Advertisement

ಹುತಾತ್ಮ ರೈತರ ಕುಟುಂಬಕ್ಕೆ ಪರಿಹಾರ ನೀಡಿ

12:37 PM Nov 21, 2021 | Team Udayavani |

ಕಲಬುರಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟದಲ್ಲಿ ಹುತಾತ್ಮರಾದ ರೈತರ ಶಾಂತಿ ಕೋರಿ ಮತ್ತು ಕುಟುಂಬದವರಿಗೆ ಪರಿಹಾರ ಧನ ಮತ್ತು ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ ಪಕ್ಷದಿಂದ ಶನಿವಾರ ಸಂಜೆ ನಗರದಲ್ಲಿ ಮೇಣದ ಬತ್ತಿ ಜಾಥಾ ನಡೆಸಲಾಯಿತು.

Advertisement

ನಗರದ ಗಾಂಧಿ ಪ್ರತಿಮೆ ಬಳಿ ಪಕ್ಷದ ಮುಖಂಡರು ಮೇಣದ ಬತ್ತಿ ಹಿಡಿದು ಮೃತರ ರೈತರಿಗೆ ಕೋರಿ, ಪ್ರಧಾನಿ ನರೇಂದ್ರ ಮೋದಿಯವರು ರೈತ ವಿರೋಧಿ ಕೃಷಿ ಕಾಯ್ದೆಗನ್ನು ವಾಪಸ್‌ ಪಡೆಯಬೇಕೆಂದು ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ ಮತ್ತು ರೈತ ಸಂಘಟನೆಗಳು ಹೋರಾಟ ನಡೆಸಿದ್ದವು. ಈ ಪ್ರತಿಭಟನೆಗಳಲ್ಲಿ 700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೂ ಮೋದಿ ಈ ಕಾಯ್ದೆಗಳನ್ನು ವಾಪಸ್‌ ಪಡೆಯಲಿಲ್ಲ. ಈ ಮೊದಲೇ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿದ್ದರೆ ರೈತರ ಜೀವಗಳು ಉಳಿಯುತ್ತಿದ್ದವು. ಈ ಎಲ್ಲ ರೈತರ ಸಾವಿಗೆ ಮೋದಿ ಅವರ ನಿರ್ಲಕ್ಷéವೇ ಕಾರಣವಾಗಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಸಂತೋಷ ಬಿಲಗುಂದಿ, ಮಹಾಂತಪ್ಪ ಸಂಗಾವಿ, ನಿಲಕಂಠರಾವ ಮೂಲಗೆ, ಲಿಂಗರಾಜ ತಾರಫೈಲ್‌, ಡಾ| ಕಿರಣ ದೇಖಮುಖ, ಶಿವಾನಂದ ಹೊನಗುಂಟಿ, ಲತಾ ರಾಠೊಡ, ರವಿ ರಾಠೊಡ, ಈರಣ ಝಳಕಿ, ಅಮರ ಶಿರವಾಳ, ಧರ್ಮರಾಜ ಹೇರೂರ, ಶಿವಾನಂದ ತೋರವಿ, ಮಂಜುಳಾ ಪಾಟೀಲ, ಶಕುಂತಲಾ ಹಿರೇಮಠ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next