ತ್ಯಾಗರಾಜ ಪರಮಶಿವ ಕೈಲಾಸಂ ಅಂದರೆ ಹೆಚ್ಚಿನವರಿಗೆ ತಕ್ಷಣ ಅರ್ಥವಾಗುವುದಿಲ್ಲ . ಆದರೆ, ಟಿ ಪಿ ಕೈಲಾಸಂ ಅಂದರೆ- “ಓಹ್, ಅವರಾ? ಅವರು ಕನ್ನಡ ಸಾಹಿತ್ಯದ ಮುಖ್ಯ ಲೇಖಕರು, ಮಹಾನ್ ನಾಟಕಕಾರರು’ ಅನ್ನುವ ವಿವರ ದೊರಕುತ್ತದೆ. ಕೈಲಾಸಂ ಅವರ ತಂದೆ, ಆ ಕಾಲಕ್ಕೇ ನ್ಯಾಯಾಧೀಶರಾಗಿದ್ದರು. ಅಂಥವರ ಪುತ್ರ ಕೈಲಾಸಂ ಕುರಿತು ಇರುವ ಕತೆಗಳಿಗೆ ಲೆಕ್ಕವಿಲ್ಲ. ಆ ಪೈಕಿ
ಸ್ವಾರಸ್ಯಕರ ಎಂಬಂಥ ಒಂದು ಪ್ರಸಂಗ ಹೀಗಿದೆ.
ಕೈಲಾಸಂ, ಗಣಿತದಲ್ಲಿ ವಿಪರೀತ ಬುದ್ಧಿವಂತರಾಗಿದ್ದರಂತೆ. ಅವರು ಹಾಸನದಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದು ಸೂಚನೆ ನೀಡಲಾಗಿತ್ತಂತೆ.
ಈ ಕೈಲಾಸಂ ಸಾಹೇಬರು, ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಬಿಡಿಸಿ-ಉತ್ತರ ಪತ್ರಿಕೆಯ ಕೆಳಗೆ- ಮಾನ್ಯ ಪರೀಕ್ಷಕರೆ, ನಿಮಗೆ ಇಷ್ಟವಾದ ಯಾವುದಾದರೂ ಹತ್ತು ಉತ್ತರಗಳನ್ನು ನೀವೇ ಆಯ್ಕೆ ಮಾಡಿಕೊಂಡು. ಅಷ್ಟಕ್ಕೇ ಮಾರ್ಕ್ಸ್ ಕೊಡಿ’ ಎಂದು ಬರೆದಿದ್ದರಂತೆ!
ಇದನ್ನು ಓದಿದ ಪರಿವೀಕ್ಷಕರಿಗೆ ಹೇಗೆ ಆಗಿರಬೇಡ. ಪರೀಕ್ಷೆ ಬರೆಯುವುದು ಅಂದರೆ ಹೀಗಲ್ವಾ?