Advertisement

ಗೋಂಧಳಿ ಸಮಾಜಕ್ಕೂ ವಿಶೇಷ ಪ್ಯಾಕೇಜ್‌ ನೀಡಲಿ

07:54 AM May 09, 2020 | Suhan S |

ಬಳ್ಳಾರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಅಲೆಮಾರಿ ಗೋಂಧಳಿ ಸಮಾಜಕ್ಕೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಬೇಕೆಂದು ಒತ್ತಾಯಿಸಿ ಸಂಘದ ಮುಖಂಡರು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಂಕಷ್ಟಕ್ಕೊಳಗಾದವರಿಗೆ 1610 ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಿದ್ದು ಅಭಿನಂದನೀಯ. ಅಲೆಮಾರಿ ಸಮುದಾಯಕ್ಕೆ ಸೇರಿದ ಲಕ್ಷಾಂತರ ಕುಟುಂಬಗಳೂ ಜೀವನ ನಿರ್ವಹಣೆ ಮಾಡಲಾಗದೆ ತೊಂದರೆಗೊಳಗಾಗಿವೆ. ಗೋಂಧಳಿ, ಬುಡಬುಡಿಕೆ ಸಮುದಾಯದ ಅಲೆಮಾರಿ ಜನರು ಹೊಟ್ಟೆಗೆ ಹಿಡಿ ಅನ್ನ ಇಲ್ಲದೇ ದಯನೀಯ ಸ್ಥಿತಿ ತಲುಪಿದ್ದಾರೆ. ಗೊಂದಲ ಹಾಡುತ್ತ, ಬುಡಬುಡಿಕೆ ನುಡಿಸುತ್ತ ಭಿಕ್ಷಾಟನೆ ಮಾಡುವವರು ತೊಂದರೆಗೀಡಾಗಿದ್ದಾರೆ. ಕೌದಿ ಹೊಲಿಯುವವರು, ಪಾತ್ರೆ ವ್ಯಾಪಾರ, ಕಬ್ಬಿಣ ಗುಜರಿ, ಹಳೇ ತಗಡು, ಹಳೇ ಸಾಮಾನು ಮೋಡಕಾ, ತಳ್ಳು ಗಾಡಿ, ಬೈಕ್‌ ಮೂಲಕ ಹಳ್ಳಿ ಹಳ್ಳಿಗೆ ತೆರಳಿ ವ್ಯಾಪಾರ ಮಾಡುವ ಜನರ ಬದುಕು ದುಸ್ತರವಾಗಿದೆ.

ಹಳ್ಳಿಗಳಲ್ಲಿ ವ್ಯಾಪಾರ ಮಾಡಲು ಗ್ರಾಮಸ್ಥರು ಅವಕಾಶ ಮಾಡಿಕೊಡುತ್ತಿಲ್ಲ. ಜ್ಯೋತಿಷ್ಯ, ಗಿಣಿ ಶಾಸ್ತ್ರ ಹೇಳುವವರದ್ದೂ ಇದೇ ಸಮಸ್ಯೆ ಆಗಿದೆ. ದೆ„ನಂದಿನ ಜೀವನ ನಡೆಸಲು ಕಷ್ಟಕರವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಮುಂದಿನ ಅಧಿವೇಶನಕ್ಕೂ ಮೊದಲು ಅಲೆಮಾರಿ ಜನಾಂಗದ ಗೋಂಧಳಿ ಹಾಗೂ ಬುಡಬುಡಿಕೆ ಸಮುದಾಯದ ಜ್ಯೋತಿಷ್ಯ, ಗಿಣಿ ಶಾಸ್ತ್ರ, ಗುಜರಿ, ಭಾಂಡೆ, ಗುಜರಿ ವ್ಯಾಪಾರ ಮಾಡುವ ಜನರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು. ಸವಿತಾ ಸಮಾಜ ಮತ್ತು ಮಡಿವಾಳ ಸಮಾಜದವರಿಗೆ ನೀಡಿದಂತೆ ಈ ಸಮುದಾಯದ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೂ ತಲಾ 10 ಸಾವಿರ ರೂ.ಜಮೆ ಮಾಡುವ ಮೂಲಕ ಆರ್ಥಿಕವಾಗಿ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಾಕೋಡೆ ರಾಘವೇಂದ್ರ, ವಿನೋದ್‌ ಸಿಂಧೆ, ಪ್ರವೀಣ್‌ ವಾಕೋಡೆ, ಚಿರಂಜೀವಿ, ಚಂದ್ರಶೇಖರ್‌ ಸಿಂಧೆ, ಬಿ.ಧನರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next