Advertisement
ಒಂದು ದಿನ ಒಬ್ಬರು ನಡುವಯಸ್ಕರು ಹತ್ತಿದರು. ಅಕಿವರು ನನ್ನನ್ನೇ ನೋಡಿ ನಗುತ್ತಿದ್ದರು. “ಕುಳಿತುಕೊಳ್ಳುತ್ತೀರಾ?’ ಎಂದು ಕೇಳಿದೆ. ಆಗ ಅವರು, “ಬನ್ನಿ , ಬನ್ನಿ ನಿಮಗಾಗಿಯೇ ಇಲ್ಲಿ ಸೀಟು ಸಿದ್ಧವಾಗಿದೆ ಬನ್ನಿ’ ಎಂದು ಅವರಿಗಿಂತ ಸ್ವಲ್ಪ ವಯಸ್ಸಾದವರನ್ನು ಆ ನಡುವಯಸ್ಕ ಕರೆದು ಅಲ್ಲಿ ಕುಳ್ಳಿರಿಸಿದರು. ನಾನು ಎದ್ದು ನನ್ನ ಗೆಳೆಯರ ಬಳಿ ಹೋಗಿ ಕುಳಿತುಕೊಂಡೆ. ನನ್ನ ಗೆಳೆಯರು ನಾನು ಆ ವೃದ್ಧರಿಗೆ ಸೀಟು ಬಿಟ್ಟುಕೊಟ್ಟಿದ್ದಕ್ಕೆ ಹೊಗಳಿ ಅಟ್ಟಕ್ಕೇರಿಸಿದರು. ನನಗಂತೂ ಆವತ್ತು ತುಂಬ ಖುಷಿಯಾಯಿತು. ಮುಂದಿನ ಸ್ಟಾಪ್‌ನಲ್ಲಿ ಈ ಮೊದಲು ಬಸ್ಸು ಹತ್ತಿದವರಿಗಿಂತಲೂ ಇನ್ನೂ ವಯಸ್ಸಾದವರು ಬಸ್ಸು ಹತ್ತಿದರು. ಆಗ ಆ ಸೀಟಿನಲ್ಲಿ ಕುಳಿತಿದ್ದವರು ಎದ್ದು ವಯಸ್ಸಾದ ಅವರಿಗೆ ಸೀಟು ಬಿಟ್ಟು ಕೊಟ್ಟರು. ಆಗ ನಾನಂದುಕೊಂಡೆ, ಆ ಮಧ್ಯ ವಯಸ್ಕರೇ ವಯಸ್ಸಾದವರಿಗೆ ಸೀಟು ಬಿಟ್ಟು ಕೊಟ್ಟರು. ಒಂದು ವೇಳೆ ನಾನೇನಾದರೂ ನಾನಿದ್ದ ಸೀಟು ಬಿಟ್ಟುಕೊಡದೇ ಇದಿದ್ದದರೆ…? ಎಂದು.
ಪ್ರಥಮ ಬಿ. ಕಾಂ.
ಡಾ. ಬಿ. ಬಿ. ಹೆಗ್ಡೆ ಫಸ್ಟ್ ಗ್ರೇಡ್ ಕಾಲೇಜು, ಕುಂದಾಪುರ