Advertisement

8 ರಾಜ್ಯಗಳಲ್ಲಿನ ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಿ; PIL

03:19 PM Nov 01, 2017 | Sharanya Alva |

ನವದೆಹಲಿ: ದೇಶದ ಸುಮಾರು ಎಂಟು ರಾಜ್ಯಗಳಲ್ಲಿರುವ ಹಿಂದುಗಳಿಗೆ ಅಲ್ಪಸಂಖ್ಯಾತರೆಂಬ ಮಾನ್ಯತೆ ನೀಡಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 8 ರಾಜ್ಯಗಳಲ್ಲಿ ಇರುವ ಹಿಂದುಗಳನ್ನು ಅಲ್ಪಸಂಖ್ಯಾತ ಸ್ಥಾನಮಾನ ಕೊಡಲೇಬೇಕು ಎಂದು ಪಿಐಎಲ್ ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

Advertisement

2011ರ ಜನಗಣತಿ ಪ್ರಕಾರ, ಎಂಟು ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಲಕ್ಷದ್ವೀಪ(2.5%), ಮಿಜೋರಾಂ(2.7%), ನಾಗಲ್ಯಾಂಡ್(ಶೇ.8.7%), ಮೇಘಾಲಯ(11.53%), ಜಮ್ಮು-ಕಾಶ್ಮೀರ (28.44%), ಅರುಣಾಚಲ ಪ್ರದೇಶ(29%), ಮಣಿಪುರ್(31.39%) ಹಾಗೂ ಪಂಜಾಬ್(38.40%) ಎಂದು ಪಿಐಎಲ್ ನಲ್ಲಿ ತಿಳಿಸಲಾಗಿದೆ.

ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟಿ ಕಾಯ್ದೆ ಸೆಕ್ಷನ್ 2(ಸಿ) ಅನ್ವಯ ಈ ರಾಜ್ಯಗಳಲ್ಲಿ ಇರುವ ಹಿಂದುಗಳನ್ನು ಅಲ್ಪಸಂಖ್ಯಾತರು ಎಂಬುದಾಗಿ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯಸರ್ಕಾರವಾಗಲಿ ಘೋಷಿಸಬೇಕು ಎಂದು ಪಿಐಎಲ್ ನಲ್ಲಿ ಹೇಳಲಾಗಿದೆ.

ಈ ಎಂಟು ರಾಜ್ಯಗಳಲ್ಲಿರುವ ಹಿಂದುಗಳು ಸಂವಿಧಾನದ ಪರಿಚ್ಛೇದ 25 ಮತ್ತು 30ರ ಪ್ರಕಾರ ಪ್ರಾಥಮಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆಂದು ಪ್ರತಿಪಾದಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next