ನವದೆಹಲಿ: ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಕಡ್ಡಾ ಯಗೊಳಿ ಸುವ ಬಗ್ಗೆ ಕೇಂದ್ರ ಸರ್ಕಾರ, ತಾನು ಕೈಗೊಳ್ಳಲಿರುವ ಮುಂದಿನ ನಿಲುವುಗಳ ಬಗ್ಗೆ ಸೆ. 24ರೊಳಗಾಗಿ ತನಗೆ ಮಾಹಿತಿ ನೀಡಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. ಫೇಸ್‌ಬುಕ್ ಸಂಸ್ಥೆಯ ಅರ್ಜಿ ವಿಚಾರಣೆ ವೇಳೆ ಈ ಸೂಚನೆ ನೀಡಿದ ನ್ಯಾಯಪೀಠ, “ಬಳಕೆದಾ ರರ ಖಾಸಗಿತನ ರಕ್ಷಿ ಸಲು, ಶಾಂತಿ ಕದಡುವ ಸಂದೇಶಗಳನ್ನು ಸೃಷ್ಟಿಸುವ ರನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಹೊಸ ಮಾರ್ಗಬೇಕಿದೆ. ಈ ಎರಡಕ್ಕೂ ನ್ಯಾಯ ಸಲ್ಲಿಸು ವಂಥ ಮಾರ್ಗ ಸೂಚಿ ರೂಪಿಸ ಬೇಕಿದೆ’ ಎಂದಿದೆ.
ಎನ್ನಾರೈಗಳಿಗೆ ತ್ವರಿತ ಆಧಾರ್
ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು (ಎನ್‌ಆರ್‌ಐ), ಭಾರತಕ್ಕೆ ಆಗಮಿಸಿದ ಕೂಡಲೇ ಅವರಿಗೆ ಆಧಾರ್ ಕಾರ್ಡ್ ಸಿಗುವ ಅನುಕೂಲ ಕಲ್ಪಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೊದಲು, ಎನ್‌ಆರ್‌ಐಗಳಿಗೆ ಆಧಾರ್ ಪಡೆಯಲು ಕನಿಷ್ಠ 180 ದಿನಗಳು ಕಾಯಬೇಕಿತ್ತು.