Advertisement

ಮನೆ ಮನೆಗೆ ತೆರಳಿ ಮಹಿಳೆಯರಿಗೆ ಕುಂಕುಮ ನೀಡಿ: ಪರಂ

11:54 AM Nov 05, 2017 | |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಪ್ರತಿ ಮನೆಗೂ ತೆರಳಿ ಮಹಿಳೆಯರಿಗೆ ಅರಿಶಿನ- ಕುಂಕುಮ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಮಹಿಳಾ ಘಟಕಕ್ಕೆ ಸೂಚನೆ ನೀಡಿದ್ದಾರೆ.

Advertisement

ಬೆಂಗಳೂರು ಅರಮನೆ ಮೈದಾನದಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯ ಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, 2018ರ ಎಪ್ರಿಲ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮಹಿಳೆಯರು ಮಹಿಳಾ ಮತದಾರರ ಮನೆಗಳಿಗೆ ತೆರಳಿ ಅರಿಶಿನ-ಕುಂಕುಮ ನೀಡಿ. ಜಿಲ್ಲಾ ಮಟ್ಟದಲ್ಲಿ  ಇಂದಿರಾ ನಮನ ಅಭಿ ಯಾನವೂ ನಡೆಯುತ್ತಿರುವುದರಿಂದ ಮನೆ ಮನೆಗೆ ಇಂದಿರಾ ದೀಪ (ಹಣತೆ) ತಲುಪಿಸಿ ಎಂದು ಹೇಳಿದರು.

ನ. 19ರಂದು ಇಂದಿರಾ ಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಕಾಂಗ್ರೆಸ್‌ ಗ್ರಾ.ಪಂ. ಮಟ್ಟ ದಲ್ಲಿ “ಇಂದಿರಾ ದೀಪ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇಂದಿರಾ ಗಾಂಧಿ ದೇಶದ ಅಭಿವೃದ್ಧಿಗೆ ಶ್ರಮಿಸಿ, ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡಿದ್ದರು. ಅವರ ಹೆಸರಿನಲ್ಲಿ ಮನೆ ಮನೆಗೆ ದೀಪ ಕೊಡುವ ಕೆಲಸ ಮಾಡಿ ಎಂದು ತಿಳಿಸಿದರು.

ಮಹಿಳೆಯರು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಗೆಲ್ಲುವ ಸಾಮರ್ಥ್ಯ ಬೆಳೆಸಿ ಕೊಳ್ಳಬೇಕು. ಗೆಲ್ಲುವ  ಸಾಮರ್ಥ್ಯವಿದ್ದರೆ ಶೇ. 33 ಮೀಸಲಾತಿಗಿಂತಲೂ ಹೆಚ್ಚಿನ ಸ್ಥಾನ ನೀಡಲು ಪಕ್ಷ ಸಿದ್ಧವಿದೆ. ಪಕ್ಷದಲ್ಲಿ ಪ್ರಥಮ ಬಾರಿಗೆ ಪದಾಧಿಕಾರಿಗಳು ಹಾಗೂ ನಿಗಮ-ಮಂಡಳಿ ಅಧ್ಯಕ್ಷರ ಸ್ಥಾನಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಬೂತ್‌ ಮಟ್ಟದ ಕಮಿಟಿ ಯಲ್ಲಿಯೂ ಪ್ರತಿ ಬೂತ್‌ನಲ್ಲಿ ಮೂವರು ಮಹಿಳೆಯರು ಇರಲೇ ಬೇಕೆಂದು ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next