Advertisement

ಸ್ವಂತ ಹಣದಲ್ಲಿ ವೃದ್ಧಾಪ್ಯ ವೇತನ ನೀಡುವೆ

03:48 PM Oct 11, 2020 | Suhan S |

ಮುಳಬಾಗಿಲು: ತಾಲೂಕಿನಲ್ಲಿ ಸರ್ಕಾರದಿಂದ ಪ್ರತಿ ತಿಂಗಳು ಬಿಡುಗಡೆಯಾಗುತ್ತಿದ್ದ ವೃದ್ಧಾಪ್ಯ ವೇತನ ಕಾರಣಾಂತರದಿಂದ ಅರ್ಹ ಫ‌ಲಾನುಭವಿಗಳಿಗೆ ಸ್ಥಗಿತಗೊಂಡಿರುವುದರಿಂದ ಸ್ವಂತ ಹಣದಲ್ಲಿ ನೀಡುವುದಾಗಿ ಅಬಕಾರಿ ಸಚಿವ ಎಚ್‌. ನಾಗೇಶ್‌ ಭರವಸೆ ನೀಡಿದರು.

Advertisement

ತಾಲೂಕಿನ ಮುಷ್ಟೂರು ಮತ್ತು ಹೆಬ್ಬಣಿ ಗ್ರಾಪಂಗಳ ಕೇಂದ್ರ ಸ್ಥಾನಗಳಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಸಭೆಗಳಲ್ಲಿ ಸಾರ್ವಜನಿಕರಿಂದ ಅರ್ಜಿಸ್ವೀಕರಿಸಿ ಮಾತನಾಡಿ, ಪ್ರಸ್ತುತ ವೃದ್ಧಾಪ್ಯವೇತನ ಪಡೆಯುತ್ತಿದ್ದವರಲ್ಲಿ ಕೆಲವರಿಗೆ ಕೆಟ್‌ ಚಾಲನ್‌ ಪರಿವರ್ತನೆಯಿಂದಸಮಸ್ಯೆಯಾಗಿದ್ದು ತುಂಬಾ ಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಲು ಸ್ವಂತ ಹಣದಿಂದ ಪ್ರತಿ ಅರ್ಹ ಫ‌ಲಾನುಭವಿಗೆ ಸಾವಿರ ರೂ. ಪ್ರೋತ್ಸಾಹ ಧನ ನೀಡುವೆ ಎಂದು ಭರವಸೆ ನೀಡಿದರು.

ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ: ಅಹವಾಲುಗಳಿಗೆ ಸ್ಪಂದಿಸಿದ ಸಚಿವರು ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಶೀಲಿಸಿ ನೀಗಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಐತಿಹಾಸಿಕ ಹಿನ್ನೆಲೆಯುಳ್ಳ ಏಕಶಿಲಾ ಗಣಪತಿ ನೆಲೆಸಿರುವ ಕುರುಡುಮಲೆ- ಮಾದಘಟ್ಟ ಮಧ್ಯದಲ್ಲಿ ಬರುವ ಬೆಟ್ಟದ ತಪ್ಪಲಿನ ಆನೆಕೆರೆ ಚೆಕ್‌ ಡ್ಯಾಂಅನ್ನು 20ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಪ್ರತಿನಿತ್ಯ ದೇವಾಲಯಕ್ಕೆ ಬರುವ ಭಕ್ತರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿ ಸಲಾಗುವುದು. ಈ ಚೆಕ್‌ಡ್ಯಾಮ್‌ನಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡುವುದಲ್ಲದೇ ರಂಗನತಿಟ್ಟು ಪಕ್ಷಿಧಾಮದಂತೆ ಮಾಡುವ ಆಲೋಚನೆ ಹೊಂದಿರುವೆ ಹಾಗೂ ಈ ಚೆಕ್‌ಡ್ಯಾಮ್‌ನಲ್ಲಿ ಶೇಖ ರಣೆಯಾಗುವ ನೀರಿನಿಂದ ಮುಳ ಬಾಗಿಲು ನಗರದಲ್ಲಿ ನೀರಿನ ಅಭಾವ ನೀಗಿಸಲಾಗುವುದು ಎಂದರು.

ತಾಪಂ ಅಧ್ಯಕ್ಷ ಎ.ವಿ. ಶ್ರೀನಿವಾಸ್‌, ಅಯ್ಯಗಾರಿ ಸೀನಪ್ಪ, ದರ ಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್‌, ಹರಪನಾಯಕನಹಳ್ಳಿ ರಮೇಶ್‌, ಮಂಡಿಕಲ್‌ ಮಂಜು, ಗೊಲ್ಲ ಹಳ್ಳಿ ಜಗದೀಶ್‌, ಕಗ್ಗಿನಹಳ್ಳಿ ಶಂಕರ್‌ರೆಡ್ಡಿ,ಬಟ್ಲಬಾವನಹಳ್ಳಿ ಚಲಪತಿ, ಪಂಚಾಯಿತಿ ವ್ಯಾಪ್ತಿ ಗ್ರಾಪಂ ಮಾಜಿ ಸದಸ್ಯರು, ಮುಖಂಡರು, ಸಾರ್ವಜನಿಕರು ಇದ್ದರು.

ಪದವೀಧರರು, ಅತಿಥಿ ಶಿಕ್ಷಕರಿಗೆ ನ್ಯಾಯ :

Advertisement

ಮುಳಬಾಗಿಲು: ಕೋವಿಡ್ ಸೋಂಕು ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಪದವೀ ಧರರು, ಶಿಕ್ಷಕರು, ಅತಿಥಿ ಶಿಕ್ಷಕರುಮತ್ತು ಉಪನ್ಯಾಸಕರಿಗೆ ತಾವು ಗೆದ್ದ ನಂತರ ಅವರಿಗೆ ನ್ಯಾಯ ಒದಗಿಸುತ್ತೇನೆಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಾಬು ಹೇಳಿದರು.

ತಾಲೂಕಿನ ಕುರುಡುಮಲೆ ವಿನಾಯಕ ಹಾಗೂ ನಗರದ ಶ್ರೀ ಆಂಜ ನೇಯಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕೆ ಚಾಲನೆ ನೀಡಿ ಮಾತನಾಡಿ, ಖಾಸಗಿ ಹಾಗೂ ಅತಿಥಿ ಶಿಕ್ಷಕರು, ಉಪನ್ಯಾಸಕರು ಆರ್ಥಿಕಸಮಸ್ಯೆಯಿಂದಬಳಲುತ್ತಿದ್ದಾರೆ. ಅತಿಥಿ ಶಿಕ್ಷಕರಿಗೆ ವರ್ಷದಲ್ಲಿ ಕೇವಲ 8 ತಿಂಗಳು ಗೌರವಧನ ಬರುತ್ತಿದ್ದು, ಜೀವನ ಸಾಗಿಸಲು ಕಷ್ಟವಾಗುತ್ತಿದೆ. ವರ್ಷ ಪೂರ್ತಿ ಸಂಬಳ ನೀಡಬೇಕು, ಮಹಿಳಾ ಅತಿಥಿ ಶಿಕ್ಷಕಿಯರು ಮತ್ತು ಉಪನ್ಯಾಸರಿಗೆ ಹೆರಿಗೆ ರಜೆಯಲ್ಲೂ ಗೌರವ ಧನ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾ ಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್‌ ಮುಖಂಡರ ಆಶೀರ್ವಾದದಿಂದ ಸ್ಪರ್ಧಿಸುತ್ತಿದ್ದೇನೆ. ಅ.28 ರಂದು ಚುನಾವಣೆ ನಡೆಯಲಿದ್ದು, ಮತದಾರರು ತಮ್ಮನ್ನು ಆಶೀರ್ವದಿಸಿದರೆ ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸು ವುದಾಗಿ ತಿಳಿಸಿದರು.

ಈ ಫ‌ಲಿತಾಂಶವು ಮುಂಬರುವ ವಿಧಾನ ಸಭಾ ಚುನಾವಣೆಗೆದಿಕ್ಸೂಚಿಯಾಗಲಿದೆ ಎಂದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಚಂದ್ರಾ ರೆಡ್ಡಿ, ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ, ತಾಪಂ ಸದಸ್ಯ ಮಾರಪ್ಪ, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಸದಾನಂದ, ನಾಗಭೂಷಣ್‌, ಸಕ್ಕನಹಳ್ಳಿ ವೆಂಕಟೇಶ್‌, ಒಕ್ಕಲಿಗರ ಜನಜಾಗೃತಿ ಸಂಘದ ಅಧ್ಯಕ್ಷ ರಮೇಶ್‌,ಅಶ್ವತ್ಥ್ಗೌಡ,ನಾರಾಯಣಪ್ಪ, ಜನಾರ್ದನ್‌, ಶಿವಣ್ಣ, ತ್ಯಾಗರಾಜ್‌, ರಾಮಕೃಷ್ಣ, ಜಯ್‌ಪಾಲ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next