ರಾಯಚೂರು: ನಿಗಮ ಹಾಗೂ ಜೆಸ್ಕಾಂಗಳಲ್ಲಿನ ಶಿಫ್ಟ್ ಕಾರ್ಮಿಕರಿಗೆ ಕನಿಷ್ಟ ವೇತನ, ಪಿಎಫ್, ಇಎಸ್‌ಐ ನೀಡಬೇಕು ಎಂದು ಆಗ್ರಹಿಸಿ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘ ಎಐಯುಟಿಯುಸಿ ಮತ್ತು ಎಐಪಿಎಫ್ ನೇತೃತ್ವದಲ್ಲಿ ಗುರುವಾರ ಪ್ರತಿಭಟಿಸಿದರು.
ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ಅಡಿಯಲ್ಲಿ 33/11 ಕೆವಿ ಸ್ಟೇಶನ್‌ಗಳಲ್ಲಿ ಮತ್ತು ಕೆಪಿಟಿಸಿಎಲ್‌ನ ವಿದ್ಯುತ್ ವಿತರಣಾ ಕೇಂದ್ರ ಸ್ವೀಕೃತಿ ಕೇಂದ್ರಗಳಾದ 100 ಕೆವಿ ಹಾಗೂ 220 ಕೇಂದ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕನಿಷ್ಟ 20-25 ವರ್ಷಗಳಿಂದ ಶಿಫ್ಟ್ ಸಹಾಯಕರು ಹಾಗೂ ಶಿಫ್ಟ್ ಆಪರೇಟರ್‌ಗಳು ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಮಿಕರು ಕೆಲಸದ ವೇಳೆ ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡ ಪ್ರಕರಣಗಳು ಹೆಚ್ಚುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನಾಳೆ ಸಂಜೆ ಪುನೀತ್ ಅಂತ್ಯಕ್ರಿಯೆ : ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ
ಸಂಘಟನೆ ಮುಖಂಡರಾದ ವೀರೇಶ್ ಎನ್.ಎಸ್, ವಿನೋದ ಕುಮಾರ್, ಹನುಮಂತ ರಾವ್ ಜೋಷಿ, ಶಿವರಾಜ, ತಿರುಮಲರಾವ್, ಹನುಮಂತ, ಮಾಯಪ್ಪ, ಮಲ್ಲಿಕಾರ್ಜುನ, ಶಿವಕುಮಾರ್, ನಿತೀಶ ಕುಮಾರ್, ಚಂದ್ರಶೇಖರ್, ವೆಂಕಟೇಶ, ಶರಣಪ್ಪ ಇದ್ದರು.