Advertisement
ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಾಮನ್ವೆಲ್ತ್‌ನಲ್ಲಿ ಪದಕ ಗೆದ್ದವರಿಗೆ ನೀಡುವ ಪ್ರೋತ್ಸಾಹಧನ ತೀರಾ ಕಡಿಮೆ. ನಾನು ಕಳೆದ ಬಾರಿ ಬೆಳ್ಳಿ ಗೆದ್ದಾಗ ಆಗಿನ ಸರಕಾರ 25 ಲಕ್ಷ ರೂ. ನೀಡಿತ್ತು. ಪದಕ ವಿಜೇತರಿಗೆ ಪ್ರೋತ್ಸಾಹಧನ ಹೆಚ್ಚಿಸಿದರೆ ಇನ್ನಷ್ಟು ಸಾಧನೆ ಮಾಡಲು ಉತ್ತೇಜನ ಲಭಿಸುತ್ತದೆ ಎಂದು ಗುರುರಾಜ್ ತಿಳಿಸಿದರು.
ಸದ್ಯ ಚಂಡೀಗಢದಲ್ಲಿ ಭಾರತೀಯ ವಾಯುಸೇನೆಯ ಜೂನಿಯರ್ ವಾರಂಟ್ ಆಫೀಸರ್ ಆಗಿದ್ದೇನೆ. ಪದಕ ವಿಜೇತರಿಗೆ ರಾಜ್ಯದಲ್ಲೇ ಸರಕಾರಿ ಉದ್ಯೋಗ ನೀಡುವ ಪ್ರಸ್ತಾವ ಸರಕಾರದ ಮುಂದಿದೆ. ನನಗೂ ರಾಜ್ಯದಲ್ಲಿಯೇ ಸೂಕ್ತ ಹುದ್ದೆ ನೀಡಿ, ತರಬೇತಿಗೆ ಅವಕಾಶ ಒದಗಿಸಬೇಕು. ಮುಂಬರುವ ಏಷ್ಯನ್ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಪದಕ ಗೆಲ್ಲುವ ವಿಶ್ವಾಸವಿದೆ. ಅದಕ್ಕಾಗಿ ಕಠಿನ ಅಭ್ಯಾಸ, ತರಬೇತಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ನಿವೇಶನಕ್ಕೆ ಪ್ರಸ್ತಾವ
ನಮ್ಮದು ಬಡ ಕುಟುಂಬವಾಗಿದ್ದು, ತಂದೆ ಚಾಲಕ ವೃತ್ತಿ ಮಾಡಿಕೊಂಡು ಕೂಡು ಕುಟುಂಬವನ್ನು ಸಲಹುತ್ತಿದ್ದಾರೆ. ನಮಗೆ ಸ್ವಲ್ಪ ಕೃಷಿ ಭೂಮಿಯಷ್ಟೇ ಇದೆ. ಸರಕಾರ ನಿವೇಶನ ಮಂಜೂರು ಮಾಡಿದರೆ ಮನೆ ಕಟ್ಟಲು ಅನುಕೂಲವಾಗುತ್ತದೆ ಎಂದೂ ಗುರುರಾಜ್ ಪೂಜಾರಿ ಸಿಎಂ ಅವರಿಗೆ ಮನವಿ ಸಲ್ಲಿಸಿದ್ದಾರೆ.
Related Articles
Advertisement