ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದರು.
Advertisement
ನಗರದ ಕರಾವಳಿ ಮೈದಾನದಲ್ಲಿ ಇತ್ತೀಚೆಗೆ ನಡೆದ ರೆಡ್ ಎಫ್.ಎಂ. ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಚಲನಚಿತ್ರದಂತೆಯೇ ತುಳು ಚಿತ್ರರಂಗ ಕೂಡ ಬೆಳೆಯುತ್ತಿದೆ. ತುಳು ಚಿತ್ರದ ಕಲಾವಿದರು ಕನ್ನಡ ಚಲನ ಚಿತ್ರ ಕ್ಷೇತ್ರದಲ್ಲಿಯೂ ಮಿಂಚುತ್ತಿದ್ದಾರೆ. ಇದು ತುಳುನಾಡಿಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ನಿರ್ದೇಶಕ, ನಟ ಋಶಭ್ ಶೆಟ್ಟಿ ಮಾತನಾಡಿ, ಆರು ವರ್ಷಗಳಲ್ಲಿ ತುಳು ಚಲನಚಿತ್ರ ಕ್ಷೇತ್ರ ಗಮನಾರ್ಹ ಬೆಳವಣಿಗೆ ಕಂಡಿದೆ. ಸ್ಥಳೀಯ ಪ್ರತಿಭೆಗಳಿಗೆ ತುಳು ಚಲನಚಿತ್ರ ವೇದಿಕೆ ನೀಡುತ್ತಿದೆ ಎಂದರು. 24 ವಿಭಾಗಗಳಲ್ಲಿ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಒಟ್ಟು 24 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು, ಉತ್ತಮ ಚಲನಚಿತ್ರ ಪ್ರಶಸ್ತಿ ಪಿಲಿಬೈಲು
ಯಮುನಕ್ಕ ಚಿತ್ರದ ಪಾಲಾಯಿತು. ಉತ್ತಮ ನಟ ಪ್ರಶಸ್ತಿ ಪಿಲಿಬೈಲು ಯಮುನಕ್ಕ ಚಿತ್ರ ನಟನೆಗೆ ಪೃಥ್ವಿ ಅಂಬರ್ ಪಡೆದರೆ, ಪವಿತ್ರ ಚಲನಚಿತ್ರದ ನಟನೆಗೆ ಚಿರಶ್ರೀ ಅಂಚನ್ ಅವರು ಉತ್ತಮ ನಟಿ ಪ್ರಶಸ್ತಿ ಪಡೆದರು. ಜೂರಿ ಸ್ಪೆಷಲ್ ಅವಾರ್ಡ್ ನವೀನ್ ಡಿ. ಪಡೀಲ್, ಜೀವಮಾನ ಸಾಧನೆ ಪ್ರಶಸ್ತಿ- ಎಂ.ಕೆ. ಸೀತಾರಾಮ ಕುಲಾಲ್ ಅವರಿಗೆ ಲಭಿಸಿತು.
Related Articles
Advertisement
ದಿನದಿಂದ ದಿನಕ್ಕೆ ತುಳು ಪ್ರಜ್ವಲನಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಮೋಹನ್ ಆಳ್ವ ಮಾತನಾಡಿ, 47 ವರ್ಷಗಳಲ್ಲಿ ಸುಮಾರು 80ಕ್ಕೂ ಹೆಚ್ಚಿನ ತುಳು ಚಲನಚಿತ್ರಗಳು ತೆರೆ ಕಂಡಿವೆ. ಅನೇಕ ಭಾಷೆಗಳು ಅವನತಿ ಕಾಣುತ್ತಿರುವ ಈ ಸಂದರ್ಭದಲ್ಲಿ ತುಳು ದಿನದಿಂದ ದಿನಕ್ಕೆ ಪ್ರಜ್ವಲಿಸುತ್ತಿದೆ ಎಂದರು.