Advertisement

ಕನಿಷ್ಟ 2 ದಿನಕ್ಕೊಮ್ಮೆಯಾದ್ರೂ ನೀರು ಕೊಡಿ

04:11 PM Nov 27, 2020 | Mithun PG |

ಬೀಳಗಿ: ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿರುವ ಶುದ್ಧ ಕುಡಿವ ನೀರಿನ ಘಟಕವನ್ನು ಕೂಡಲೇ ಆರಂಭಿಸಬೇಕು, ವಾರಕ್ಕೊಮ್ಮೆ ನೀರು ಬಿಡುತ್ತಿದ್ದು, ಕನಿಷ್ಠ ಎರಡು ದಿನಕ್ಕೊಮ್ಮೆಯಾದ್ರೂ ನೀರು ಬಿಡುವ ಮೂಲಕ ನೀರಿನ ಸಮಸ್ಯೆ ನೀಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದ ಕಿಲ್ಲಾಗಲ್ಲಿಯ ವೀರಭದ್ರೇಶ್ವರ ಮಹಿಳಾ ಮಂಡಳದ ಮಹಿಳೆಯರು ಪಪಂ ಅಧ್ಯಕ್ಷರಿಗೆ ಗುರುವಾರ ಮನವಿ ಸಲ್ಲಿಸಿದರು.

Advertisement

ವೀರಭದ್ರೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ಕಮಲಾ ಹಳ್ಳೂರ ಮಾತನಾಡಿ, ಕಿಲ್ಲಾ ಗಲ್ಲಿಯ ವೀರಭದ್ರೇಶ್ವರ ದೇವಸ್ಥಾನ ಮುಂದೆ ಅರ್ಧಕ್ಕೆ ನಿಂತ ಸಮುದಾಯ ಭವನ ನಿರ್ಮಿಸಲು ಶೀಘ್ರವೇ ಮುಂದಾಗಬೇಕು. ಈ ಮೊದಲು ಎರಡು ದಿನಕ್ಕೊಮ್ಮೆ ಕುಡಿವ ನೀರು ಸರಬರಾಜಾಗುತ್ತಿತ್ತು. ಸದ್ಯ, ವಾರಕ್ಕೊಮ್ಮೆ ನೀರು ಸಿಕ್ಕರೆ ಪುಣ್ಯ ಎನ್ನುವಂತಾಗಿದೆ. ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ:ಸಕ್ಕರೆ ಗೊಂಬೆಗೆ ಹೆಚ್ಚುತ್ತಿದೆ ಬೇಡಿಕೆ

ತಾಲೂಕಿನ ಎಡ-ಬಲ ಕೃಷ್ಣೆ, ಘಟಪ್ರಭೆ ಮೈದುಂಬಿಕೊಂಡಿದ್ದರೂ ಪಟ್ಟಣದ ಜನತೆ ಹನಿ ನೀರಿಗಾಗಿ ಈಗಲೂ ಪರಿತಪಿಸುತ್ತಿರುವುದು ಪಪಂ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ ಶೀಘ್ರವೇ ಪರಿಹರಿಸಬೇಕು. ಇಲ್ಲದಿದ್ದರೆ ಪಪಂ ಎದುರು ಖಾಲಿ ಕೊಡಗಳನ್ನಿಟ್ಟು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಪಪಂ ಅಧ್ಯಕ್ಷ ಶಿದ್ಲಿಂಗೇಶ ನಾಗರಾಳ ಮನವಿ ಸ್ವೀಕರಿಸಿ, ಈ ಎಲ್ಲ ಸಮಸ್ಯೆಗಳಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ಸಮಸ್ಯೆ ಪರಿಹರಿಸಲಾಗುವುದು. ಎರಡು ದಿನಕ್ಕೊಮ್ಮೆ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಹಿಳಾ ಸಂಘದ ಮಹಾದೇವಿ ಡಂಗಿ, ಶಾರದಾ ಪಾಟೀಲ, ಸಂಗಮ್ಮ ಪಾಟೀಲ, ನೀಲಮ್ಮ ಮಮದಾಪುರ, ಕಮಲಾಕ್ಷಿ ಬಾಗೇವಾಡಿ, ಶಾಂತವ್ವ ನಾವಿ, ಶೋಭಾ ಬಗಲಿ, ಚನ್ನಮ್ಮ ಬಾಗೇವಾಡಿ, ಪಪಂ  ಸದಸ್ಯ ವಿಠಲ ಬಾಗೇವಾಡಿ, ಪರಶುರಾಮ ಮಮದಾಪುರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next