ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು, ಕಾರ್ಮಿಕರು ಗುರುವಾರ ಜಾಲಿಹಾಳ ಗ್ರಾಮ ಪಂಚಾಯತಿ ಎದುರು ಧರಣಿ ನಡೆಸಿದರು.
Advertisement
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಬಸವರಾಜ ಹಂಚಿನಾಳ, ರೈತರು, ಕೂಲಿಕಾರ್ಮಿಕರು ಗುಳೆ ಹೋಗುವುದನ್ನುತಡೆಯಲು ಮತ್ತು ಗ್ರಾಮದಲ್ಲಿಯೇ ಕೆಲಸ ಒದಗಿಸಲು ಕೇಂದ್ರ ಸರ್ಕಾರ ನರೇಗಾ ಯೋಜನೆ ಜಾರಿ ಮಾಡಿದೆ. ಆದರೆ ಗ್ರಾಪಂ
ಅಧಿಕಾರಿಗಳು ಸ್ವಗ್ರಾಮದಲ್ಲಿ ಕೆಲಸ ನೀಡದೇ, ಬೇರೆ ಗ್ರಾಮಗಳಿಗೆ ಕಳಿಸುತ್ತಿದ್ದು, ಪಿಡಿಒ ಮೇಲೆ ಕ್ರಮ ಕೈಗೊಳ್ಳಬೇಕೆಂದು
ಆಗ್ರಹಿಸಿದರು.
ಜನರ ಜೀವ ಹಿಂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಮಾನ್ವಿ ತಾಲೂಕು ಕಾರ್ಯಾಧ್ಯಕ್ಷ ಪ್ರಹ್ಲಾದ ಮಾಲಿಪಾಟೀಲ ಮಾತನಾಡಿ, ನರೇಗಾ ಯೋಜನೆ ಅಧಿಕಾರಿಗಳು, ಜನಪ್ರತಿನಿಧಿಗಳ ಸ್ವಾರ್ಥಕ್ಕೆ ಬಲಿಯಾಗುತ್ತಿದೆ.
ಕೂಲಿಕಾರ್ಮಿಕರು, ರೈತರನ್ನು ಅಲಕ್ಷಿಸಿದರೆ ಮುಂದೆ ಅನಾಹುತ ಎದುರಿಸಬೇಕಾಗುತ್ತದೆ. ಸ್ವಂತ ಗ್ರಾಮದಲ್ಲಿ ಕೆಲಸ ನೀಡದಿದ್ದರೆ
ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸೂಗುರಯ್ಯ ಸ್ವಾಮಿ, ಮುಖಂಡರಾದ ಖಾದರಸಾಬ, ಅಣ್ಣಪ್ಪ ಹುಡೇದ, ವೀರೇಶ, ವಿರುಪಣ್ಣ, ಮೋಹನರೆಡ್ಡಿ, ಆನಂದ, ದೊಡ್ಡಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.