಈಗಲಾದರೂ ಆಲೋಚನೆ ಮಾಡಬೇಕು. ಬಿ.ಎಸ್‌. ಯಡಿಯೂರಪ್ಪ ಅವರಂಥವರ ಕೈಯಲ್ಲಿ ಜವಾಬ್ದಾರಿ ಕೊಟ್ಟರೆ ಪಕ್ಷ ಸಂಘಟನೆಯಾಗುತ್ತದೆ ಎಂದರು.

ನನ್ನ ಮೇಲೆ ಬೊಮ್ಮಾಯಿ ಸುಳ್ಳು ಆರೋಪ ಮಾಡಿದರು. ಇದರಿಂದ ನನಗೆ ನಷ್ಟವಾಗಲಿಲ್ಲ. ಆದರೆ ಪಕ್ಷಕ್ಕೆ ನಷ್ಟವಾಯಿತು. ನಾಯಕನಾದವರು ಎಲ್ಲರನ್ನೂ ಕರೆದುಕೊಂಡು ಹೋಗಬೇಕು. ಸಿಎಂ ಆಗಿದ್ದಾಗ ಬೊಮ್ಮಾಯಿ ಶಾಸಕರನ್ನು ಗೌರವ ದಿಂದ ನಡೆಸಿಕೊಳ್ಳಲಿಲ್ಲ. ಅವರ ಅಹಂಕಾರ ದಿಂದ ಬಿಜೆಪಿ ದಹಿಸಿ ಹೋಯಿತು. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಸೋತಿದೆ. ನನಗೆ ಬೇರೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದ್ದು, ಅದಕ್ಕೆ ನಾನು ಸ್ಪಂದಿಸಲಿಲ್ಲ. ಕಾಂಗ್ರೆಸ್‌ ಪಕ್ಷದಿಂದಲೂ ಆಹ್ವಾನ ಬಂದಿದೆ. ಮನಸ್ಸಿಗೆ ನೋವಾಗಿದ್ದರಿಂದ ನಾನು ಸದ್ಯ ತಟಸ್ಥನಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next