Advertisement

ಪ್ರಪೋಸ್‌ ಮಾಡೋಕೆ ಐಡಿಯಾ ಕೊಡಿ, ಪ್ಲೀಸ್‌…

06:00 AM Jun 12, 2018 | |

ನಮ್ಮ ತರಗತಿ ಒಂಬತ್ತು ಗಂಟೆಗೆ ಪ್ರಾರಂಭವಾದರೂ, ಕಾಡುವ ಆ ಬಾಲೆಯನ್ನು ನೋಡುವಾಸೆಯಿಂದ ಒಂದು ಗಂಟೆ ಮುಂಚಿತವಾಗಿ ಕ್ಯಾಂಪಸ್‌ನಲ್ಲಿರುತ್ತಿದ್ದೆ. ಸದಾ ಗೆಳೆಯರ ಜೊತೆ ಇರುತ್ತಿದ್ದ ನನಗೆ ಒಂಟಿಯಾಗಿ ಓಡಾಡಬೇಕು ಎನಿಸುತ್ತಿತ್ತು. ತರಗತಿಗೆ ಹೋದರೆ ಯಾರೋ ನನ್ನನ್ನು ಹಿಡಿದು ಹೊರ ನಡೆ ಎಂದು ತಳ್ಳಿದಂತಾಗುತ್ತಿತ್ತು. 

Advertisement

ತರಗತಿ ಪ್ರಾರಂಭವಾಗಲು ಕೆಲವೇ ನಿಮಿಷಗಳು ಬಾಕಿ ಇದ್ದವು. ಅವತ್ಯಾಕೋ ನನಗೆ ತರಗತಿಗೆ ಹೋಗುವ ಬದಲು ಕ್ಯಾಂಪಸ್‌ ಸುತ್ತೋಣ ಅನ್ನಿಸಿತು. ಪುಸ್ತಕದಚೀಲವನ್ನು ಹೆಗಲಿಗೇರಿಸಿ ತರಗತಿಯಿಂದ ಹೊರ ನಡೆದೆ.

ಅದ್ಯಾವ ದೇವರ ಹಾರೈಕೆಯ ಫ‌ಲವೋ ಗೊತ್ತಿಲ್ಲ, ಕಣ್ಣೆದುರಿಗೆ ಒಬ್ಬಳು ಸುಂದರಿ ಎದುರಾದಳು. ಗಳಿಗೆಗೊಮ್ಮೆ ತನ್ನ ಮುಂಗುರುಳ ನೇವರಿಸುತ್ತ, ಗ್ಯಾಲಕ್ಸಿಯಂತೆ ಹೊಳೆಯುವ ಕಂಗಳನ್ನು ತಿರುಗಿಸುತ್ತ,  ಹೈ ಹೀಲ್ಡ್‌ ಪಾದರಕ್ಷೆ ಧರಿಸಿ ನನ್ನ ಮುಂದೆ ನಡೆವಾಗ, ಅವಳ ಪ್ರೀತಿಯ ಬಲೆಗೆ ಬೀಳದೇ ಇರಲಾಗಲಿಲ್ಲ. ತರಗತಿಯಿಂದ ಹೊರಬಂದದ್ದು ಒಳ್ಳೆಯದಾಯಿತು ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಆದರೆ, ಅವಳನ್ನು ಮಾತನಾಡಿಸುವ ಧೈರ್ಯ ಮಾತ್ರ ಬರಲಿಲ್ಲ.

ಅಂದು ರಾತ್ರಿ ಆ ಉದ್ದಜಡೆಯ ಸುಂದರಿ ಅತಿಯಾಗಿ ಕಾಡಿದಳು. ಅಲ್ಲಿಂದ ಪ್ರಾರಭವಾಯಿತು ನೋಡಿ ನನ್ನ ಪ್ರೀತಿ ಎಂಬ ಫ‌ಜೀತಿ. ನಮ್ಮ ತರಗತಿ ಒಂಬತ್ತು ಗಂಟೆಗೆ ಪ್ರಾರಂಭವಾದರೂ, ಕಾಡುವ ಆ ಬಾಲೆಯನ್ನು ನೋಡುವಾಸೆಯಿಂದ ಒಂದು ಗಂಟೆ ಮುಂಚಿತವಾಗಿ ಕ್ಯಾಂಪಸ್‌ನಲ್ಲಿರುತ್ತಿದ್ದೆ. ಸದಾ ಗೆಳೆಯರ ಜೊತೆ ಇರುತ್ತಿದ್ದ ನನಗೆ ಒಂಟಿಯಾಗಿ ಓಡಾಡಬೇಕು ಎನಿಸುತ್ತಿತ್ತು. ತರಗತಿಗೆ ಹೋದರೆ ಯಾರೋ ನನ್ನನ್ನು ಹಿಡಿದು ಹೊರ ನಡೆ ಎಂದು ತಳ್ಳಿದಂತಾಗುತ್ತಿತ್ತು. 

ನನ್ನ ಈ ಪೀಕಲಾಟ ಬಹುಶಃ ಅವಳಿಗೆ ತಿಳಿಯಿತು ಎಂದು ಕಾಣುತ್ತದೆ. ಎದುರಿಗೆ ಬಂದಾಗ ನನ್ನ ನೋಡಿ ಕಿರುನಗೆ ಬೀರಲು ಪ್ರಾರಂಭಿಸಿದಳು. ಆಗೆಲ್ಲಾ ನನಗೆ “ಮಗಾ ಲಡ್ಡು ಬಂದು ಬಾಯಿಗೆ ಬಿತ್ತು’ ಎನಿಸುತ್ತಿತ್ತು. ಕ್ಯಾಂಪಸ್‌ನ ತುಂಬೆಲ್ಲ ನಲಿದಾಡುವ ನವ ಜೋಡಿಗಳನ್ನು ಕಂಡಾಗ, ನನಗೂ ಅವರಂತೆಯೇ ನನ್ನ ಹುಡುಗಿಯ ಕೈ ಹಿಡಿದು ನಲಿಯುವ ಆಸೆ ಮೂಡುತ್ತಿತ್ತು. ಆದರೆ, ಅವಳ ಮುಂದೆ ನಿಂತು “ನಾನು ನಿನ್ನನ್ನು ಪ್ರೀತಿಸ್ತಿದೀನಿ’ ಎಂದು ಹೇಳುವ ಧೈರ್ಯ ಇರಲಿಲ್ಲ. ಹೇಳುವುದು ಬಿಡಿ, ಅವಳ ಎದುರು ನಿಲ್ಲುವ ಶಕ್ತಿಯೂ ಇರಲಿಲ್ಲ ಅನ್ನಿ. ಏಕಾಏಕಿ ಅವಳ ಬಳಿ ಹೋಗಿ, “ಐ ಲವ್‌ ಯೂ’ ಅಂದುಬಿಟ್ಟರೆ, ಅವಳಿಗೆ ಕೋಪ ಬರಬಹುದು, ಭಯವಾಗಬಹುದು, ಅವಳ ಮೃದು ಮನಸ್ಸಿಗೆ ನೋವಾಗಬಹುದು…ನನ್ನನ್ನು ನೋಡಿ ನಸುನಕ್ಕ ಮಾತ್ರಕ್ಕೆ ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಗೆ ತಿಳಿಯಲಿ? ಹೀಗೆಲ್ಲಾ ಅನಿಸಿತು. 

Advertisement

ಆದರೆ, ಅದೆಷ್ಟೇ ಪ್ರಯತ್ನಿಸಿದರೂ, ಅವಳನ್ನು ಮನಸ್ಸಿನಿಂದ ಆಚೆಗೆ ಇಡಲು ಸಾಧ್ಯವಾಗಲೇ ಇಲ್ಲ. ನಾನೀಗ ಪ್ರೀತಿಯಲ್ಲಿ ಬಿದ್ದು ನೀರಿನಿಂದ ಹೊರಬಂದ ಮೀನಿನ ರೀತಿ ವಿಲವಿಲನೆ ಒದ್ದಾಡುತ್ತಿದ್ದೇನೆ. ಅವಳು ನನ್ನನ್ನು ಪ್ರೀತಿಸುತ್ತಿದ್ದಾಳ್ಳೋ, ಇಲ್ಲವೋ ತಿಳಿಯುಲ್ಲ. ಆದರೆ, ಅವಳು ನನ್ನೆದುರಿಗೆ ಬಂದಾಗ ತಪ್ಪದೇ ನನ್ನನ್ನು ನೋಡಿ ಕಿರುನಗೆ ಬೀರುತ್ತಾಳೆ. ಅದಕ್ಕೆ ನಾನಿನ್ನೂ ಯಾವುದೇ ಪ್ರತ್ಯುತ್ತರಕೊಟ್ಟಿಲ್ಲ. 
ಗೆಳೆಯರೇ, ನಿಮ್ಮಲ್ಲಿ ನನ್ನದೊಂದು ಕೋರಿಕೆ; ಈ ನಸುನಗುವ ಮೋಹಿನಿಯ ಎದುರು ನಿಂತು ಪ್ರಪೋಸ್‌ ಮಾಡುವ ಐಡಿಯಾ ಕೊಡಿ, ಪ್ಲೀಸ್‌!

ಗಿರೀಶ ಜಿ.ಆರ್‌ ಗಂಗನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next