Advertisement

ಬಿಎಸ್‌ವೈ ಕೇಂದ್ರದಿಂದ ವೈಜ್ಞಾನಿಕ ಬೆಂಬಲ ಬೆಲೆ ಕೊಡಿಸಲಿ

12:53 PM Dec 11, 2018 | Team Udayavani |

ಸುರಪುರ: ಸಾಲ ಮನ್ನಾಗೆ ಆಗ್ರಹಿಸಿ ಸುರ್ವಣಸೌಧ ಎದುರು ರೈತರೊಂದಿಗೆ ನೀವು ಪ್ರತಿಭಟನೆ ಮಾಡುವ ಅಗತ್ಯವಿಲ್ಲ. ಸ್ವಾಮಿನಾಥನ್‌ ವರದಿಯಂತೆ ಕೇಂದ್ರ ಸರಕಾರದಿಂದ ಭತ್ತ ಬೆಳೆಗಾರರಿಗೆ ಯೋಗ್ಯ ಬೆಂಬಲ ಬೆಲೆ ಕೊಡಿಸಲು ಬಿ.ಎಸ್‌. ಯಡಿಯೂರಪ್ಪನವರು ಮುಂದಾಗಲಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದರು.

Advertisement

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಏರ್ಪಡಿಸಿದ್ದ ಭತ್ತ ಬೆಳೆಗಾರರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಬಗ್ಗೆ ನಿಮಗೆ ನಿಜವಾದ ಕಳಕಳಿ ಇದ್ದರೆ ಕೇಂದ್ರದಲ್ಲಿ ನಿಮ್ಮದೆ ಪಕ್ಷ ಆಡಳಿತದಲ್ಲಿ ಇದೆ. ಪ್ರಧಾನಿ ಮೋದಿ
ಅವರ ಮನಹೊಲಿಸಿ ಬೆಲೆ ಆಯೋಗದ ಶಿಫಾರಸ್ಸಿನಂತೆ ಪ್ರತಿ ಕ್ವಿಂಟಲ್‌ ಭತ್ತಕ್ಕೆ 3,150 ಬೆಂಬಲ ಬೆಲೆ ಕೊಡಿಸಿ, ಇದರಿಂದ ಇಡೀ ರಾಜ್ಯದ ರೈತರು ನಿಮಗೆ ಋಣಿಯಾಗಿರುತ್ತಾರೆ ಎಂದು ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

733 ಕೋಟಿ ರೂ. ಜಿಎಸ್‌ಟಿ ಮತ್ತು 3 ಲಕ್ಷ 49 ಸಾವಿರ ಕಂಪನಿಗಳ ಕೋಟ್ಯಂತರ ರೂ. ಸಾಲ ಮನ್ನಾ ಮಾಡಿದ ಕೇಂದ್ರಕ್ಕೆ ರೈತರ 250 ಕೋಟಿ ಸಾಲ ಮನ್ನಾ ಮಾಡಲು ಮುಂದಾಗದಿರುವುದು ನೋವಿನ ಸಂಗತಿ, ಮೋದಿ ಅವರೆ ನಿಮ್ಮ ಆರ್ಥಿಕ ಲೆಕ್ಕಾಚಾರ ನಮಗೆ ಬೇಕಾಗಿಲ್ಲ. ನಮ್ಮ
ಲೆಕ್ಕಾಚಾರ ಪ್ರಕಾರ ಉತ್ಪಾದನಾ ವೆಚ್ಚ ಮತ್ತು ಶೇ. 50ರಷ್ಟು ಲಾಭಂಶ ಸೇರಿಸಿ ತೊಗರಿಗೆ 7,150 ರೂ. ಭತ್ತಕ್ಕೆ 3150 ರೂ. ಬೆಂಬಲೆ ಬೆಲೆ ಕೊಡಿ ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿ, ಮುಖ್ಯಂಮತ್ರಿ ಅವರ ಮಧ್ಯಸ್ಥಿಕೆ ವಹಿಸಿ ಭತ್ತ ಮತ್ತು ತೊಗರಿ ಬೆಳೆಗಳಿಗೆ ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸಿನಂತೆ ಬೆಂಬಲ ಬೆಲೆ ಕೊಡಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪ್ರಮುಖ
ನಿರ್ಣಯ ಮಂಡಿಸಿದರು.

ನಿರ್ಣಯಗಳು: ಭತ್ತದ ಬೆಳೆ ನೇರವಾಗಿ ಖರೀದಿಸುವ ಮೂಲಕ ದಲ್ಲಾಳಿ ಮತ್ತು ಮಧ್ಯ ವರ್ತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಖರೀದಿ
ಕೇಂದ್ರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರತಿ ಕ್ವಿಂಟಲ್‌ ಭತ್ತಕ್ಕೆ 3,150 ತೊಗರಿಗೆ 7,150 ಬೆಂಬಲ ಬೆಲೆ ನೀಡಬೇಕು ಎಂಬ ಪ್ರಮುಖ ನಿರ್ಣಯ ಮಂಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next