Advertisement

ರಾಜಕಾರಣಕ್ಕೆ ಎಂಟ್ರಿ ಕೊಡುವುದು ಗಾಳಿಮಾತು : ಡಾ.ಭೀಮಶಿ ಜಾರಕಿಹೊಳಿ

05:19 PM May 11, 2022 | Team Udayavani |

ಚಿಕ್ಕೋಡಿ: ಜಾರಕಿಹೊಳಿ ಕುಟುಂಬದಲ್ಲಿ ಈಗಾಗಲೇ ನಾಲ್ಕು ಜನ ಸಹೋದರರು ರಾಜಕಾರಣದಲ್ಲಿ ಇದ್ದು, ನಾನು ರಾಜಕಾರಣಕ್ಕೆ ಎಂಟ್ರಿ ಕೊಡುತ್ತೇನೆ ಎನ್ನುವುದು ಗಾಳಿಮಾತಾಗಿದೆ ಎಂದು ಡಾ. ಭೀಮಶಿ ಜಾರಕಿಹೊಳಿ ಹೇಳಿದ್ದಾರೆ.

Advertisement

ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದಲ್ಲಿ ಶ್ರೀ ಮಹಾದುರ್ಗಾ, ಮಹಾಕಾಳಿ ಹಾಗೂ ಮಹಾಪ್ರತ್ಯಾಂಗಿರಾದೇವಿ ಮಂದಿರದ ವಾಸ್ತುಶಾಂತಿ, ಗೃಹಪ್ರವೇಶ ಹಾಗೂ ಮೂರ್ತಿಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಆದರೆ ನಾನು ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಗುರ್ತಿಸಿಕೊಳ್ಳದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಸೇವೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದರು.

ಪತ್ರಕರ್ತರ ಅನುಕೂಲಕ್ಕಾಗಿ ಬೆಳಗಾವಿ ನಗರದಲ್ಲಿ ಹೈಟೆಕ್ ಪತ್ರಿಕಾ ಭವನ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಈಗಾಗಲೇ ನೀಲ ನಕ್ಷೆ ತಯಾರಿಸಿದ್ದು, ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳು ಶಿಲಾನ್ಯಾಸ ನೇರವೇರಿಸಲಿದ್ದಾರೆ ಎಂದರು.

ರೂಪಿನಾಳ ಗ್ರಾಮದಲ್ಲಿ ಅಪ್ಪಾಸಾಹೇಬ ಖಿರಾಯಿ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಜಾಗೃತ ಮಹಾದುರ್ಗಾ ದೇವಸ್ಥಾನ ದಿನದಿಂದ ದಿನಕ್ಕೆ ಜನಪ್ರೀಯತೆ ಪಡೆಯುತ್ತಿದ್ದು, ಈ ಕ್ಷೇತ್ರ ಮುಂಬರುವ ದಿನಗಳಲ್ಲಿ ಪುಣ್ಯಕ್ಷೇತ್ರವಾಗಿ ಹೊರಹೊಮ್ಮಲಿ ಎಂದರು. ಮಂದಿರದಲ್ಲಿ ಬಿದರೊಳ್ಳಿಯ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಗದುಮ್ಮ, ಶಂಕರ ಧನವಾಡೆ, ರಮೇಶ ಖಾನಾಪೂರೆ, ಕುಮಾರ ಮಂಗಾಜ, ರೇವಪ್ಪ ತಳವಾರ, ರಾಜು ಹಣಬರ, ಬಾಳಕೃಷ್ಣ ಉಸ್ಕೇ, ಮಂಜುನಾಥ ಹಿರೇಕೊಡಿ, ವಿರೂಪಾಕ್ಷಿ ಬಾಹದ್ದೂರ, ಮಹಾಂತೇಶ ರೇಂದಾಳೆ, ವಿಜಯ ಧನವಾಡೆ, ಶಿವಾನಂದ ರೇಂದಾಳೆ, ಸತ್ಯೇಪ್ಪ ಖೋತ, ಬಾಳು ಜನವಾಡೆ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಂದಿರದ ಉನ್ನತಿಗಾಗಿ ಶ್ರಮಿಸಿದ ಡಾ, ಭೀಮಶಿ ಜಾರಕಿಹೊಳಿ ಅವರನ್ನು ಅಪ್ಪಾಸಾಹೇಬ ಖಿರಾಯಿ ಸನ್ಮಾನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next