Advertisement
ಅವರು ಸೋಮವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ಮುಂಗಾರು ಪೂರ್ವ ಕಾರ್ಯಾಗಾರ ಮತ್ತು ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ರೈತರು ನಿರಾಸೆಯಿಂದ ಕಂಗಾ ಲಾಗದಿರಿ. ಆತ್ಮಸ್ಥೈರ್ಯದಿಂದ ಮುನ್ನಡೆ ಯಿರಿ. ಒಳ್ಳೆಯ ದಿನಗಳು ಬಂದೇ ಬರುತ್ತವೆ. ಕೃಷಿ, ಕೃಷಿಕನಿಂದ ಮಾತ್ರ ದೇಶ ಉಳಿಯುತ್ತದೆ ಎಂದರು.
Related Articles
ಪ್ರಕೃತಿ ಸೂರೆಗೈದ ಪರಿಣಾಮವಾಗಿ ಈ ವರ್ಷ ಕಂಡುಕೇಳರಿಯದ ರೀತಿಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ವಾರಾಹಿ ಏತ ನೀರಾವರಿ ಯೋಜನೆ ಜಾರಿಯಾದಲ್ಲಿ ಜಿಲ್ಲೆಯ ಬಹುತೇಕ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸತೀಶ್ ಕುಮಾರ್ ಶೆಟ್ಟಿ ಹೇಳಿದರು.
Advertisement
ಕಾಡು ಪ್ರಾಣಿ ಹಾವಳಿಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಕರು ತತ್ತರಿಸಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ತುರ್ತು ಅವಶ್ಯ ಎಂದು ಶಿರ್ಲಾಲಿನ ಪ್ರಗತಿಪರ ಕೃಷಿಕ ಗುಣಪಾಲ ಕಡಂಬ ಹೇಳಿದರು. ಕರಾವಳಿ ಯಲ್ಲಿ ಹರಿಯುವ ನೀರನ್ನು ತಡೆದು ಇಂಗಿಸುವ ಅಗತ್ಯವಿದೆ ಎಂದರು. ಸಹ ಸಂಶೋಧನಾ ನಿರ್ದೇಶಕ ಡಾ| ಎಸ್.ಯು. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ಅಧಿಕಾರಿ ಮೋಹನ್ ರಾಜ್, ಪ್ರಗತಿಪರ ಕೃಷಿಕರಾದ ರಾಘವೇಂದ್ರ ಪೈ ಶಿರ್ವ, ನಿತ್ಯಾನಂದ ಶೆಟ್ಟಿ, ಕೆವಿಕೆ ಮುಖ್ಯಸ್ಥ ಡಾ| ಬಿ. ಧನಂಜಯ ಮೊದಲಾದವರು ಉಪಸ್ಥಿತರಿದ್ದರು.
ತಾಂತ್ರಿಕ ಕೈಪಿಡಿ ಬಿಡುಗಡೆಗೊಂಡಿತು. ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಕೆ.ವಿ. ಸುಧೀರ್ ಕಾಮತ್ ಸ್ವಾಗತಿಸಿ, ಡಾ| ಆರ್. ಜಯಪ್ರಕಾಶ್ ವಂದಿಸಿದರು. ಡಾ| ಎನ್. ಇ. ನವೀನ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಲಾಭದಾಯಕ ಗುರಿ
ಕೃಷಿಯಲ್ಲಿ ವೆಚ್ಚ ಕಡಿಮೆಗೊಳಿಸಿ ಇಳುವರಿ ಜಾಸ್ತಿ ಮಾಡುವುದೇ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಉದ್ದೇಶ. ತನ್ಮೂಲಕ ಕೃಷಿ ಲಾಭದಾಯಕವಾಗಿಸುವ ಗುರಿಯೊಂದಿಗೆ ಈ ನೂತನ ಯೋಜನೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಈ ವರ್ಷ 20,000 ಹೆಕ್ಟೇರ್, ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ನೈಸರ್ಗಿಕ ಕೃಷಿ ಜಾರಿಗೊಳಿಸುವ ಯೋಜನೆ ಸರಕಾರ ಹಾಕಿಕೊಂಡಿದೆ.
-ಡಾ| ಕೆ.ವಿ. ಸುಧೀರ್ ಕಾಮತ್