Advertisement

ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿ

12:22 PM Oct 18, 2019 | Team Udayavani |

ಗೋಕಾಕ: ಕಲಾರಕೊಪ್ಪ ಗ್ರಾಮದಲ್ಲಿ ನೆರೆಯಿಂದ ನೆಲಸಮವಾದ ಗುಡಿಸಲು ಮನೆಗಳಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಂತ್ರಸ್ತರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು. ಈ ವೇಳೆ ರೈತ ಸಂಘದ ಮುಖಂಡ ಭೀಮಶಿ ಗಡಾದ ಮಾತನಾಡಿ, ನೆರೆ ಬಂದು ಗುಡಿಸಲುಗಳು ಸಂಪೂರ್ಣ ನೆಲಸಮವಾಗಿವೆ. ಪ್ರಾರಂಭಿಕ ಹಂತದ 10,000ರೂ.ಬಿಟ್ಟರೆ ಸಂತ್ರಸ್ತರಿಗೆ ಬೇರೆ ಯಾವ ಸೌಲಭ್ಯಗಳು ದೊರೆತಿಲ್ಲ. ಆದ್ದರಿಂದ ಗ್ರಾಮದ ಗುಡಿಸಲು ವಾಸಿಗಳಿಗೆ ಕಾಯಂ ಮನೆ ಕಟ್ಟಿಸಿಕೊಡಬೇಕೆಂದು ಆಗ್ರಹಿಸಿದರು.

Advertisement

ಗ್ರಾಮದಲ್ಲಿ ಸರ್ವೇ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಅದಕ್ಕಾಗಿ ಮತ್ತೂಮ್ಮೆ ಸರ್ವೇ ಮಾಡಬೇಕು. ಅಲ್ಲದೆ ಸರ್ವೇ ಕಾರ್ಯದಲ್ಲಿಯೂ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಈ ಕುರಿತು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಎಲ್ಲ ನೆರೆ ಪೀಡಿತರಿಗೆ ಸರಕಾರದ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಮಂಜುನಾಥ ಪೂಜೇರಿ, ಭರಮು ಖೇಮಲಾಪೂರ, ಮುತ್ತೇಪ್ಪ ಬಾಗನ್ನವರ, ಮಾರುತಿ ಸನದಿ, ರಾಯಪ್ಪ ಗೌಡಪ್ಪನವರ, ಯಲ್ಲಪ್ಪ ತಿಗಡಿ, ಪ್ರದೀಪ ಪೂಜೇರಿ, ಗೌರವ್ವ ಕುರಿ, ಮುತ್ತೇವ್ವ ದುರದುಂಡಿ, ಶಿವು ಪಾಟೀಲ ಸೇರಿದಂತೆ ಅನೇಕ ಸಂತ್ರಸ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next