ನವದೆಹಲಿ: ಪಾಗಲ್ ಪ್ರೇಮಿಗಳಿಬ್ಬರು ತಮ್ಮ ಗೆಳತಿಯರಿಗೆ ದೀಪಾವಳಿ ಹಬ್ಬದ ಉಡುಗೊರೆ ಕೊಡಲು ಹೋಗಿ ಜೈಲು ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಬಂಧಿತ ಪ್ರೇಮಿಗಳನ್ನು ಶಶಾಂಕ್ ಅಗರವಾಲ್ (32) ಮತ್ತು ಅಮರ್ ಸಿಂಗ್ (29) ಎಂದು ಗುರುತಿಸಲಾಗಿದೆ.
ತಮ್ಮ ಗೆಳತಿಯರಿಗೆ ದುಬಾರಿ ಗಿಫ್ಟ್ ಕೊಡಬೇಕೆಂದು ಅಲೋಚಿಸಿದ ಪ್ರೇಮಿಗಳು ಅದಕ್ಕಾಗಿ ವಿಭಿನ್ನ ಉಪಾಯ ಮಾಡಿದ್ದಾರೆ. ಪಂಜಾಬಿ ಘಾಟ್ ಬಳಿ ಆನ್ ಲೈನ್ ಶಾಪಿಂಗ್ ಪೋರ್ಟಲ್ ಒಂದರ ಡೆಲಿವರಿ ಬಾಯ್ ಪಾರ್ಸೆಲ್ ಒಂದನ್ನು ಕೊಡಲು ಬಂದಿರುವುದನ್ನು ಗಮನಿಸಿದ ಇಬ್ಬರು ಅದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅದರಲ್ಲಿ ಮೊಬೈಲ್ ಫೋನ್ ಸೇರಿದಂತೆ ಅನೇಕ ಉಡುಗೊರೆಗಳಿದ್ದವು.
ಡೆಲಿವರಿ ಬಾಯ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಈ ಹಿಂದೆ ನಾವು ಆನ್ ಲೈನ್ ಶಾಪಿಂಗ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಿಸಿದ್ದು ದೀಪಾವಳಿ ಸಂದರ್ಭದಲ್ಲಿ ಹೆಚ್ಚು ಉಡುಗೊರೆಗಳಿರುವ ಪಾರ್ಸೆಲ್ ಬರುತ್ತಿತ್ತು . ಆ ಕಾರಣದಿಂದಲೇ ನಮ್ಮ ಗೆಳತಿಯರಿಗೆ ಗಿಫ್ಟ್ ನೀಡಲು ದೋಚಿದ್ದೇವೆ ಎಂದು ಬಾಯ್ಬಿಟ್ಟಿದ್ಧಾರೆ.
ಗ್ರಾಹಕರಿಗೆ ಪಾರ್ಸೆಲ್ ಡೆಲಿವರಿ ಮಾಡುವ ಕುರಿತಾಗಿ ಮೊದಲೇ ತಿಳಿದಿದ್ದ ಕಾರಣ, ಅದನ್ನು ದೋಚಿದರೆ ಗೆಳತಿಯರನ್ನು ಓಲೈಕೆ ಮಾಡಿ ಪ್ರೀತಿಸುವಂತೆ ಮಾಡಬಹುದೆಂಬ ಆಲೋಚನೆಯಲ್ಲಿದ್ದರು. ಅದಕ್ಕಾಗಿ ಐಫೋನ್ ಸೇರಿದಂತೆ ದುಬಾರಿ ವಸ್ತುಗಳನ್ನು ಕೊಡುವ ಯೋಜನೆ ರೂಪಿಸಿದ್ದರು. ಆದರೇ ಪೊಲೀಸರು ಅವರ ಆಸೆಗೆ ತಣ್ಣಿರೇರೆಚಿದ್ದಾರೆ.